ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಜಿಯೋಪಿಸಿ ಈಗ ಎಲ್ಲರ ಕೈಗೆಟುಕುವ ರೀತಿಯಲ್ಲಿ ಲಭ್ಯ; ಕಂಪ್ಯೂಂಟಿಂಗ್ ಲೋಕದಲ್ಲಿ ಸಂಚಲನ

admin by admin
October 14, 2026
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
jiopc-price-subscription-plans-india-jio-cloud-computer

jiopc-price-subscription-plans-india-jio-cloud-computer

Share on FacebookShare on TwitterShare on WhatsappShare on Telegram

ಮುಂಬೈ,  ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸುಧಾರಿತ ಕಂಪ್ಯೂಟಿಂಗ್ ಅನ್ನು ಹೆಚ್ಚು ಸುಲಭವಾಗಿ ಲಭ್ಯ ಆಗುವಂತೆ ಮಾಡುವ ತನ್ನ ಬದ್ಧತೆಯನ್ನು ಜಿಯೋಪಿಸಿ (JioPC) ಮೂಲಕ ಜಿಯೋ ಇನ್ನಷ್ಟು ಬಲಪಡಿಸಿದೆ. ಜಿಯೋಪಿಸಿ ಒಂದು “ಕಂಪ್ಯೂಟರ್-ಆ್ಯಸ್-ಎ-ಸಬ್‌ಸ್ಕ್ರಿಪ್ಶನ್” ಸೇವೆ ಆಗಿದ್ದು, ಹೊಸ ಕಂಪ್ಯೂಟರ್‌ಗೆ ಹಣ ಹೂಡದೆಯೇ ಶಕ್ತಿಶಾಲಿ, ಕ್ಲೌಡ್ ಆಧಾರಿತ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಒದಗಿಸುತ್ತದೆ.

ಜಿಯೋಪಿಸಿ ಬಳಕೆದಾರರಿಗೆ ಕ್ಲೌಡ್ ಮೂಲಕ ಆಧುನಿಕ ಕಂಪ್ಯೂಟಿಂಗ್ ಪರಿಸರವನ್ನು ಬಳಸಲು ಅವಕಾಶ ನೀಡುತ್ತದೆ ಮತ್ತು ಅವರ ಅಗತ್ಯಗಳಿಗೆ ತಕ್ಕಂತೆ ಇದನ್ನು ಕಾನ್ಫಿಗರ್ ಮಾಡಬಹುದು. ಇದು ಈಗಿರುವ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನ ಆಯುಷ್ಯವನ್ನು ಹೆಚ್ಚಿಸಬಹುದು, ಜಿಯೋ ಸೆಟ್-ಟಾಪ್ ಬಾಕ್ಸ್ ಮೂಲಕ ಮಾನಿಟರ್ ಅನ್ನು ಪಿಸಿಯಾಗಿ (ಪರ್ಸನಲ್ ಕಂಪ್ಯೂಟರ್) ಪರಿವರ್ತಿಸಬಹುದು, ಅಥವಾ ವೆಬ್ ಬ್ರೌಸರ್ ಮೂಲಕ ಸಂಪೂರ್ಣ ಕಂಪ್ಯೂಟಿಂಗ್ ಪರಿಸರಕ್ಕೆ ಪ್ರವೇಶ ಒದಗಿಸಬಹುದು.

Related posts

instamart-sale-2026-iphone-17-pro-macbook-samsung-offers

ಇನ್‌ಸ್ಟಾಮಾರ್ಟ್‌ನಿಂದ ಭರ್ಜರಿ ಆಫರ್: ಐಫೋನ್ 17 ಪ್ರೊ, ಮ್ಯಾಕ್‌ಬುಕ್, ಸ್ಯಾಮ್ಸಂಗ್‌ ಸೇರಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ!

October 14, 2026
bengaluru-airport-dasara-celebrations-2026

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ವಾರ ಪೂರ್ತಿ ನಡೆಯಲಿದೆ ಕಲೆ, ಸಂಸ್ಕೃತಿಯ ಅನಾವರಣ

October 14, 2026

ಇದು ಕಂಪ್ಯೂಟಿಂಗ್ ಅನುಭವವನ್ನು ಭೌತಿಕ ಸಾಧನದಿಂದ ಬೇರ್ಪಡಿಸುವುದರಿಂದ, ಬಳಕೆದಾರರು ತಮ್ಮ ಜಿಯೋಪಿಸಿ ಪರಿಸರವನ್ನು ವಿವಿಧ ಸ್ಕ್ರೀನ್ ಗಳು ಮತ್ತು ಸಾಧನಗಳಲ್ಲಿ ಬಳಸಬಹುದು. ಜಿಯೋಪಿಸಿ ಯಾವುದೇ ನಿರ್ದಿಷ್ಟ ಸಾಧನಕ್ಕೆ ಸೀಮಿತವಲ್ಲದ ಕಾರಣ, ಬೇರೆ ಬೇರೆ ಸ್ಥಳಗಳು ಅಥವಾ ಸಾಧನಗಳನ್ನು ಬಳಸುವ ವಿದ್ಯಾರ್ಥಿಗಳು ಮತ್ತು ಇತರ ಬಳಕೆದಾರರಿಗೆ ಇದು ಅನುಕೂಲಕರವಾಗಿದೆ. ಖಾತೆಯನ್ನು ಈಗಿರುವ ಕಂಪ್ಯೂಟರ್, ಜಿಯೋ ಸೆಟ್-ಟಾಪ್ ಬಾಕ್ಸ್‌ಗೆ ಸಂಪರ್ಕಿಸಿದ ಟೆಲಿವಿಷನ್ ಅಥವಾ ಬೇರೊಂದು ಮಾನಿಟರ್‌ನಿಂದ ಪ್ರವೇಶಿಸಬಹುದು.

ಮುಖ್ಯವಾಗಿ, ಜಿಯೋಪಿಸಿ ಕೇವಲ ಜಿಯೋ ಬಳಕೆದಾರರಿಗೆ ಮಾತ್ರ ಸೀಮಿತವಲ್ಲ. ಜಿಯೋ ಅಲ್ಲದ ಬಳಕೆದಾರರು ಸಕ್ರಿಯ ಜಿಯೋಪಿಸಿ ಸಬ್ ಸ್ಕ್ರಿಪ್ಷನ್ ಹೊಂದಿದ್ದರೆ, ಯಾವುದೇ ಬ್ರಾಡ್‌ಬ್ಯಾಂಡ್ ಅಥವಾ ಇಂಟರ್ನೆಟ್ ಸಂಪರ್ಕದ ಮೂಲಕ ಬ್ರೌಸರ್‌ನಲ್ಲಿ ಜಿಯೋಪಿಸಿ ಬಳಸಬಹುದು.

ವಿದ್ಯಾರ್ಥಿಗಳಿಗೆ, ಹೈಬ್ರಿಡ್ ತರಗತಿಗಳು ಮತ್ತು ಶೈಕ್ಷಣಿಕ ಅಪ್ಲಿಕೇಷನ್‌ಗಳಿಂದ ಹಿಡಿದು ಕೋಡಿಂಗ್, ವಿನ್ಯಾಸ, ಸಂಶೋಧನೆ ಮತ್ತು ಜನರೇಟಿವ್ ಎಐ ವರೆಗಿನ ಎಲ್ಲದಕ್ಕೂ ಬೇಕಾದ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಜಿಯೋಪಿಸಿ ಒದಗಿಸಬಲ್ಲದು. ಶೈಕ್ಷಣಿಕ ಕೆಲಸದ ಹೊರೆ ಹೆಚ್ಚೆಚ್ಚು ತಂತ್ರಜ್ಞಾನ-ಕೇಂದ್ರಿತವಾಗುತ್ತಿರುವಾಗ, ಈಗಿರುವ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಅನ್ನು ಬದಲಾಯಿಸದೆಯೇ ಹೆಚ್ಚುವರಿ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಪಡೆಯಲು ಜಿಯೋಪಿಸಿ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ.

ಈ ಸೇವೆಯನ್ನು ಕಾನ್ಫಿಗರ್ ಮಾಡಬಹುದಾದ ಕಂಪ್ಯೂಟಿಂಗ್ ಮಾದರಿಯ ಆಧಾರದ ಮೇಲೆ ರೂಪಿಸಲಾಗಿದ್ದು, ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದೊಡ್ಡ ಮೊತ್ತದ ಮುಂಗಡ ಹೂಡಿಕೆ ಮಾಡುವ ಬದಲು, ಬಳಕೆದಾರರು ಚಂದಾ ಆಧಾರಿತ ಯೋಜನೆಗಳ ಮೂಲಕ ವಿಶ್ವಾಸಾರ್ಹ ಕ್ಲೌಡ್ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಪಡೆಯಬಹುದು. ಈ “ಬಳಸಿದಷ್ಟು ಪಾವತಿಸಿ” ವಿಧಾನವು ವಿದ್ಯಾರ್ಥಿಗಳು, ಕುಟುಂಬಗಳು ಮತ್ತು ಸಂಸ್ಥೆಗಳಿಗೆ ಹೆಚ್ಚಿನ ಹೊಂದಾಣಿಕೆಯನ್ನು ನೀಡುತ್ತದೆ.

ಮಾನ್ಯತೆ ಅವಧಿ — JioPC (8GB RAM / 500GB ಸ್ಟೋರೇಜ್) — JioPC Ultra (16GB RAM / 1TB ಸ್ಟೋರೇಜ್)
2 ತಿಂಗಳು — ₹1,000 — ₹1,200
5 ತಿಂಗಳು —₹2,000 — ₹2,500
10+2 ತಿಂಗಳು — ₹4,000 — ₹5,000

ಜಿಯೋಹೋಮ್ ಗ್ರಾಹಕರಿಗೆ ಈ ಕೊಡುಗೆಯೊಂದಿಗೆ ಹೆಚ್ಚುವರಿ ಪ್ರಯೋಜನವೂ ಇದೆ. ತಿಂಗಳಿಗೆ ₹100 ಮೌಲ್ಯದ ಜಿಯೋ ಹೋಮ್ ವೋಚರ್ ಅನ್ನು ಬ್ರಾಡ್‌ಬ್ಯಾಂಡ್ ಬಿಲ್‌ಗೆ ಬಳಸಿಕೊಳ್ಳಬಹುದು, ಇದರಿಂದ ಅರ್ಹ ಬಳಕೆದಾರರಿಗೆ ಜಿಯೋಪಿಸಿ ಮಾಸಿಕ ವೆಚ್ಚ ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.

ಜಿಯೋಪಿಸಿ ಉಬುಂಟು (ಲಿನಕ್ಸ್) ಇಂಟರ್ಫೇಸ್, ಲಿಬ್ರೆ ಆಫೀಸ್ ಮತ್ತು ಮೈಕ್ರೋಸಾಫ್ಟ್ 365 ನಂತಹ ಆನ್‌ಲೈನ್ ಅಪ್ಲಿಕೇಷನ್‌ಗಳನ್ನು ಬಳಸಲು ವೆಬ್ ಬ್ರೌಸರ್‌ಗಳೊಂದಿಗೆ ಬರುತ್ತದೆ. ಇದು ಅಡೋಬ್ ಎಕ್ಸ್‌ಪ್ರೆಸ್‌ನಂತಹ ಸಾಧನಗಳನ್ನೂ ಬೆಂಬಲಿಸುತ್ತದೆ. ಫೈಲ್‌ಗಳನ್ನು ಸಾಧನದಲ್ಲೇ ಸಂಗ್ರಹಿಸುವ ಸಾಂಪ್ರದಾಯಿಕ ಪಿಸಿಯಂತಲ್ಲದೆ, ಜಿಯೋಪಿಸಿ ಡೇಟಾವನ್ನು ವಿಪತ್ತು ಚೇತರಿಕೆ (ಡಿಸಾಸ್ಟರ್ ರಿಕವರಿ) ವ್ಯವಸ್ಥೆಯುಳ್ಳ ಎಂಟರ್‌ಪ್ರೈಸ್-ದರ್ಜೆಯ ಕ್ಲೌಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸುತ್ತದೆ.

ಹೆಚ್ಚು ತಿಳಿಯಲು ಅಥವಾ ಸಬ್ ಸ್ಕ್ರಿಪ್ಷನ್ ಗಾಗಿ ಭೇಟಿ ನೀಡಿ: https://www.jio.com/jiopc/pwa/

Tags: #JioPC #JioPCPrice #JioPCUltra #JioCloudComputer #CloudComputing #JioSubscription #Jio #RelianceJio #ಜಿಯೋಪಿಸಿ #ಜಿಯೋಪಿಸಿಬೆಲೆ #ಕ್ಲೌಡ್ಕಂಪ್ಯೂಟಿಂಗ್ #ಜಿಯೋತಂತ್ರಜ್ಞಾನ #saakshatv
ShareTweetSendShare
Join us on:

Related Posts

instamart-sale-2026-iphone-17-pro-macbook-samsung-offers

ಇನ್‌ಸ್ಟಾಮಾರ್ಟ್‌ನಿಂದ ಭರ್ಜರಿ ಆಫರ್: ಐಫೋನ್ 17 ಪ್ರೊ, ಮ್ಯಾಕ್‌ಬುಕ್, ಸ್ಯಾಮ್ಸಂಗ್‌ ಸೇರಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ!

by admin
October 14, 2026
0

ಹಬ್ಬದ ಸೀಸನ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಇಯರ್‌ಬಡ್ಸ್ ಖರೀದಿಸುವ ಪ್ಲಾನ್‌ನಲ್ಲಿದ್ದೀರಾ? ಹಾಗಾದರೆ ನಿಮಗೊಂದು ಸಿಹಿಸುದ್ದಿ. ಪ್ರಸಿದ್ಧ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್' ತನ್ನ ವರ್ಷದ ಅತಿದೊಡ್ಡ...

bengaluru-airport-dasara-celebrations-2026

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ವಾರ ಪೂರ್ತಿ ನಡೆಯಲಿದೆ ಕಲೆ, ಸಂಸ್ಕೃತಿಯ ಅನಾವರಣ

by admin
October 14, 2026
0

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಹೆಮ್ಮೆಯ ನಾಡಹಬ್ಬ ದಸರಾವನ್ನು ಅಕ್ಟೋಬರ್ 12ರಿಂದ 17ರವರೆಗೆ ವಾರಪೂರ್ತಿ ಸಾಂಸ್ಕೃತಿಕ ಸಂಭ್ರಮದೊಂದಿಗೆ ಆಚರಿಸಲು ಸಜ್ಜಾಗಿದೆ. ಬೆಂಗಳೂರಿನ ಹೆಬ್ಬಾಗಿಲಾಗಿರುವ ನಿಲ್ದಾಣವು,...

ai-dating-india-survey-aisle-dating-app

ಪ್ರೀತಿ, ಪ್ರೇಮ, ಡೇಟಿಂಗ್‌ಗೂ ಈಗ ‘ಎಐʼ! ಸಮೀಕ್ಷೆಯಲ್ಲಿ ಬಯಲಾಯ್ತು ಯುವಜನತೆಯ ಹೊಸ ಟ್ರೆಂಡ್

by admin
October 14, 2026
0

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಡೇಟಿಂಗ್ ಮಾಡೋದು ಅಷ್ಟೇನೂ ಸುಲಭವಲ್ಲ. ಒಂದು ತಪ್ಪು ಮೆಸೇಜ್ ಕಳುಹಿಸಿದರೂ ಬ್ರೇಕಪ್ ಗ್ಯಾರಂಟಿ. ಹೀಗಾಗಿ ಭಾರತದ ಸಿಂಗಲ್ಸ್, ಪ್ರೀತಿಯಲ್ಲಿ ಎಡವಟ್ಟಾಗದಂತೆ ತಡೆಯಲು...

jio-ai-glasses-upi-payments-live-translation-cricket-commentary-imc-2026

ಜಿಯೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗ್ಲಾಸ್‌ಗಳಲ್ಲಿ ನೇರ ಕ್ರಿಕೆಟ್ ವೀಕ್ಷಕ ವಿವರಣೆ

by admin
October 14, 2026
0

ನೋಡಿ, ಮಾತನಾಡಿ, ಪಾವತಿಸಿ! ಜಿಯೋ ಎಐ ಗ್ಲಾಸ್‌ಗಳಿಂದ ನಿಮ್ಮ ಯುಪಿಐ ಪಾವತಿ ನವದೆಹಲಿ,  ನಿಮ್ಮ ಫೋನ್ ಹೊರ ತೆಗೆಯದೆಯೇ ಅಂಗಡಿಯಲ್ಲಿ ಪಾವತಿ ಮಾಡಲು ಸಾಧ್ಯವಾದರೆ ಹೇಗಿರುತ್ತದೆ? ಕ್ಯೂಆರ್...

jio-giga-mimo-radio-6g-technology-india-mobile-congress-2026

ಇಂಡಿಯಾ ಮೊಬೈಲ್ ಕಾಂಗ್ರೆಸ್ 2026ರಲ್ಲಿ 6ಜಿ ತಂತ್ರಜ್ಞಾನಕ್ಕಾಗಿ ಗಿಗಾ MIMO ರೇಡಿಯೋ ಪ್ರದರ್ಶಿಸಿದ ಜಿಯೋ

by admin
October 14, 2026
0

  ನವದೆಹಲಿ,  ಭಾರತದ ಪ್ರಮುಖ ದೂರಸಂಪರ್ಕ ಸಂಸ್ಥೆ ಜಿಯೋ 6ಜಿ ಯುಗಕ್ಕೆ ಸಜ್ಜಾಗುತ್ತಿದೆ. 2030ರಲ್ಲಿ ಜಾಗತಿಕ ಮಾನದಂಡಗಳು ಅಂತಿಮಗೊಂಡಾಗ, 6ಜಿ ಅನ್ನು ಮೊದಲು ಜಾರಿಗೆ ತರುವ ದೇಶಗಳಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram