ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ Kalaburagi saaksha tv
ಕಲಬುರಗಿ : ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿಯ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ.
26 ವರ್ಷದ ಮಹಮ್ಮದ್ ರಶೀದ್ ಕೊಲೆಯಾದ ಯುವಕನಾಗಿದ್ದಾನೆ.
ಪುಡಿರೌಡಿ ಲಂಗ್ಡಾ ಸಲೀಂ ಕೊಲೆಗೈದ ಆರೋಪಿ. ಸದ್ಯ ಪೊಲೀಸರು ಲಂಗ್ಡಾ ಸಲೀಂನನ್ನು ಬಂದಿದ್ದಾರೆ.
ನಿನ್ನೆ ರಾತ್ರಿ ರಶೀದ್ ಹಾಗೂ ಸಲೀಂ ಮಧ್ಯೆ ಜಗಳವಾಗಿದೆ.
ಇದು ವಿಕೋಪಕ್ಕೆ ತಿರುಗಿ ಸಲೀ ತನ್ನ ಬಳಿ ಇದ್ದ ಚಾಕುವಿನಿಂದ ರಶೀದ್ ಗೆ ಇರಿದು ಕೊಲೆ ಮಾಡಿದ್ದಾನೆ.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ









