ಭಾರತೀಯ ಮೂಲದ ದಂತವೈದ್ಯ ಕುವೈತ್ ನಲ್ಲಿ ಕೊರೋನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಕುವೈತ್ ನ ಜಬೆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 54 ವರ್ಷದ ವಾಸುದೇವ ರಾವ್ ಅವರು ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಕುವೈತ್ ನಲ್ಲಿ ಕಳೆದ 15 ವರ್ಷದಿಂದ ವಾಸವಾಗಿದ್ದ ವಾಸುದೇವ ರಾವ್ ಸರ್ಕಾರಿ ಸ್ವಾಮ್ಯದ ಕಂಪನಿಯಾದ ಕುವೈತ್ ಪೆಟ್ರೋಲಿಯಂ ಕಾರ್ಪೊರೇಶನ್ ನ ಅಂಗಸಂಸ್ಥೆಯಾದ ಕುವೈತ್ ಆಯಿಲ್ ಕಂಪನಿಯಲ್ಲಿ ಎಂಡೋಡೆಂಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಭಾರತೀಯ ದಂತ ವೈದ್ಯ ಸಂಘದ ಸದಸ್ಯರು ಆಗಿದ್ದ ರಾವ್ ಅವರ ಅಗಲುವಿಕೆಗೆ ಸಂಸ್ಥೆ ಸಂತಾಪ ಸೂಚಿಸಿದೆ.
ವಾಸುದೇವ ರಾವ್ ರವರು ಕುವೈತ್ ನಲ್ಲಿ ವೈದ್ಯಕೀಯ ವಲಯಕ್ಕೆ ಸಂಬಂಧ ಪಟ್ಟಂತೆ ಕೊರೊನಾ ಸೋಂಕಿಗೆ ಬಲಿಯಾದ ಎರಡನೆಯವರಾಗಿದ್ದು, ಈ ಮೊದಲು ಈಜಿಪ್ಟ್ ನ ಇ.ಎನ್.ಟಿ ತಜ್ಞ ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಶುಕ್ರವಾರ ಈಜಿಪ್ಟ್ ನ ಇ.ಎನ್.ಟಿ ತಜ್ಞ ತಾರೆಕ್ ಹುಸೇನ್ ಮೊಖೈಮರ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು. 62 ವರ್ಷದ ತಾರೆಕ್ ಹುಸೇನ್ ಕುವೈತ್ ನಲ್ಲಿ 20 ಕ್ಕೂ ಹೆಚ್ಚು ವರ್ಷಗಳ ಕಾಲ ಇ.ಎನ್.ಟಿ ತಜ್ಞರಾಗಿ ಸೇವೆ ಸಲ್ಲಿಸಿದರು.
ಈಗಾಗಲೇ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ವಾಪಸು ಕರೆತರುವ ಕಾರ್ಯವನ್ನು ಸರ್ಕಾರದ ವಂದೇ ಭಾರತ್ ಮಿಷನ್ ಮಾಡುತ್ತಿದ್ದು, ಒಟ್ಟು 171 ಜನರು ಭಾನುವಾರ ಕುವೈತ್ ನಿಂದ ಚೆನ್ನೈಗೆ ಆಗಮಿಸಿದ್ದಾರೆ. ಕುವೈತ್ ನಲ್ಲಿ ಕೊರೊನಾ ಮಹಾಮಾರಿಗೆ 58 ಜನ ಬಲಿಯಾಗಿದ್ದು, 8,688 ಮಂದಿ ಸೋಂಕು ಪೀಡಿತರಾಗಿದ್ದಾರೆ.
ನನಗೊಂದು ಇಲಾಖೆ ಕೊಟ್ಟು ನೋಡಿ ಕೆಲಸ ಮಾಡಿ ತೋರಿಸ್ತೀನಿ: ಮಂತ್ರಿಸ್ಥಾನದ ಆಸೆ ಬಿಚ್ಚಿಟ್ಟ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ: ಸದಾ ತಮ್ಮ ವಿಭಿನ್ನ ಶೈಲಿಯ ಮಾತುಗಳಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಈಗ ಬಹಿರಂಗವಾಗಿಯೇ ಮಂತ್ರಿಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸುಧಾರಣಾ ಉಪ ಸಮಿತಿಗೆ...








