ವಿಧಾನ ಪರಿಷತ್ ಫೈಟ್ –ಕೆಜಿಎಫ್ ಬಾಬು ಗೆ ಸೋಲು, ಕೈ ಮಣಿಸಿದ ಗೋಪಿನಾಥ್ ರೆಡ್ಡಿ…
ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಬೆಂಗಳೂರು ನಗರ ಪರಿಷತ್ ಚುನಾವಣೆ ಫಲಿತಾಂಶ ಹೊರಬಂದಿದೆ. ಕೆಜಿಎಫ್ ಬಾಬು ಎಂದು ಹೆಸರು ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಶರೀಫ್ ಸೋಲು ಕಂಡಿದ್ದಾರೆ.
ಕೆಜಿಎಫ್ ಬಾಬು ವಿರುದ್ಧ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಕುರಿತು ಗೋಪಿನಾಥ್ ಮಾತನಾಡಿ 1200ಕ್ಕೂ ಹೆಚ್ಚು ಮತಗಳು ಬಂದಿವೆ, ಇದು ವೈಯಕ್ತಿಕ ಗೆಲುವಲ್ಲ ಪಕ್ಷದ ಗೆಲುವು, ಭೈರತಿ ಬಸವರಾಜ್ ಅರವಿಂದ ಲಿಂಭಾವಳಿ ಮತ್ತು ಸೋಮಶೇಖರ್ ಅವರ ಅಪಾರ ಪರಿಶ್ರಮದಿಂದ ಗೆಲವು ದಕ್ಕಿದೆ ಎಂದು ಹೇಳಿದರು…
ಒಟ್ಟು 2070 ಮತಗಳು ಚಲಾವಣೆಯಾಗಿದ್ದರೆ, 13 ಮತಗಳು ಅಸಿಂಧುವಾಗಿದ್ದವು ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ 1227 ಮತ ಪಡೆದರೆ ಕೆಜಿಎಪ್ ಬಾಬು ಖ್ಯಾತಿಯ ಕಾಂಗ್ರೇಸ್ ಅಭ್ಯರ್ಥಿ 830 ಮತಗಳನ್ನ ಪಡೆಯಲಷ್ಟೇ ಶಕ್ತರಾದರು….








