ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ‘ಬಾಯ್ಸ್ ಲಾಕರ್ ರೂಂ’ ಪ್ರಕರಣದ ತನಿಖೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ವಿದ್ಯಾರ್ಥಿಯ ಹೆಸರಲ್ಲಿ ಖಾತೆ ತೆರೆದು ಚಾಟ್ ನಡೆಸಿದ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ.
ಸ್ನಾಪ್ ಚಾಟ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ಸಿದ್ಧಾರ್ಥ್ ಹೆಸರಿನಲ್ಲಿ ಖಾತೆ ತೆರೆದು ಸಾಮೂಹಿಕ ಅತ್ಯಾಚಾರದ ಬಗ್ಗೆ ಚರ್ಚೆ ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ತನ್ನ ಗೆಳೆಯನ ನಡತೆಯನ್ನು ಪರೀಕ್ಷಿಸಲು ವಿದ್ಯಾರ್ಥಿನಿಯೊಬ್ಬಳು ‘ಸಿದ್ಧಾರ್ಥ್’ ಹೆಸರಿನಲ್ಲಿ ಗ್ಯಾಂಗ್ ರೇಪ್ ನಡೆಸುವ ಬಗ್ಗೆ ಚರ್ಚೆ ನಡೆಸಿದ್ದಾಳೆ. ಅದಕ್ಕೆ ವಿದ್ಯಾರ್ಥಿ ನಾನು ಆ ರೀತಿಯ ಗ್ಯಾಂಗ್ ರೇಪ್ ಕೃತ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ, ‘ಸಿದ್ದಾರ್ಥ್’ ಹೆಸರಿನ ಆಕೆಯ ಜೊತೆ ಚಾಟ್ ಮಾಡುವುದನ್ನು ನಿಲ್ಲಿಸಿದ್ದಾನೆ. ನಂತರ ಚಾಟ್ ನಲ್ಲಿ ನಡೆದ ಸಂಭಾಷಣೆಯ ಸ್ಕ್ರೀನ್ ಶಾಟ್ ಅನ್ನು ಸ್ನೇಹಿತರು ಇರುವ ಗ್ರೂಪಿನೊಂದಿಗೆ ಹಂಚಿಕೊಂಡಿದ್ದಾನೆ. ಅಷ್ಟೇ ಅಲ್ಲ ಸಿದ್ಧಾರ್ಥ್ ಹೆಸರಿನಲ್ಲಿ ತನ್ನನ್ನು ಪರೀಕ್ಷಿಸಿದ ವಿದ್ಯಾರ್ಥಿನಿಗೂ ಕಳುಹಿಸಿದ್ದಾನೆ. ಸ್ನೇಹಿತರ ಗ್ರೂಪಿನಲ್ಲಿದ್ದ ಒಬ್ಬಾತ ಆ ಸ್ಕ್ರೀನ್ ಶಾಟ್ ಅನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಅದು ವೈರಲ್ ಆಗಿ ದೇಶಾದ್ಯಂತ ಬಿರುಗಾಳಿಯನ್ನು ಎಬ್ಬಿಸಿತು. ಬಾಯ್ಸ್ ಲಾಕರ್ ಗ್ರೂಪಿನಲ್ಲಿ 27 ಮಂದಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿದ್ದರೂ, ತನಿಖೆಯ ವೇಳೆ 27 ವಿದ್ಯಾರ್ಥಿಗಳ ಪೈಕಿ ಯಾರು ಕೂಡ ಸ್ನಾಪ್ ಚಾಟ್ ನಲ್ಲಿ ಭಾಗವಹಿಸಿಲ್ಲ ಎಂಬ ವಿಚಾರ ತಿಳಿದು ಬಂದಿದೆ. ಬಾಯ್ಸ್ ಲಾಕರ್ ರೂಂ ಗ್ರೂಪಿನ ಇನ್ ಸ್ಟಾಗ್ರಾಮ್ ಅಡ್ಮಿನ್ ವ್ಯಕ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಆತ ಕೂಡ ವಿದ್ಯಾರ್ಥಿಯಾಗಿದ್ದಾನೆ. ಗ್ರೂಪಿನಲ್ಲಿದ್ದ 27 ಮಂದಿಯಲ್ಲಿ 24 ಮಂದಿಯನ್ನು ತನಿಖೆ ಒಳಪಡಿಸಲಾಗಿದ್ದು, ಇಬ್ಬರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.
ವಿದ್ಯಾರ್ಥಿನಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆಕೆ ತಾನು ತನ್ನ ಗೆಳೆಯನ ನಡವಳಿಕೆ ಹೇಗಿದೆ, ಆತನ ಪ್ರತಿಕ್ರಿಯೆ ಏನಿರಬಹುದು ಎಂದು ತಿಳಿಯಲು ಸಿದ್ಧಾರ್ಥ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ತರಗತಿ ವಿದ್ಯಾರ್ಥಿನಿಯರ ಸಾಮೂಹಿಕ ಅತ್ಯಾಚಾರ ನಡೆಸುವ ಬಗ್ಗೆ ಚರ್ಚೆ ನಡೆಸಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ದೆಹಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ಓದುತ್ತಿದ್ದಾರೆ.
ಪೊಲೀಸರು ಸ್ನಾಪ್ ಚಾಟ್ ನಲ್ಲಿ ನಕಲಿ ಖಾತೆ ತೆರೆದು ಚಾಟ್ ನಡೆಸಿದ ಬಗ್ಗೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ನಕಲಿ ಖಾತೆ ತೆರೆಯುವುದು ತಪ್ಪಾಗಿದ್ದರೂ ಆಕೆಯ ಉದ್ದೇಶ ಸ್ನೇಹಿತನನ್ನು ಪರೀಕ್ಷೆ ಮಾಡುವುದು ಆಗಿದ್ದರಿಂದ ಪ್ರಕರಣ ದಾಖಲಿಸುವುದಿಲ್ಲ ಎಂದು ದೆಹಲಿಯ ಸೈಬರ್ ಸೆಲ್ ಡಿಸಿಪಿ ಅನ್ವೇಶ್ ರಾಯ್ ಹೇಳಿದ್ದಾರೆ.
ಹೆದರ್ಕೋಬೇಡ ಎಷ್ಟು ಕೊಡ್ತಾರೆ ಹೇಳು,ಅಧಿಕಾರದ ಬಿಗುಮಾನ ಬದಿಗಿಟ್ಟು ಈರುಳ್ಳಿ ಮೂಟೆ ಮೇಲೆ ಕುಳಿತ ಡಿಕೆಶಿ: ಅನ್ನದಾತನ ಕಣ್ಣೀರಿಗೆ ಕರಗಿದ ನಾಯಕ
ಬೆಂಗಳೂರು: ಅಧಿಕಾರದ ಬಿಗುಮಾನವನ್ನು ಬದಿಗಿಟ್ಟು, ಜನಸಾಮಾನ್ಯರಂತೆ ಈರುಳ್ಳಿ ಮೂಟೆಗಳ ಮೇಲೆ ಕುಳಿತು ರೈತರ ಮತ್ತು ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲರ...








