ವಿಶ್ವದಲ್ಲಿ ಜೈಲುವಾಸದಲ್ಲಿದ್ದಾರೆ ಒಟ್ಟು 488 ಜನ : ಈ ವಿಚಾರದಲ್ಲಿ ಚೀನಾ ನಂಬರ್.1
ನವದೆಹಲಿ : ವಿಶ್ವಾದ್ಯಂತ ಕೆಲ ಪತ್ರಕರ್ತರು ನೈಜ ಘಟನೆ ಬಗ್ಗೆ ವರದಿ ಮಾಡಿ ಮತ್ತೊಬ್ಬರ ಪ್ರಭಾವಕ್ಕೆ ಒಳಗಾಗಿಯೋ , ಸರ್ಕಾರದ ಪ್ರಭಾವಕ್ಕೆ ಒಳಗಾಗಿಯೋ , ಅಥವ ಇನ್ನೂ ಕೆಲವರು ತಪ್ಪಾಗಿ ವರದಿ ಬಿತ್ತರಿಸಿಯೋ ಹೀಗೆ ನಾನಾ ಕಾರಣಗಳಿಂದ ಜೈಲು ಸೇತಿದ್ದಾರೆ.. ಹೀಗೆ ವಿಶ್ವದಲ್ಲಿ 488 ಪತ್ರಕರ್ತರು ಜೈಲು ವಾಸ ಅನುಭವಿಸುತ್ತಿದ್ದಾರೆ. ಅಲ್ಲದೇ 46 ಪತ್ರಕರ್ತರು ಹತ್ಯೆಯಾಗಿದ್ದಾರೆ ಎಂಬ ಆಘಾತಕಾರಿ ವಿಚಾರವನ್ನ ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ (RSF) ಬಿಡುಗಡೆ ಮಾಡಿರುವ ವರದಿಯಿಂದ ಬೆಳಕಿಗೆ ಬಂದಿದೆ.
ಆದ್ರೆ ಈ ವಿಚಾರದಲ್ಲಿ ಚೀನಾ ನಂಬರ್ ಸ್ಥಾನದಲ್ಲಿದೆ.. ಹೌದು.. ಅತಿ ಹೆಚ್ಚು ಪತ್ರಕರ್ತರನ್ನು ಜೈಲಿಗೆ ಹಾಕಿರುವ ಚೀನಾ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಚೀನಾ ಒಂದ್ರಲ್ಲೇ 127 ಪತ್ರಕರ್ತರು ಸೆರೆವಾಸ ಅನುಭವಿಸುತ್ತಿದ್ದಾರೆ. ಅದ್ರಲ್ಲೂ ಚೀನಾದಲ್ಲಿ ಕೋವಿಡ್ ಪರಿಸ್ಥಿತಿ ಬಿತ್ತರಿಸಿದ ಎಷ್ಟೋ ಜನ ಪತ್ರಕರ್ತರು ಜೈಲು ಸೇರಿದ್ದರೂ ನಾಪತ್ತೆಯಾಗಿದ್ದಾರೆ. ಅಲ್ಲಿ ಪತ್ರಕರ್ತರ ಸ್ಥಿತಿ ಎಷ್ಟು ಶೋಚನೀಯ ಎನ್ನುವುದು ಎಲ್ರಿಗೂ ಗೊತ್ತಿರೋದೇ…
ಅಂದ್ಹಾಗೆ ಕೇವಲ ವರದಿಗಳ ಪ್ರಕಾರ 127 ಆದ್ರೆ… ಇದಕ್ಕಿಂತ ದುಪ್ಪಟ್ಟು ಪತ್ರಕರ್ತರು ಜೈಲು ಸೇರಿದ್ದಾರೆ.. ಅವರಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ ಅನ್ನೋ ಸತ್ಯ ಜಗತ್ತಿಗೆ ಗೊತ್ತಿಲದೇ ಏನಿಲ್ಲ.. ಮೆಕ್ಸಿಕೊ ದೇಶದಲ್ಲಿ 7, ಅಫ್ಘಾನಿಸ್ತಾನದಲ್ಲಿ 6 ಪತ್ರಕರ್ತರು ಹತ್ಯೆಗೀಡಾಗಿದ್ದು, ಅಪಾಯಕಾರಿ ದೇಶಗಳು ಎಂದು ಕರೆಸಿಕೊಂಡಿವೆ. ಅಲ್ದೇ ಯೆಮನ್ ಹಾಗೂ ಭಾರತದಲ್ಲಿ ತಲಾ 4 ಪತ್ರಕರ್ತರು ಹತ್ಯೆಯಾಗಿರುವುದು ಆಘಾತಕಾರಿ ಸಂಗತಿಯಾಗಿದೆ..
ಇನ್ನೂ ಮ್ಯಾನ್ಮಾರ್, ಬೆಲಾರಸ್ ಮತ್ತು ಹಾಂಗ್ಕಾಂಗ್ನಲ್ಲಿ ಮಾಧ್ಯಮಗಳ ಮೇಲಿನ ದಬ್ಬಾಳಿಕೆ ಹೆಚ್ಚಿದ್ದು, ಬಂಧಿತ ಪತ್ರಕರ್ತರ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 20ರಷ್ಟು ಹೆಚ್ಚಾಗಿದೆ. ಹತ್ಯೆಗೀಡಾದ ಪತ್ರಕರ್ತರಲ್ಲಿ ಶೇ. 64ರಷ್ಟು ಮಂದಿ ಉದ್ದೇಶಿತ ಕಾರಣಗಳಿಗೆ ಟಾರ್ಗೆಟ್ ಆಗಿದ್ದರು ಎಂಬುದನ್ನ ವರದಿ ಬಹಿರಂಗ ಪಡಿಸಿದೆ..