ದೇಶದಲ್ಲಿ 200 ಗಡಿ ದಾಟಿದ ಒಮಿಕ್ರಾನ್ ಸೋಕು …
ದೇಶದಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು 200ರ ಗಡಿ ದಾಟಿದೆ. ದೆಹಲಿ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹಚ್ಚು ಸೋಂಕು ಕಾಣಿಸಿಕೊಂಡಿದೆ.ಎರಡೂ ರಾಜ್ಯಗಳಲ್ಲಿ 54-54 ಒಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ. 15 ದಿನಗಳಲ್ಲಿ ದೇಶದಲ್ಲಿ ಮೊದಲ 100 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ, ಆದರೆ 100 ರಿಂದ 200 ಪ್ರಕರಣಗಳು ಬರಲು ಕೇವಲ 5 ದಿನಗಳು ತೆಗೆದುಕೊಂಡಿದೆ ಇದು ಸೋಕು ಹರಡುವಿಕೆಯ ಆಘಾತಕ್ಕೆ ಕಾರಣವಾಗಿದೆ.
ದೇಶದಲ್ಲಿ ಮೊದಲ ಎರಡು ಒಮಿಕ್ರಾನ್ ಪ್ರಕರಣಗಳು ಡಿಸೆಂಬರ್ 2 ರಂದು ಕರ್ನಾಟಕದಲ್ಲಿ ಕಂಡುಬಂದಿತ್ತು. ಡಿಸೆಂಬರ್ 14 ಕ್ಕೆ ಪ್ರಕರಣಗಳ ಸಂಖ್ಯೆ 50 ಕ್ಕೆ ಏರಿಕೆಯಾಗಿತ್ತು. ಡಿಸೆಂಬರ್ 17 ರಂದು ಪ್ರಕರಣಗಳ ಸಂಖ್ಯೆ 100 ಕ್ಕೆ ಏರಿದೆ. ಮುಂದಿನ 100 ಪ್ರಕರಣಗಳನ್ನು ಹೊಂದಲು ಕೇವಲ 5 ದಿನಗಳನ್ನು ತೆಗೆದುಕೊಂಡಿತು. ದೇಶದ 13 ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ಎಚ್ಚರಿಕೆ ಕೊಟ್ಟಿರುವ NITI ಆಯೋಗ್ ಸದಸ್ಯ ಡಾ. ವಿಕೆ ಪಾಲ್
ಭಾರತದಲ್ಲಿನ NITI ಆಯೋಗ್ನ ಸದಸ್ಯ ಡಾ. ವಿಕೆ ಪಾಲ್, ನಾವು ಬ್ರಿಟನ್ನಲ್ಲಿ ಓಮಿಕ್ರಾನ್ ಸೋಂಕಿನ ಪ್ರಮಾಣವನ್ನು ನೋಡಿದರೆ ಮತ್ತು ಅದನ್ನು ಭಾರತದ ಜನಸಂಖ್ಯೆಯೊಂದಿಗೆ ಹೋಲಿಸಿದರೆ, ಭಾರತದಲ್ಲಿ ಪ್ರತಿದಿನ 14 ಲಕ್ಷ ಪ್ರಕರಣಗಳು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದರು.








