ಬ್ಲ್ಯೂ ಫಿಲ್ಮ್ ನಿರ್ಮಾಣ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ : ರಾಜ್ ಕುಂದ್ರಾ
ನೀಲಿ ಚಿತ್ರಗಳ ನಿರ್ಮಾಣ ವಿಚಾರದಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಸದ್ಯ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿಂದ ಆಚೆ ಬಂದ ಬಳಿಕ ರಾಜ್ ಕುಂದ್ರಾ ಈ ಬಗ್ಗೆ ಹೆಚ್ಚಾಗಿ ಎಲ್ಲೂ ಕೂಡ ಮಾತನಾಡಿರಲಿಲ್ಲ.. ಹೆಚ್ಚಾಗಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.. ಈಗ ಪ್ರಕರಣದ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ.. ಹೌದು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದಿದ್ದಾರೆ..
ಈಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರೋ ರಾಜ್ ಕುಂದ್ರಾ , ‘ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ.. ನನ್ನ ಕುರಿತು ಮಾಧ್ಯಮಗಳಲ್ಲಿ ಆಧಾರವಿಲ್ಲದ ಅನೇಕ ಮಾಹಿತಿಗಳು ಬಿತ್ತರ ಆಗಿವೆ. ದಾರಿ ತಪ್ಪಿಸುವಂತಹ ಸುದ್ದಿಗಳನ್ನು ಬಿತ್ತರ ಮಾಡಲಾಗಿದೆ. ನನ್ನ ಜೀವನದಲ್ಲಿ ನಾನು ನೀಲಿ ಸಿನಿಮಾ ನಿರ್ಮಾಣ ಮತ್ತು ವಿತರಣೆ ಮಾಡುವುದರಲ್ಲಿ ಭಾಗಿ ಆಗಿಲ್ಲ. ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಲಾಗಿದೆ. ಈ ಪ್ರಕರಣ ಈಗ ವಿಚಾರಣೆಯ ಹಂತದಲ್ಲಿದೆ. ಹಾಗಾಗಿ ನಾನು ಸ್ಪಷ್ಟನೆ ನೀಡಲಾಗುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ’ ಎಂದು ಹೇಳಿದ್ದಾರೆ.
ಇನ್ನೂ ದುರಾದೃಷ್ಟಕರವೆಂದ್ರೆ , ವಿಚಾರಣೆ ಮುಗಿಯುವುದಕ್ಕಿಂತಲೂ ಮುನ್ನವೇ ಮಾಧ್ಯಮದವರು ನನ್ನನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ನನಗೂ ಮತ್ತು ನನ್ನ ಕುಟುಂಬದವರಿಗೆ ನಿರಂತರವಾಗಿ ನೋವಾಗಿದೆ. ಟ್ರೋಲ್ ಗಳಿಂದ, ನೆಗೆಟಿವ್ ಮಾತುಗಳಿಂದ, ಕೆಟ್ಟ ಸಾರ್ವಜನಿಕ ಅಭಿಪ್ರಾಯದಿಂದ ನಮಗೆ ತೊಂದರೆ ಆಗಿದೆ. ನಾನು ಮುಖ ಮುಚ್ಚಿಕೊಂಡು ಓಡಾಡುವುದಿಲ್ಲ. ಆದರೆ ನನ್ನ ಖಾಸಗಿತನಕ್ಕೆ ಬೆಲೆ ನೀಡಿ ಎಂದು ಬಯಸುತ್ತೇನೆ. ನನ್ನ ಕುಟುಂಬವೇ ನನಗೆ ಮುಖ್ಯ. ಈ ಸಂದರ್ಭದಲ್ಲಿ ಅದಕ್ಕಿಂತ ಬೇರೆ ಏನೂ ನನಗೆ ಮುಖ್ಯವಲ್ಲ’ ಎಂದಿದ್ದಾರೆ..








