ಸರ್ಕಾರದಿಂದ ಮತಾಂತರ ನಿಷೇಧ ಕಾಯ್ದೆ ಮಂಡನೆ – ಕಾಂಗ್ರೇಸ್ ಸಭಾತ್ಯಾಗ
ಬೆಳಗಾವಿ | ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯು ಇಂದು ರಾಜ್ಯ ಸರ್ಕಾರ ಮಂತಾಂತರ ನಿಷೇಧ ಕಾಯ್ದೆನ್ನ ಕಲಾಪದಲ್ಲಿ ಮಂಡಿಸಿತು. ಕಾಂಗ್ರೇಸ್ ಸದಸ್ಯರು ಮಸೂದೆಯನ್ನ ವಿರೋಧಿಸಿ ಸಭಾ ತ್ಯಾಗ ಮಾಡಿದರು.
ಭೋಜನ ವಿರಾಮದ ಬಳಿಕ ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಿದರು.
ಕರ್ನಾಟಕ ವಿಧಾನಸಭೆ ಸ್ಪೀಕರ್ ಅವರು ಕಲಾಪದ ಪ್ರಕ್ರಿಯೆಗಳ ಪ್ರಕಾರ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಲು ಸರ್ಕಾರಕ್ಕೆ ಅನುಮತಿ ನೀಡಿದ್ದಾರೆ ಮತ್ತು ಅದನ್ನು ನಾಳೆ ಡಿಸೆಂಬರ್ 22 ರಂದು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದರು.
ಕರ್ನಾಟಕ ಸರ್ಕಾರವು ಮಂಡಿಸಿದ ಮತಾಂತರ ವಿರೋಧಿ ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್ ಅಸೆಂಬ್ಲಿಯಿಂದ ಹೊರನಡೆಯಿತು. ಸದನದೊಳಗೆ ಬಿಲ್ ಪ್ರತಿಯನ್ನು ಹರಿದು ಹಾಕಿದ ಕಾಂಗ್ರೇಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.








