ADVERTISEMENT
Saturday, August 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

Shwetha by Shwetha
August 29, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್ಸ್‌ಪೆಕ್ಟರ್ ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇದೀಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಈ ಭಾರಿ ಅಕ್ರಮದ ಹಿಂದೆ ಪ್ರೇಮ ವೈಫಲ್ಯದ ಕಥೆಯೊಂದು ಅಡಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.ತನ್ನ ಪ್ರೇಯಸಿ ದೂರವಾಗಿದ್ದಕ್ಕೆ ಆಕ್ರೋಶಗೊಂಡಿದ್ದ ಗೌರವ್ ಪಾಟೀಲ್ ಎಂಬಾತ ಪೊಲೀಸರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದು, ಇದೇ ಪ್ರಕರಣದ ತನಿಖೆಗೆ ಪ್ರಮುಖ ಸುಳಿವಾಗಿದೆ ಎಂದು ವರದಿಯಾಗಿದೆ.

ಪ್ರಶ್ನೆಪತ್ರಿಕೆ ಪ್ರೇಮಿಗೆ ವಾಟ್ಸಾಪ್‌ನಲ್ಲಿ!

Related posts

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

August 29, 2026
ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

August 29, 2026

ತನಿಖೆಯ ಪ್ರಕಾರ, ಪರೀಕ್ಷಾರ್ಥಿ ಋತುಜಾ ಪಾಟೀಲ್ ಅವರ ತಂದೆ ಅಮೃತ್ ಪಾಟೀಲ್, ನಂದೂರ್ಬಾರ್‌ನ ಕೋಚಿಂಗ್ ಸೆಂಟರ್ ಮಾಲೀಕ ಪ್ರವೀಣ್ ಪಾಟೀಲ್ ಎಂಬಾತನಿಗೆ ₹5 ಲಕ್ಷ ನೀಡಿ ಪರೀಕ್ಷೆಗೆ ಎರಡು ದಿನ ಮುಂಚಿತವಾಗಿ, ಅಂದರೆ ಮಾರ್ಚ್ 20ರಂದು ಪ್ರಶ್ನೆಪತ್ರಿಕೆ ಪಡೆದಿದ್ದರು ಎನ್ನಲಾಗಿದೆ.ಈ ಪ್ರಶ್ನೆಪತ್ರಿಕೆಯನ್ನು ಋತುಜಾ ತನ್ನ ಪ್ರೇಮಿ ಗೌರವ್ ಪಾಟೀಲ್‌ಗೆ ವಾಟ್ಸಾಪ್ ಮೂಲಕ ಹಂಚಿಕೊಂಡಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.

ಋತುಜಾ ಪಾಸ್, ಗೌರವ್ ಫೇಲ್!

ಮಾರ್ಚ್ 22ರಂದು ನಡೆದ ಪರೀಕ್ಷೆಯಲ್ಲಿ ಋತುಜಾ ಉತ್ತಮ ಅಂಕಗಳೊಂದಿಗೆ ಆಯ್ಕೆಯಾದರೆ, ಗೌರವ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ ಎನ್ನಲಾಗಿದೆ.ನಂತರ ಋತುಜಾ ಕುಟುಂಬದವರು ಇವರ ವಿವಾಹಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಆಕೆ ಗೌರವ್‌ನಿಂದ ದೂರವಾಗಿದ್ದಳು. ಇದರಿಂದ ಆಕ್ರೋಶಗೊಂಡ ಗೌರವ್, ಪ್ರಶ್ನೆಪತ್ರಿಕೆ ಸೋರಿಕೆಯ ರಹಸ್ಯವನ್ನು ಪೊಲೀಸರಿಗೆ ಇ-ಮೇಲ್ ಮೂಲಕ ಬಹಿರಂಗಪಡಿಸಿದ್ದಾನೆ ಎಂದು ವರದಿಯಾಗಿದೆ.

ಪೊಲೀಸರು ತನಿಖೆ ಚುರುಕುಗೊಳಿಸಿದ ಬಳಿಕ ತಾನೂ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯದಿಂದ ಗೌರವ್ ತನ್ನ ದೂರನ್ನು ಹಿಂಪಡೆಯಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಆದರೆ ಅಷ್ಟರಲ್ಲಾಗಲೇ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.

ಈ ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ಹೇಗೆ ಸೋರಿಕೆಯಾಯಿತು, ಹಣದ ವಹಿವಾಟಿನಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ ಹಾಗೂ ಪರೀಕ್ಷಾ ಅಕ್ರಮದ ಹಿಂದೆ ಇರುವ ಸಂಪೂರ್ಣ ಜಾಲದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.

ShareTweetSendShare
Join us on:

Related Posts

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

by Shwetha
August 29, 2026
0

ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ....

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

by Shwetha
August 29, 2026
0

ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಎಂದರೆ ಅಲ್ಲಿ ತಳಿರು ತೋರಣಗಳ ಶೃಂಗಾರ, ವಿದ್ಯುತ್ ದೀಪಗಳ ಅಲಂಕಾರ ಮತ್ತು ಮನೆಯ ಹೆಸರಿನ ಫಲಕಗಳು ರಾರಾಜಿಸುವುದು ಸಹಜ. ಆದರೆ ಇಲ್ಲೊಬ್ಬರು...

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

by Shwetha
August 29, 2026
0

ದೆಹಲಿ ಮತ್ತು ಬೆಂಗಳೂರು ನಡುವೆ ಈಗ ಹೊಸ ರಾಜಕೀಯ ಸಂಚಲನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ...

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

by Shwetha
August 29, 2026
0

ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯ ಬೆನ್ನಲ್ಲೇ...

ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

by Shwetha
August 29, 2026
0

ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಕುರಿತು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಿನಿಮಾಗಳಲ್ಲಿ ಮಹಿಳೆಯರನ್ನು ಚಿತ್ರಿಸುವ ರೀತಿಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram