ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಸಂತೃಪ್ತಿಗೊಳಿಸಿಲು ಡಿಕೆಶಿ ಎಂಇಎಸ್ ಪರವಾಗಿ ಮಾತಾಡಿದ್ದಾರೆ : ಈಶ್ವರಪ್ಪ Laxmi hebbalkar saaksha tv
ಬೆಳಗಾವಿ : ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಂತೃಪ್ತಿಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಂಇಎಸ್ ಪುಂಡರ ಪರವಾಗಿ ಮಾತನಾಡಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಎಂಇಎಸ್ ಕೃತ್ಯದ ಬಗ್ಗೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಕ್ಕಾಲು ಭಾಗ ಎಂಇಎಸ್‌ನವರ ಮತಗಳನ್ನು ಪಡೆಯಲು ಡಿ ಕೆ ಶಿವಕುಮಾರ್ ಆ ರೀತಿ ಮಾತನಾಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಎಂಇಎಸ್ ವಿರುದ್ಧ ಇಡೀ ರಾಜ್ಯ ಒಂದಾಗಿದ್ದು, ಶಿವಕುಮಾರ್ ಮಾತ್ರ ಎಂಇಎಸ್ ಈ ಕೃತ್ಯ ಮಾಡಿಲ್ಲ.
ಯಾರೋ ಪುಂಡರು ಇದನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದು ಕಿಡಿಕಾರಿದರು.
ಅಲ್ಲದೇ ಸದನದಲ್ಲಿ ಸಿದ್ದರಾಮಯ್ಯ ಪುಂಡ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸುತ್ತಾರೆ.
ಇತ್ತ ಡಿ.ಕೆ.ಶಿವಕುಮಾರ್ ದ್ವಂದ್ವ ಹೇಳಿಕೆ ನೀಡಿದ್ದಾರೆ. ಮೊದಲು ಇದನ್ನ ಸರಿಪಡಿಸಿಕೊಳ್ಳಲಿ ಎಂದು ಈಶ್ವರಪ್ಪ ಟಾಂಗ್ ನೀಡಿದ್ದಾರೆ.









