ಕೊರೋನಾ ಸೋಂಕಿನಿಂದಾಗಿ ಜಗತ್ತಿನ ಅರ್ಥಿಕತೆ ಕುಸಿದಿದೆ. ಜೊತೆಗೆ ಕೊರೊನಾ ಸೋಂಕಿನ ಗಂಭೀರತೆಯನ್ನು ಮುಚ್ಚಿಟ್ಟು, ಇಂದಿನ ಪರಿಸ್ಥಿತಿಗೆ ಪರೋಕ್ಷವಾಗಿ ಕಾರಣವಾಗಿರುವ ಚೀನಾದ ಮೇಲೆ ಹಲವು ರಾಷ್ಟ್ರಗಳು ಕೆಂಡಾಮಂಡಲವಾಗಿದೆ. ಅಷ್ಟೇ ಅಲ್ಲ ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಹಲವಾರು ದೇಶಗಳ ಕಂಪೆನಿಗಳು ಈಗಾಗಲೇ ಚೀನಾ ತ್ಯಜಿಸಿ, ಭಾರತದತ್ತ ಬರಲು ಸಿದ್ಧತೆ ನಡೆಸಿವೆ. ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಭಾರತ ಇಲ್ಲಿ ಹೂಡಿಕೆ ಮಾಡುವ ಕಂಪೆನಿಗಳಿಗೆ 10 ವರ್ಷ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ಈ ಬಗ್ಗೆ ನೀಲನಕ್ಷೆ ಸಿದ್ಧ ಪಡಿಸಿದ್ದು, ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂಬುದಾಗಿ ವರದಿಗಳು ಹೇಳಿವೆ.
ವೈದ್ಯಕೀಯ ಉಪಕರಣ, ಎಲೆಕ್ಟ್ರಾನಿಕ್ಸ್, ಟೆಲಿಕಾಂ ಉಪಕರಣ, ಕ್ಯಾಪಿಟಲ್ ಗೂಡ್ಸ್ ಮೇಲೆ ಜೂನ್ 1. ರಿಂದ ಆರಂಭವಾಗಿ, ಮುಂದಿನ 3 ವರ್ಷಗಳ ಒಳಗೆ 500 ದಶಲಕ್ಷ ಡಾಲರ್ ಹೂಡಿಕೆ ಮಾಡುವ ಕಂಪೆನಿಗಳಿಗೆ 10 ವರ್ಷಗಳ ತೆರಿಗೆ ವಿನಾಯಿತಿ.
ಜವುಳಿ, ಆಹಾರ ಸಂಸ್ಕರಣೆ, ಚರ್ಮ ಮತ್ತು ಪಾದರಕ್ಷೆ ಉದ್ಯಮದಲ್ಲಿ ನೂರು ದಶಲಕ್ಷ ಡಾಲರ್ ಹಣ ಹೂಡಿಕೆ ಮಾಡುವ ಕಂಪೆನಿಗಳಿಗೆ 4 ವರ್ಷಗಳ ವರೆಗೆ ತೆರಿಗೆ ವಿನಾಯಿತಿ ಮತ್ತು ಮುಂದಿನ 6 ವರ್ಷಗಳಿಗೆ ಕೇವಲ ಶೇಕಡಾ 10 ಕಾರ್ಪೊರೇಟ್ ತೆರಿಗೆ ನಿಗದಿ ಮಾಡುವ ಬಗ್ಗೆಯೂ ಪ್ರಸ್ತಾವನೆಯಲ್ಲಿ ಇರುವುದಾಗಿ ವರದಿಯಾಗಿದೆ.
ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.
56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...








