ಚಿಕ್ಕಬಳ್ಳಪುರ ಜಿಲ್ಲೆಯಲ್ಲಿ ಕಂಪಿಸಿದ ಭೂಮಿ, ಜನರಲ್ಲಿ ಆತಂಕ
ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಸ್ಫೋಟದ ಎರಡು ಭಾರಿ ಭೂಮಿ ಕಂಪಿಸಿದೆ. ಬೆಳಗ್ಗೆ ಗಂಟೆಯಿಂದ 7.30ರೊಳಗೆ ಎರಡು ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ವಿವಿಧೆಡೆ ಕೇಳಿ ಬಂದ ಸದ್ದಿಗೆ ಜನ ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಸ್ಷಷ್ಟನೆ ನೀಡಿರುವ ಜಿಲ್ಲಾಧಿಕಾರಿ ಲತಾ ಆರ್ ಗ್ರಾಮಸ್ತರು ಭಯಪಡದಂತೆ ಎಚ್ಚರಿಕೆ ನೀಡಿದ್ದಾರೆ.
ಡಿಸೆಂಬರ್ 12ರಂದು ಬೆಳಿಗ್ಗೆ 7.09ರ ವೇಳೆಗೆ ಸಂಭವಿಸಿದೆ. ಬೆಂಗಳೂರಿನ ಉತ್ತರ, ಈಶಾನ್ಯ ಭಾಗದ 70 ಕಿಮೀ ದೂರದಲ್ಲಿ 11 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿದೆ’ ‘3.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಎನ್ ಎಸ್ ಸಿ ಟ್ವೀಟ್ ಮಾಡಿದೆ.
https://twitter.com/NCS_Earthquake/status/1473474599002128384?ref_src=twsrc%5Etfw%7Ctwcamp%5Etweetembed%7Ctwterm%5E1473474599002128384%7Ctwgr%5E%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2021%2Fdec%2F22%2Fexplosion-sound-in-chikkaballapur-makes-people-scared-460639.html
ಇದಾಗಿ ಕೆಲವೇ ನಿಮಿಷಗಳ ಅವಧಿಯಲ್ಲಿ ಮತ್ತೊಮ್ಮೆ ಭೂಕಂಪನ ಉಂಟಾಗಿದ್ದು,ಈ ಬಾರಿ ತೀವ್ರತೆ ಕೊಂಚ ಹೆಚ್ಚಿತ್ತು. ಬೆಂಗಳೂರು ಉತ್ತರ- ಈಶಾನ್ಯ ಭಾಗದ 66 ಕಿಮೀ ದೂರದಲ್ಲಿ 23 ಕಿಮೀ ಆಳದಲ್ಲಿ ಬೆಳಿಗ್ಗೆ 7.14ರ ಸುಮಾರಿಗೆ 3.3 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ ತಿಳಿಸಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿ ಗೊಲ್ಲವಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಸ್ಫೋಟದ ಸದ್ದು ಕೇಳಿ ಬಂದಿದೆ.








