ಕಿಡ್ನಾಪ್ ಮಾಡಲು ಯತ್ನಿಸಿದ ಡ್ರೈವರ್ – ಆಟೋದಿಂದಲೇ ಜಿಗಿದು ಮಹಿಳೆ ಎಸ್ಕೇಪ್
ಹರಿಯಾಣ : ಆಟೋ ಚಾಲಕನೊಬ್ಬ ತನ್ನ ಆಟೋ ಹತ್ತಿದ್ದ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದು , ಹೇಗೋ ಚಾಲಾಕಿಯಿಂದ ಮಹಿಳೆಯು ಆಟೋದಿಂದ ಜಿಗಿದು ಎಸ್ಕೇಪ್ ಆಗಿರುವ ಘಟನೆಯುವ ಹರಿಯಾಣದಲ್ಲಿ ನಡೆದಿದೆ..
ಘಟನೆಯ ಭಯಾನಕ ಅನುಭವವನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿರುವ ಮಹಿಳೆಯು, ಮನೆಯಿಂದ ಗುರ್ಗಾಂವ್ ಗೆ ತಲುಪಲು ಕೇವಲ 7 ನಿಮಿಷವಾಗುತ್ತದೆ. ಅಲ್ಲಿಂದ ಆಟೋದಲ್ಲಿ ಹೋಗುವಾಗ ಚಾಲಕರೊಬ್ಬರು ತಮ್ಮನ್ನು ಅಪಹರಿಸಲು ಪ್ರಯತ್ನಿಸಿದರು. ಇದರಿಂದಾಗಿ ನನಗೆ ಆಟೋದಿಂದ ಜಿಗಿಯಬೇಕಾದ ಸ್ಥಿತಿ ಉಂಟಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಆ ದಿನ ನನ್ನ ಜೀವನದ ಅತ್ಯಂತ ಭಯಾನಕ ದಿನಗಳಲ್ಲಿ ಒಂದಾಗಿತ್ತು. ನಾನು ಕಿಡ್ನಾಪ್ ಆಗುತ್ತೇನೆ ಎಂದೇ ಭಾವಿಸಿದ್ದೆ. ಅದನ್ನು ನೆನಪಿಸಿಕೊಂಡರೆ ಇನ್ನು ನನಗೆ ಭಯವಾಗುತ್ತದೆ. ಮಧ್ಯಾಹ್ನ ಆಟೋಸ್ಟ್ಯಾಂಡ್ ನಿಂದ ಗುರ್ಗಾಂವ್ ಗೆ ಹೋಗಲು ಆಟೋ ಹತ್ತಿದ್ದೆ. ಮನೆಯಿಂದ ನಗರಕ್ಕೆ ಕೇವಲ 7 ನಿಮಿಷದ ದಾರಿ.
ನಾನು ಆಟೋ ಚಾಲಕನಲ್ಲಿ ಹಣವಿಲ್ಲ, ಪೇಟಿಎಂ ಮಾಡುತ್ತೇನೆ ಎಂದು ಮನವಿ ಮಾಡಿದ್ದೆ. ಅದಕ್ಕೆ ಅವನು ಒಪ್ಪಿಗೆ ಸೂಚಿಸಿದ್ದ. ಅವನನ್ನು ನೋಡಿದರೆ ಊಬರ್ ಆಟೋಚಾಲಕನಂತೆ ಕಾಣುತ್ತಿದ್ದ. ನಾನು ಆಟೋದಲ್ಲಿ ಕುಳಿತಿದ್ದೆ. ಆಟೋ ಪ್ರಾರಂಭಿಸಿದ ಆತ ಆಟೋವನ್ನು ಅಪರಿಚಿತ ರಸ್ತೆಗೆ ತಿರುಗಿಸಿದ. ಅದನ್ನು ಗಮನಿಸಿದ ನಾನು ಎಡಗಡೆ ರೋಡ್ ನಲ್ಲಿ ಯಾಕೆ ಹೋಗುತ್ತಿದ್ದೀರಿ, ನಾನು ಹೋಗುವ ರಸ್ತೆ ಬಲಕ್ಕೆ ಇದೆ ಎಂದು ಕಿರುಚಿದೆ. ಅದಕ್ಕೆ ಆತ ಏನು ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ನಾನು ಬೇರೆ ದಾರಿ ಕಾಣದೇ 30 ರಿಂದ 40 ಕಿ.ಮೀ ವೇಗದಲ್ಲಿದ್ದ ಆಟೋದಿಂದ ಜಿಗಿದೆ ಎಂದು ತಿಳಿಸಿದ್ದಾರೆ.
ಗುರ್ಗಾಂವ್ನ ಪಾಲಂ ವಿಹಾರ್ನ ಪೊಲೀಸ್ ಅಧಿಕಾರಿ ಜಿತೇಂದರ್ ಯಾದವ್ ಅವರು ಆಟೋ ಚಾಲಕನನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ ಎಂದು ಕೂಡ ತಿಳಿಸಿದ್ದಾರೆ..
https://twitter.com/nishtha_paliwal/status/1472883483915685889?ref_src=twsrc%5Etfw%7Ctwcamp%5Etweetembed%7Ctwterm%5E1472883483915685889%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fgurgaon-woman-shares-auto-driver-attempt-to-kidnaping-jump-out-of-the-moving-vehicle%2F








