ಸಿರಾಜ್ ಲೋಡೆಡ್ ಗನ್ ನಂತೆ.. ಸಚಿನ್ ತೆಂಡ್ಯುಲ್ಕರ್ Mohammed Siraj
ಟೀಂ ಇಂಡಿಯಾ ಯುವ ವೇಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪೇಸರ್ ಮೊಹ್ಮದ್ ಸಿರಾಜ್ ಬಗ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯುಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿರಾಜ್ ರಲ್ಲಿ ಪ್ರತಿ ಬಾರಿ ಹೊಸತನ ಕಾಣಿಸುತ್ತಿದೆ. ಕ್ಯಾಪ್ಟನ್ ಹೇಳಿದಂತೆ ಬೌಲ್ ಮಾಡಲು ಲೋಡೆಡ್ ಗನ್ ರೀತಿ ಸಿದ್ಧವಾಗಿರುತ್ತಾರೆ ಎಂದು ಸಚಿನ್ ಹೇಳೀದ್ದಾರೆ.
ಸಿರಾಕ್ ಬೌಲಿಂಗ್ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಚಿನ್ ಸಿರಾಜ್ ಬೌಲಿಂಗ್ ರನಪ್ ತುಂಬಾ ಅದ್ಭುತವಾಗಿದೆ.
ಮೈದಾನದಲ್ಲಿ ಆತ ಉತ್ಸಾಹದಿಂದ ಕಾಣಿಸುತ್ತಾನೆ, ಆತ ಬೌಲ ಮಾಡುವು ಮೊದಲ ಓವರ್ ಅಥವಾ ಕೊನೆಯ ಓವರ್ ಎಂಬುದನ್ನ ಗುರುತಿಸಲು ಆಗುವುದಿಲ್ಲ.
ಅಷ್ಟು ಎನರ್ಜಿ ಯಿಂದ ಬೌಲಿಂಗ್ ಮಾಡ್ತಾರೆ. ಸಿರಾಜ್ ರಲ್ಲಿನ ಈ ಗುಣ ನನಗೆ ತುಂಬಾ ಇಷ್ಟವಾಗುತ್ತದೆ.
Thank you @sachin_rt sir for this . It is a huge motivation for me coming from you .. I will always do my best for my country .stay well sir https://t.co/3qJrCBkwxm
— Mohammed Siraj (@mdsirajofficial) December 22, 2021
ಕಳೆದ ಬಾರಿಯ ಆಸ್ಟ್ರೇಲಿಯಾ ಟೂರಿನಲ್ಲೂ ಸಿರಾಜ್ ರಲ್ಲಿ ಈ ಆಟ್ಟಿಟ್ಯೂಡ್ ಕಾಣಿಸಿತ್ತು. ಅವರಲ್ಲಿ ವೇಗವಾಗಿ ಕಲಿಯುವ ಗುಣವಿದೆ ಎಂದಿದ್ದಾರೆ.
ಅಲ್ಲದೇ ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಸಿರಾಜ್ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಸಚಿನ್ ಭವಿಷ್ಯ ನುಡಿದಿದ್ದಾ.
ಇನ್ನು ತಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದಕ್ಕೆ ಮೊಹ್ಮದ್ ಸಿರಾಜ್ ಟ್ವಿಟ್ಟರ್ ಮೂಖೇನ ಸಚಿನ್ ಗೆ ಧನ್ಯವಾದ ತಿಳಿಸಿದ್ದಾರೆ.
‘ಥಾಂಕ್ಯೂ ಸಚಿನ್ ಸರ್. ನಿಮ್ಮಿಂದ ಇಂತಹ ಮಾತುಗಳು ಬರುವುದು ನನಗೆ ತುಂಬಾ ಸ್ಫೂರ್ತಿದಾಯಕ. ಸ್ಟೇ ವೆಲ್ ಸರ್’ ಎಂದು ಟ್ವೀಟ್ ಮಾಡಿದ್ದಾರೆ.








