ಪ್ರೋ ಕಬ್ಬಡ್ಡಿ : ಕನ್ನಡದಲ್ಲೇ NTR ಕಾಮೆಂಟ್ರಿ..!
ಕರ್ನಾಟಕದಲ್ಲೇ ಹುಟ್ಟಿ ಇಲ್ಲಿಂದಲೇ ಫೇಮ್ ಗಳಿಸಿ ಬೇರೆ ಭಾಷೆಗಳಲ್ಲಿ ಹೋಗಿ ಸ್ಟಾರ್ ಗಳಾಗಿ ಕನ್ನಡವನ್ನೇ ಮರೆತಿರುವ ಅನೇಕ ನಟನಟಿಯರು ಇದ್ದಾರೆ.. ಈ ಪೈಕಿ ರಶ್ಮಿಕಾ ಮಂದಣ್ಣ ಕೂಡ ಒಬ್ರು.. ಎಲ್ಲರೂ ರಶ್ಮಿಕಾ ಮಂದಣ್ಣ ಅವರನ್ನ ಕನ್ನಡದ ತಾತ್ಸಾರದ ವಿಚಾರಕ್ಕೆ ಟ್ರೋಲ್ ಮಾಡೋದು ಹೆಚ್ಚು.. ಆದ್ರೆ ಈ ನಡುವೆ ತೆಲುಗು ನಟ ಜೂ. NTR ಅವರು ಪ್ರೋ ಕಬಡ್ಡಿ ಲೀಗ್ ನ ಬೆಂಗಳೂರು ಹಾಗೂ ಯೂ ಮುಂಬಾ ಮ್ಯಾಚ್ ವೀಕ್ಷಿಸುತ್ತಾ ಕನ್ನಡದಲ್ಲೇ ಕಮೆಂಟ್ರಿ ಮಾಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ..
ಹೌದು.. ಕೆಲ ಕಾಲ ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಕಮೆಂಟರಿ ಬಾಕ್ಸ್‌ಗೆ ಆಗಮಿಸಿದ್ದ ತಾರಕ್ ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳ್ತೀರಾ ಎಂಬ ನಿರೂಪಕರ ಪ್ರಶ್ನೆಗೆ ಕನ್ನಡದಲ್ಲಿಯೇ ಉತ್ತರಿಸಿದ್ದಾರೆ.. ನಾನು ನನ್ನ ಪಾತ್ರ, ಸಿನಿಮಾದ ಬಗ್ಗೆ ಜಾಸ್ತಿ ಮಾತನಾಡಿದರೆ ರಾಜಮೌಳಿಯವರು ಬಂದು ನನ್ನ ಮೇಲೆ ರೇಡ್ ಮಾಡುತ್ತಾರೆ ಅಷ್ಟೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ..
Co commentator about Tarak's ease in kannada😍#ProKabaddi @tarak9999 pic.twitter.com/O5gLkPms2O
— Jay C Srikar (@sr1k4r) December 22, 2021
ಇನ್ನೂ ನೀವೆಲ್ಲ ಟ್ರೈಲರ್ ನೋಡಿದ್ದೀರಿ. ಟ್ರೈಲರ್‌ನಲ್ಲಿಯೇ ಕತೆಯೆಲ್ಲ ಹೇಳುವ ಪ್ರಯತ್ನವನ್ನು ರಾಜಮೌಳಿ ಮಾಡುತ್ತಾರೆ. ಇಲ್ಲೂ ಸಹ ಅದನ್ನೇ ಮಾಡಿದ್ದಾರೆ. ಟ್ರೈಲರ್ ನಲ್ಲಿ ಹುಲಿ ಇದೆ, ರಾಮ್ ಚರಣ್ ಸರ್ ಅವರದ್ದು 2000 ಜನರ ಮೇಲೆ ಫೈಟ್ ಒಂದಿದೆ. ಸಿನಿಮಾದಲ್ಲಿ ಇನ್ನೂ ಸಾಕಷ್ಟು ವಿಷಯಗಳು ಇರಲಿವೆ ಎಂದಿದ್ದಾರೆ..
ಅಷ್ಟೇ ಅಲ್ಲ ಕನ್ನಡದಲ್ಲಿ ಕಮೆಂಟ್ರಿ ಕೇಳಿ ಖುಷಿ ಆಯ್ತು ಎಂದ ನಿರೂಪಕರಿಗೆ ಉತ್ತರಿಸಿದ NTR ನಿಮ್ಮನ್ನ ಬಿಡಿ ನಮ್ಮ ತಾಯಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.. ಅವರು ಮುಂಚೇನೆ ಹೇಳಿದ್ರು ನಂಗೆ ನೀನು ಚೆನ್ನಾಗಿ ಕನ್ನಡ ಮಾತನಾಡು, ನಾನು ತಲೆ ಬಗ್ಗಿಸೋ ಹಾಗೆ ಮಾಡ್ಬೇಡ ಎಂದಿದ್ದಾರೆ NTR..
ಅಂದ್ಹಾಗೆ ಇತ್ತೀಚೆಗೆ ರಾಜಮೌಳಿ ಟೀಮ್ RRR ಪ್ರಚಾರಕ್ಕೆ ಬೆಂಗಳೂರಿಗೆ ಬಮದಿದ್ದಾಗಲೂ ಸಹ NTR ಕನ್ನಡದಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.. ಜೊತೆಗೆ ಆಲಿಯಾ , ರಾಮ್ ಚರಣ್ ಗೂ ಕನ್ನಡದಲ್ಲಿ ಮಾತುಗಳನ್ನ ಹೇಳಿಕೊಟ್ಟಿದ್ದರು.. ಅಲ್ಲದೇ ಅಪ್ಪುಗಾಗಿ ಕನ್ನಡದಲ್ಲಿ ಅವರೇ ಹಾಡಿದ್ದ “ಗೆಳೆಯ ಗೆಳೆಯ “ ಹಾಡನ್ನ ಅಂದು ಪ್ರೆಸ್ ಮೀಟ್ ನಲ್ಲಿ ಹಾಡಿ ಇದು ಅಪ್ಪುಗಾಗಿ ನಾನು ಹಾಡ್ತಿದ್ದು, ಇದೇ ಕೊನೆ ಮತ್ತೆ ಹಾಡಲ್ಲ ಎಂದು ಭಾವುಕರಾಗಿದ್ದರು..








