ವಿದ್ಯುತ್ ಸಂಪರ್ಕವಿಲ್ಲದ ಕುಟುಂಬಗಳಿಗೆ ಸಿಹಿಸುದ್ಧಿ – ಸರ್ಕಾರದಿಂದ ಬೆಳಕು ಯೋಜನೆಗೆ ಚಾಲನೆ
ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗಾಗಿ ಸರ್ಕಾರ ಹೊಸದೊಂದು ಯೋಜನೆ ತಂದಿದೆ. ರೈತರು ಹಾಗೂ ಬಡ ಕುಟುಂಬಗಳಿಗಾಗಿ ರಾಜ್ಯ ಸರ್ಕಾರದ ಬೆಳಕು ಯೋಜನೆಯನ್ನ ಜಾರಿಗೆ ತಂದಿದೆ.
ಗುರುತಿನ ಚೀಟಿ ಹೊಂದಿದ ತೋಟದ ಮನೆಗಳು, ಹೊರವಲಯದ ಮನೆಗಳು, ಹಾಗೂ ವಿದ್ಯುತ್ ಸಂಪರ್ಕ ಇಲ್ಲದ ಪ್ರತಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಬೆಳಕು ಯೋಜನೆ ಯನ್ನ ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು .
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಬೆಳಕು ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಇಲಾಖೆ ಸಚಿವರಾದ ಗೋವಿಂದ ಕಾರಜೋಳ , ಇಂಧನ ಸಚಿವ ವಿ. ಸುನೀಲ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿ ಎಂ “ಗ್ರಾಮೀಣ ಭಾಗದ ಬಡ ಕುಟುಂಬಗಳಿಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ರೈತರಿಗೆ ಟಿಸಿ ಒದಗಿಸಲು ರೈತರು ಯಾವುದೇ ವಾಹನ ಬಳಸುವ ಅವಶ್ಯಕತೆ ಇಲ್ಲ. ಇಂಧನ ಇಲಾಖೆಯ ವಾಹನಗಳ ಮೂಲಕ ರೈತರಿಗೆ ಟ್ರಾನ್ಸ್ ಫಾರ್ಮರ್ ಒದಗಿಸಲು ಕ್ರಮ. ಸರ್ಕಾರದಿಂದ ಅತಿ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರ ಪಂಪ್ ಸೆಟ್ ಗಳಿಗೆ, ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ಸೌಲಭ್ಯ ದೊರಕಿಸಲಾಗುವುದು” ಎಂದು ತಿಳಿಸಿದರು.








