ಆಟೋ ಪೈಲಟ್ ಮೋಡ್ ನಲ್ಲಿ ಕಾರ್ ಚಲಾಯಿಸುವಾಗ ಮಗುವಿಗೆ ಜನ್ಮ ನೀಡಿದ ತಾಯಿ
ವಿಮಾನದಲ್ಲಿ ಅಥವಾ ರೈಲಿನಲ್ಲಿ ಮಹಿಳೆಯರು ಮಗುವಿಗೆ ಜನ್ಮ ನೀಡಿರುವ ಸುದ್ಧಿಯನ್ನ ನಾವು ಕೇಳಿರುತ್ತೇವೆ. ಇದು ಹೊಸದೇನಲ್ಲ. ಆದರೆ ಇಲ್ಲೊಬ್ಬ ಮಹಿಳೆಗೆ ಚಲಿಸುವ ಕಾರಿನಲ್ಲಿ ಇದ್ದಾಗಲೆ ಹೆರಿಗೆ ಆಗಿದೆ. ಅದು ಕೂಡ ಆಟೋ ಪೈಲಟ್ ಮೋಡ್ ನಲ್ಲಿ ಕಾರ್ ಚಲಾಯಿಸುವಾಗ.
ಇದು ನಡೆದಿರುವುದು ಫಿಲಡೆಲ್ಫಿಯಾ ದೇಶದಲ್ಲಿ ಟೆಸ್ಲಾ ಕಂಪನಿಯ ನೂತನ ಕಾರ್ ಅನ್ನ ಆಟೊ ಪೈಲಟ್ ಮೋಡ್ ನಲ್ಲಿ ಇಟ್ಟರೆ ಕಾರು ಸ್ವಂ ತಾನಾಗಿಯೇ ಮ್ಯಾಪ್್ ನಲ್ಲಿ ಸೂಚಿಸದ ಸ್ಥಳಕ್ಕೆ ಹೊಗುತ್ತದೆ… ಇದೇ ತಂತ್ರಜ್ಞಾನದಲ್ಲಿ ಜನಿಸಿದ ಮೊದಲ ಮಗು ಇದಾಗಿದೆ.
ಪತ್ರಿಕೆ ವರದಿಯ ಪ್ರಕಾರ, ತಾಯಿಯು ಟೆಸ್ಲಾ ಆಟೋಪೈಲಟ್ನಲ್ಲಿ ಚಾಲನೆಯಲ್ಲಿರುವಾಗ ಎಲೆಕ್ಟ್ರಿಕ್ ಕಾರಿನ ಮುಂಭಾಗದ ಸೀಟಿನಲ್ಲಿ ತನ್ನ ಮಗುವಿಗೆ ಜನ್ಮ ನೀಡಿದ್ದಾಳೆ. ಇದು ವಿಶ್ವದ ಮೊದಲ ಟೆಸ್ಲಾ ಬೇಬಿ ಆಗಿದೆ.
US ದೇಶದ ಎಲೆನ್ ಮಾಸ್ಕ್ ಒಡೆತನದ ಎಲೆಕ್ಟ್ರಿಕ್ ಕಾರ್ ಕುರಿತು ಇತ್ತಿಚ್ಚಿನ ದಿನಗಳಲ್ಲಿ ಸುರಕ್ಷತಾ ಕಾಳಜಿಯ ಬಗ್ಗೆ ನಗೆಟೀವ್ ಪ್ರಚಾರದಿಂದ ಸುದ್ಧಿಯಾಗುತ್ತಿತ್ತು. ಈ ಸುದ್ಧಿ ಟೆಸ್ಟ್ಲಾ ಬ್ರ್ಯಾಂಡ್ಗೆ ಒಳ್ಳೆಯ ಸುದ್ದಿಯಾಗಿದೆ.
ಟೆಸ್ಲಾ ಕಾರ್ ಮಾಲೀಕರಾದ ಯಿರಾನ್ ಮತ್ತು ಕೀಟಿಂಗ್ ಶೆರ್ರಿ ತಮ್ಮ ಮಗನನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಗರ್ಭಿಣಿಯಾಗಿದ್ದ ಯಿರಾನ್ ಅವರಿಗೆ ನೋವು ಬಂದಿದೆ. ಅವರ ಕಾರು ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದು, ಆಸ್ಪತ್ರೆಗೆ ತೆರಳಲು ಯಾವುದೇ ದಾರಿಯಿಲ್ಲದೆ ಟೆಸ್ಲಾ ಕಾರನ್ನ ಆಟೋಪೈಲಟ್ನಲ್ಲಿ ಇರಿಸಿ ದಂಪತಿಗಳು ಕಾರಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ ಮತ್ತು ಟೆಸ್ಲಾ ಮಗು ಕೂಡ ಯಾವುದೇ ತೊಂದರೆಗಳಿಲ್ಲದೆ ಚೆನ್ನಾಗಿದ್ದಾರೆ. ನವಜಾತ ಶಿಶುವಿಗೆ ಟೆಸ್ ಎಂದು ಹೆಸರಿಸಲು ದಂಪತಿಗಳು ಯೋಚಿಸುತ್ತಿದ್ದರು. ಆದರೆ, ನಂತರ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದರು.








