ಹೊಸದಿಲ್ಲಿ, ಮೇ 13 : ಮೇ 17 ರ ನಂತರ ದೇಶೀಯ ಮಟ್ಟದಲ್ಲಿ ವಿಮಾನಯಾನ ಸೇವೆ ಬಹುತೇಕ ಖಚಿತವಾಗಿದೆ. ಕೊರೋನಾ ಸೋಂಕು ವ್ಯಾಪಕವಾಗಿ ಹರಡಲು ಪ್ರಾರಂಭವಾದಾಗ ರೈಲು ಸೇವೆ ಸೇರಿದಂತೆ ಎಲ್ಲಾ ಅಂತರರಾಷ್ಟ್ರೀಯ, ದೇಶೀಯ ವಿಮಾನ ಸೇವೆಗಳನ್ನು ನಿಲ್ಲಿಸಲಾಗಿತ್ತು. ಈಗಾಗಲೇ ರೈಲು ಸೇವೆ ಆರಂಭವಾಗಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ದೇಶೀಯ ವಿಮಾನ ಸೇವೆ ಕೂಡ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಲಾಕ್ ಡೌನ್ ನಿಂದಾಗಿ ಸ್ಥಗಿತಗೊಳಿಸಿದ್ದ ವಿವಿಧ ಸಂಸ್ಥೆಗಳ ವಾಣಿಜ್ಯ ವಿಮಾನಗಳ ಸೇವೆ ಎರಡು ತಿಂಗಳುಗಳ ಬಳಿಕ ಪುನರಾರಂಭವಾಗಲಿದ್ದು, ದೇಶೀಯ ಮಟ್ಟದಲ್ಲಿ ವಿಮಾನಗಳು ರೆಕ್ಕೆ ಬಿಚ್ಚಿ ಹಾರಾಡಲು ಸಜ್ಜಾಗಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಸೇವೆ ಪುನರಾರಂಭ ಕುರಿತು ವಿವರವಾಗಿರುವ ಮಾರ್ಗಸೂಚಿ ಸಿದ್ಧ ಪಡಿಸಿದ್ದು, 80 ವರ್ಷ ದಾಟಿದವರಿಗೆ ವಿಮಾನಯಾನಕ್ಕೆ ಅನುಮತಿ ನಿರಾಕರಿಸಿದೆ. ಆರೋಗ್ಯವಂತರಿಗೆ ಮಾತ್ರ ವಿಮಾನಯಾನಕ್ಕೆ ಅವಕಾಶ ಕಲ್ಪಿಸಿರುವುದರ ಜೊತೆಗೆ ಕ್ಯಾಬಿನ್ ಲಗೇಜ್ ಗೆ ನಿರ್ಬಂಧ ಹೇರಿದೆ. ಎರಡು ತಾಸಿಗಿಂತ ಕಡಿಮೆ ಪಯಣದ ಅವಧಿಯ ವಿಮಾನಗಳಲ್ಲಿ ಕೇಟರಿಂಗ್ ಸೇವೆಯನ್ನು ನಿಲ್ಲಿಸಲಾಗಿದ್ದು, ಆರೋಗ್ಯ ಸೇತು ಆ್ಯಪ್, ಮಾಸ್ಕ್ ಮತ್ತು ಕೈಗವಸುಗಳು ಕಡ್ಡಾಯ.
ವಿಮಾನಗಳ ಒಳಗೆ ಆಸನಗಳಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿದ್ದು, ಅವರ ಹಿಂದಿನ ಸಾಲಿನ ಆಸನ ಖಾಲಿ ಇರಲಿದೆ. ಮನೆಯಿಂದಲೇ ವೆಬ್ ಚೆಕ್ ಇನ್ ಸೇರಿದಂತೆ ಹಲವು ಅಂಶಗಳನ್ನು ಮಾರ್ಗಸೂಚಿ ಒಳಗೊಂಡಿದೆ.
ಪ್ರಮುಖ ನಗರಗಳಿಗೆ ಮಾತ್ರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಿಮಾನಗಳು ಹಾರಾಟ ನಡೆಸಲಿದ್ದು, ವಿಮಾನಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಮತ್ತು ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.
56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...








