ಸರ್ಕಾರಿ ಬಸ್‌ಗಳ ಖಾಸಗಿಕರಣ ಇಲ್ಲ, ಸರ್ಕಾರವೇ ನಡೆಸಲಿದೆ….
ಸರ್ಕಾರಿ ಬಸ್ ಸಂಸ್ಥೆಯನ್ನ ಖಾಸಗಿಕರಣ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿತ್ತು ಅದಕ್ಕೆ ರಾಜ್ಯ ಸರ್ಕಾರ ಫುಲ್ ಸ್ಟಾಪ್ ಇಟ್ಟಿದೆ. ಲಾಭವಾಗಲಿ ನಷ್ಟವಾಗಲಿ ಸರ್ಕಾರಿ ಬಸ್ ಗಳನ್ನ ರಾಜ್ಯವೇ ನಡೆಸಲಿದೆ ಎಂದು ಇಂದಿನ ಕಲಾಪದಲ್ಲಿ ತಿಳಿಸಿದ್ದಾರೆ.
ಇಂದಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಬಿಎಂಟಿಸಿ ಒಳಗೊಂಡಂತೆ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವಿಧಾನ ಪರಿಷತ್ತಿಗಿಂದು ತಿಳಿಸಿದ್ದಾರೆ. ಕಾರ್ಮಿಕರ, ಸಾರ್ವಜನಿಕರ ಹಿತ ದೃಷ್ಠಿಯಿಂದ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವುದಿಲ್ಲ. ಅಂತಹ ಯಾವ ಪ್ರಸ್ತಾವಗಳು ಸರ್ಕಾರದ ಮುಂದಿಲ್ಲ ಎಂದರು.
B M T C ಸಂಸ್ಥೆ ಒಟ್ಟು 733 ಕೋಟಿ ಸಾಲ ಪಡೆದಿದೆ. ಅದರಲ್ಲಿ 195 ಕೋಟಿ ರೂ. ಮರು ಪಾವತಿ ಮಾಡಿದೆ. ಸಾರಿಗೆ ಸಂಸ್ಥೆಗಳ ಹಳೆಯ ಬಸ್‍ಗಳನ್ನು ನಿಯಮಾನುಸಾರ ಬದಲಾವಣೆ ಮಾಡಲಾಗುತ್ತಿದೆ. ಅದರಲ್ಲಿ 8 ಲಕ್ಷ ಕಿಲೋ ಮೀಟರ್ ಓಡಿರುವ ಅಥವಾ 11 ವರ್ಷ ಹಳೆಯದಾದ ವಾಹನಗಳನ್ನು ಬದಲಾವಣೆ ಮಾಡಲಾಗುತ್ತಿದೆ. ವೋಲ್ವೋ ಬಸ್ ಗಳು 10 ಲಕ್ಷ ಕಿಲೋ ಮೀಟರ್ ಸಂಚರಿಸಿದ ಬಳಿಕ ವಿಲೇವಾರಿ ಮಾಡಲಾಗುವುದು ಎಂದರು
ಟೀಮ್ ಇಂಡಿಯಾದ ಟರ್ಬನೇಟರ್ – ಹರ್ಭಜನ್ ಸಿಂಗ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ……








