ಲಾಹೋರ್, ಮೇ 13 : ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್ ಭಾರತದ ಮೇಲೆ ತಕ್ಷಣ ಸೇನಾ ದಾಳಿ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಸೇರಿಸಿಕೊಂಡು ಹವಾಮಾನ ವರದಿ ಪ್ರಕಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜಾ ಫಾರೂಕ್ ಹೈದರ್, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ತನಗೆ ಸೇರಿದ್ದು ಎಂದು ಬಿಂಬಿಸಲು ಈ ಹವಾಮಾನ ವರದಿ ಪ್ರಕಟ ಮಾಡಿದೆ. ತಕ್ಷಣ ಭಾರತದ ಮೇಲೆ ಸೇನಾ ದಾಳಿ ನಡೆಸಿ, ಉದ್ಧಟತನದ ವರ್ತನೆಗೆ ತಕ್ಕ ಶಾಸ್ತಿ ಮಾಡಬೇಕು. ಕೇವಲ ಮೌಖಿಕ ಹೇಳಿಕೆ ಸಾಕಾಗದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರನ್ನು ಆಗ್ರಹಿಸಿದ್ದಾರೆ.
ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಲ್ಲೇ ಇರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್ ಈ ಮೊದಲು ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಕಾರ್ಯಾಚರಣೆ ನಿರಂತರವಾಗಿದ್ದರೆ ಮಾತ್ರ ಪಿಒಕೆ ನೆಮ್ಮದಿಯಾಗಿರುತ್ತದೆ ಎಂದು ಹೇಳಿದ್ದರು.
ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.
56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...








