ನಂಜುಂಡನ ಹುಂಡಿ ಎಣಿಕೆ.. 2.15 ಕೋಟಿ ಕಾಣಿಕೆ ಸಂಗ್ರಹ Nanjunda saaksha tv
ಮೈಸೂರು : ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 2,15,80,467/- (ಎರಡು ಕೋಟಿ ಹದಿನೈದು ಲಕ್ಷ ಎಂಭತ್ತು ಸಾವಿರದ ನಾಲ್ಕುನೂರ ಅರವತ್ತೇಳು ರೂ) ಹಣ ಸಂಗ್ರಹವಾಗಿದೆ.
ಕಳೆದ ತಿಂಗಳ ಸಂಗ್ರಹಕ್ಕೆ ಹೋಲಿಸಿದರೆ ಈ ಬಾರಿ 57 ಲಕ್ಷ ಹಣ ಹೆಚ್ಚುವರಿಯಾಗಿ ಸಂಗ್ರಹವಾಗಿದೆ.
ಕೊರೊನಾ ಮುಕ್ತವಾದ ನಂತರ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆ ಹುಂಡಿ ಕಾಣಿಕೆಯಲ್ಲೂ ಹೆಚ್ಚು ಹಣ ಸಂಗ್ರಹವಾಗಿದೆ.
ಈ ಬಾರಿಯೂ ಭಕ್ತರು ನಿಷೇಧಿತ ನೋಟುಗಳನ್ನ ನಂಜುಂಡನಿಗೆ ಕಾಣಿಕೆಯಾಗಿ ನೀಡಿದ್ದಾರೆ.
ಒಟ್ಟು 42 ಸಾವಿರ ಮೌಲ್ಯದ ನಿಷೇಧಿತ ನೋಟುಗಳು ಸಂಗ್ರಹವಾಗಿದೆ. ವಿದೇಶಿ ಭಕ್ತರೂ ಸಹ ನಂಜುಂಡನಿಗೆ ಕಾಣಿಕೆ ಅರ್ಪಿಸಿದ್ದಾರೆ.
29 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ. ಇದು ಬಿಟ್ಟರೇ 108 ಗ್ರಾಂ ಚಿನ್ನ ಹಾಗೂ 5 ಕೆಜಿ 750 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಬ್ಯಾಂಕ್ ಸಿಬ್ಬಂದಿಗಳು ಸೇರಿದಂತೆ ಸುಮಾರು 40 ಕ್ಕೇ ಹೆಚ್ಚು ಮಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.









