ಕಿಟ್ಟಿ-ಚಿನ್ನು ಪ್ರೇಮ ವ್ಯಥೆ.. ಚಿಕ್ಕಣ್ಣ ಮಸ್ತ್ ಕಾಮಿಡಿ : ರೈಡರ್ ಸಿನಿಮಾ ರಿವ್ಯೂ
ಚಿತ್ರ : ರೈಡರ್
ನಟ : ನಿಖಿಲ್ ಕುಮಾರಸ್ವಾಮಿ, ಕಾಶ್ಮೀರಾ, ಚಿಕ್ಕಣ್ಣ, ಶೋಬರಾಜ್, ಗರುಡಾರಾಮ್,
ನಿದೇಶಕ : ವಿಜಯ್ ಕೊಂಡ
ಸಂಗೀತ : ಅರ್ಜುನ್ ಜನ್ಯ
ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಥಿಯೇಟರ್ ಅಂಗಳಕ್ಕೆ ಬಂದಿದೆ. ಜಾಗ್ವಾರ್, ಸೀತಾರಾಮ ಕಲ್ಯಾಣ ಸಿನಿಮಾಗಳ ಬಳಿಕ ನಿಖಿಲ್ ರೈಡರ್ ಚಿತ್ರದ ಮೂಲಕ ಬೆಳ್ಳೆ ಪರದೆ ಮೇಲೆ ಬಂದಿದ್ದಾರೆ. ಈ ಸಿನಿಮಾ ಬಗ್ಗೆ ವಿಶೇಷ ನಿರೀಕ್ಷೆ ಇಲ್ಲದಿದ್ದರೂ, ನಿಖಿಲ್ ಅಭಿನಯ ಸಿನಿಮಾ ಅನ್ನೋದಷ್ಟೆ ಚಿತ್ರದ ವಿಶೇಷತೆ ಹಾಗೂ ಒಂದಿಷ್ಟು ನಿರೀಕ್ಷೆಗೆ ಕಾರಣವಾಗಿತ್ತು. ಹಾಗಾದ್ರೆ ಒಂದಿಷ್ಟು ನಿರೀಕ್ಷೆಗಳೊಂದಿಗೆ ಚಿತ್ರಮಂದಿರಕ್ಕೆ ಬಂದಿರುವ ರೈಡರ್ ಹೇಗಿದೆ..?
ಚಿತ್ರದ ಕಥೆ ವಿಚಾರಕ್ಕೆ ಬಂದ್ರೆ ಅನಾಥಾಶ್ರಮದಲ್ಲಿ ಸ್ನೇಹಿತರಾಗಿದ್ದ ಕಿಟ್ಟಿ-ಚಿನ್ನು ಆ ನಂತರ ದೂರು ಆಗ್ತಾರೆ. ಕೊನೆಯಲ್ಲಿ ಒಂದಾಗ್ತಾರೆ.. ಹೀಗೆ ಒಂದಾಗುವ ಪ್ರೋಸೆಸ್ ನಲ್ಲಿ ಏನೆಲ್ಲಾ ಆಗುತ್ತೆ. ಏನ್ ಎಲ್ಲಾ ಮಾಡ್ಬೇಕಾಗುತ್ತೆ. ಕೊನೆಯಲ್ಲಿ ಇಬ್ಬರು ಒಂದಾಗಿದ್ದು, ಹೇಗೆ ಅನ್ನೋದೇ ಸಿನಿಮಾ ಕಥೆ.
ವಿಮರ್ಷೆ
ಈ ಚಿತ್ರಕ್ಕೆ ಯಾಕೆ ರೈಡರ್ ಅಂತ ಟೈಟಲ್ ಇಟ್ಟಿದ್ದಾರೇ ಅನ್ನೋದು ಸಿನಿಮಾದಲ್ಲಿ ಗೊತ್ತಾಗಲ್ಲ. ಅಂದಹಾಗೆ ಈ ಸಿನಿಮಾದಲ್ಲಿ ನಿಖಿಲ್ ಸೂರ್ಯ ಪಾತ್ರಧಾರಿಯಾಗಿದ್ದು, ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಹಾಗಂತೆ ಇದು ಬಾಸ್ಕೆಟ್ ಬಾಲ್ ಆಟದ ಮೇಲೆ ನಿಂತಿರುವ ಚಿತ್ರವಲ್ಲ. ಇದೊಂದು ಫೀಲ್ ಗುಡ್.. ಪ್ರೇಮ್ ಕಹಾನಿ..
ಆದ್ರೆ ನಿರ್ದೆಶಕ ವಿಜಯ್ ಕೊಂಡ ಅವರು ಕ್ಲೈಮ್ಯಾಕ್ಸ್ ಗಾಗಿ ಪ್ರೇಕ್ಷಕರನ್ನ ಸೀಟಿನಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಲ್ಲಿ ಸಿನಿಮಾವನ್ನು ಎಳೆದಂತೆ ಅನಿಸಿದ್ರೂ ಚಿಕ್ಕಣ್ಣ ಅವರ ಕಾಮಿಡಿ ಕಿಕ್ ಕೊಡುತ್ತೆ. ತುಂಬಾ ದಿನಗಳ ಬಳಿಕ ಚಿಕ್ಕಣ್ಣ ಅವರಿಗೆ ಈ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಅದನ್ನ ಅವರು ಅದ್ಭುತವಾಗಿ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ಖುಷಿ ಕೊಡುವ ವಿಚಾರ ಅಂದರೇ ಹೀರೋಗೆ ಅಂತಾ ಹೆಚ್ಚಾಗಿ ಬಿಲ್ಡಪ್ ಕೊಟ್ಟಿಲ್ಲ. ಕಥೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಿಖಿಲ್ ಗಾಗಿಯೇ ಫೈಟ್ ಗಳನ್ನ ಕಂಪೋಸ್ ಮಾಡಿದ್ದಾರೆ, ಅದು ಚೆನ್ನಾಗಿದೆ. ಫೈಟ್, ಡ್ಯಾನ್ಸ್ ಮೂಲಕ ನಿಖಿಲ್ ಇಂಪ್ರೆಸ್ ಮಾಡ್ತಾರೆ. ಹಾಗೇ ಗೆಳತಿಗಾಗಿ ಕಾಯೋ ಅಮರ ಪ್ರೇಮಿಯಾಗಿ ನ್ಯಾಚುರಲ್ ಆಗಿ ನಟಿಸಿದ್ದಾರೆ.
ಇನ್ನು ಸಿನಿಮಾದಲ್ಲಿ ಗರುಡರಾಮ್ ಅವರನ್ನ ವಿಲನ್ ರೀತಿ ತೋರಿಸಲಾಗುತ್ತದೆ. ಆದ್ರೆ ಈ ಚಿತ್ರದಲ್ಲಿ ನಿಜವಾದ ವಿಲನ್ ಗಳು ಸನ್ನಿವೇಶಗಳೇ ಆಗಿವೆ. ಇನ್ನೇನು ಇಬ್ಬರೂ ಒಂದಾಗಬೇಕು ಅನ್ನೋಷ್ಟರಲ್ಲಿ ಏನೋ ಒಂದು ಎಡವಟ್ಟು ಆಗುತ್ತೆ. ಇಂತಹ ವಿಲನ್ ಸನ್ನಿವೇಶಗಳು ಸಿನಿಮಾದಲ್ಲಿ ದಂಡಿಯಾಗಿವೆ.
ಚಿತ್ರದಲ್ಲಿ ಕ್ಯಾಮೆರಾ ವರ್ಕ್ ಚೆನ್ನಾಗಿದೆ, ಅರ್ಜುನ್ ಜನ್ಯ ಸಂಗೀತ ಹಾಡಿನಲ್ಲಿ ಗಮನ ಸೆಳೆಯುತ್ತದೆ. ಹಾಗೇ ಫೈಟ್ ಸೀನ್ ಗಳಲ್ಲಿ ಬರುವ ಬಿಜಿಎಂ ಚೆನ್ನಾಗಿದೆ ಇನ್ನು ಅಚ್ಚುತ್ ಕುಮಾರ್, ರಾಜೇಶ್ ನಟರಂಗ್, ಶಿವರಾಜ್ ಕೆ,ಆರ್ ಪೇಟೆ, ಶೋಭರಾಜ್, ದತ್ತಣ್ಣ, ಮಂಜು ಪಾವಗಡ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಒಟ್ಟಾರೆ ರೈಡರ್ ಚಿತ್ರ ಒಂದು ಫೀಲ್ ಗುಡ್ ಲವ್ ಸ್ಟೋರಿ.. ಕಿಟ್ಟು-ಚಿನ್ನು ಕಹಾನಿಗೆ ಕನೆಕ್ಟ್ ಆಗಿ, ಚಿಕ್ಕಣ್ಣನ ಕಾಮಿಡಿ ಎಂಜಾಯ್ ಮಾಡುತ್ತಾ ಇಡೀ ಫ್ಯಾಮಿಲಿ ಮಂದಿಯಲ್ಲಾ ಕೂತು ನೋಡುವ ಫ್ಯಾಮಿಲಿ ಎಂಟರ್ ಟೈನರ್..
ರೇಟಿಂಗ್ : 3/5