ನಟ, ನಿರ್ದೇಶಕ ನಾಗಶೇಖರ್ ಗೆ ಮಹಿಳೆಯಿಂದ ವಂಚನೆ Nagasekhar saaksha tv
ನಟ, ನಿರ್ದೇಶಕ ನಾಗಶೇಖರ್ ಅವರಿಗೆ ಮಹಿಳೆಯೊಬ್ಬರು ವಂಚನೆ ಮಾಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನಾಗಶೇಖರ್ ಅವರು 2020ರ ಆಗಸ್ಟ್ ನಲ್ಲಿ ಆರ್ ಆರ್ ನಗರದ ಜಯಣ್ಣ ಲೇಔಟ್ ನಲ್ಲಿ ಮನೆ ಖರೀದಿಗಾಗಿ ಮನೆ ಮಾಲೀಕೆ ಮೀನಾ ಎಂಬುವರೊಂದಿಗೆ 2.70 ಕೋಟಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದರಂತೆ.
ಅಲ್ಲದೇ ಒಂದೇ ಸಲ ಹಣ ನೀಡದೇ ಹಂತ ಹಂತವಾಗಿ 50 ಲಕ್ಷ ರೂಪಾಯಿಗಳನ್ನ ಮೀನಾ ಅವರಿಗೆ ನೀಡಿದ್ದಾರೆ.
ಆದ್ರೆ ಮನೆ ಮಾಲೀಕೆ ಮೀನಾ ಅವರು. ಹಣ ಪಡೆದು, ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದರೂ. ಬೇರೆಯವರಿಗೆ ಮನೆ ಮಾರಾಟ ಮಾಡಿದ್ದಾರೆ.
ಈ ವಿಷಯ ತಿಳಿದ ನಾಗಶೇಖರ್ ಅವರು ಮೀನಾ ಅವರನ್ನು ಪ್ರಶ್ನಿಸಿದಾಗ, ದುಡ್ಡು ವಾಪಸ್ ಮಾಡದೇ, ಮನೆಯೂ ಕೊಡದೇ ಸತಾಯಿಸಿದ್ದಾರಂತೆ.
ಹೀಗಾಗಿ ನ್ಯಾಯ ದೊರಕಿಸಿಕೊಡುವಂತೆ ನಾಗಶೇಖರ್ ಅವರು ರಾಜರಾಜೇಶ್ವರಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.









