ರಾಮ್ – ತಾರಕ್ ಮುಂದೆ ಡ್ಯಾನ್ಸ್ ನಲ್ಲಿ ಸೋತ ಸಲ್ಲು… “ದೊಡ್ಡವನಾದ್ಮೇಲೆ ಅವರಂತೆ ನೃತ್ಯ ಮಾಡ್ತೀನಿ” ಎಂದರು…!
ಸದ್ಯ ದೇಶಾದ್ಯಂತ RRR ಮೇನಿಯಾ ಇದೆ… ದೇಶದ ಮೂಲೆ ಮೂಲೆಯಲ್ಲಿ ಜನ RRR ಸಿನಿಮಾಗಾಗಿ ತುದಿಗಾಲಿನಲ್ಲಿ ಕಾಯ್ತಾ ಇದ್ದಾರೆ.. ಜನವರಿ 7 ಕ್ಕೆ ಸಿನಿಮಾ ಅಧ್ಧೂರಿಯಾಗಿ ಥಿಯೇಟರ್ ಗಳಿಗೆ ಎಂಟ್ರಿ ಕೊಡಲಿದೆ.. ತೆಲುಗು , ಕನ್ನಡ, ಹಿಂದಿ , ತಮಿಳು , ತೆಲುಗು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ..
ಬಾಹುಬಲಿ ಅಂತಹ ಸೂಪರ್ ಹಿಟ್ ಸಿನಿಮಾ ನೀಡಿದ ಮೇಲೆ ಜಕ್ಕಣ್ಣನ ಪವರ್ ಏನು ಅನ್ನೋದು ಬಾಲಿವುಡ್ ಮಂದಿಗೂ ಗೊತ್ತಾಗಿದೆ.. ರಾಜಮೌಳಿ , ರಾಮ್ ಚರಣ್ , ಜ್ಯೂ.NTR ಕಾಂಬಿನೇಷನ್ ಈ ಸಿನಿಮಾದಲ್ಲಿ ಹಾಡುಗಳೂ ಕೂಡ ಅಷ್ಟೇ ಸೂಪರ್.. ಯೂಟ್ಯೂಬ್ ನಲ್ಲಿ ಈಗಾಗಲೇ ಈ ಹಾಡುಗಳು ಧೂಳೆಬ್ಬಿಸಿವೆ..
#BiggBoss 15 star-studded with the team #RRR
Catch all the fun tonight 9:30PM IST on @ColorsTV@BeingSalmanKhan #RRRMovie @ssrajamouli @tarak9999 @AlwaysRamCharan @aliaa08 #RRRinUSA premieres Jan 6th🇺🇸 by @sarigamacinemas and @RaftarCreations
— Sarigama Cinemas (@sarigamacinemas) December 25, 2021
ಅದ್ರಲ್ಲೂ ರಾಮ್ ಚರಣ್ ಮತ್ತೆ ತಾರಕ್ ಒಟ್ಟಿಗೆ ಮಸ್ತ್ ಸ್ಟೆಪ್ಸ್ ಹಾಕಿರುವ ನಾಟು ನಾಟು ಸಾಂಗ್ ಅಂತೂ ಸಖತ್ ವೈರಲ್ ಆಗಿದೆ.. ಜನರು ಇದಕ್ಕೆ ರೀಲ್ಸ್ ಮಾಡೋದು , ಈ ಸ್ಟೆಪ್ಸ್ ನ ಟ್ರೈ ಮಾಡೋದು ಮುಂದುವರೆದಿದೆ.. ಈ ನಡುವೆ ಖುದ್ದು ಸಲ್ಲು ಕೂಡ ಈ ಸ್ಟೆಪ್ಸ್ ಟ್ರೈ ಮಾಡಿದ್ದಾರೆ.. ಅದ್ರಲ್ಲೂ ರಾಮ್ ಚರಣ್ ಜ್ಯೂನಿಯರ್ NTR ಜೊತೆಗೆ..
RRR ತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.. ಕಪಿಲ್ ಶರ್ಮಾ ಕಾಮಿಡಿ ಶೋ , ಕಬಡ್ಡಿ ಸ್ಟೇಡಿಯಮ್ ನಲ್ಲೂ ಪ್ರಚಾರ ಮಾಡಿದ್ದಾರೆ.. ಬೆಂಗಳೂರು , ಕೇರಳ , ತಮಿಳುನಾಡು ಮುಂಬೈ ಕೂಡ ಸುತ್ತಿದ್ದಾರೆ..
ಈಗ ಸಲ್ಮಾನ್ ಖಾನ್ ನಡೆಸಿಕೊಡ್ತಿರುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ BIGGBOSS ಗೆ ಹೋಗಿ ಅಲ್ಲಿಯೂ ಸಿನಿಮಾದ ಪ್ರಚಾರ ಮಾಡಿದ್ದಾರೆ.. ಅಲ್ಲಿ ವೇದಿಕೆ ಮೇಲೆ ರಾಮ್ ಚರಣ್ , ಜ್ಯೂ.NTR ಡ್ಯಾನ್ಸ್ ನೋಡಿ ಬಾಲಿವುಡ್ ಸುಲ್ತಾನ ಬೆರಗಾಗಿದ್ದಾರೆ..ಕಾರ್ಯಕ್ರಮದಲ್ಲಿ ಆಲಿಯಾ ಕೂಡ ಇದ್ರು..
ಇದೇ ವೇಳೆ ಅಲ್ಲು , ರಾಮ್ ಚರಣ್ ಅವರಂತೆಯೇ ಡ್ಯಾನ್ಸ್ ಮಾಡಲು ಸಲ್ಲು ಅವರನ್ನ ಕೇಳಿಕೊಂಡ ನಂತರ ಅವರು ಡ್ಯಾನ್ಸ್ ಮಾಡಿದ್ರು.. ಆದ್ರೆ ಆ ಇಬ್ಬರಂತೆಯೇ ಡ್ಯಾನ್ಸ್ ಮಾಡಲು ಕಷ್ಟಪಟ್ಟರು.. ಬಳಿಕ ತಮಾಷೆ ಮಾಡಿದ ಬಾಲಿವುಡ್ ಭಾಯ್ ಜಾನ್ “ ನಾನು ದೊಡ್ಡವನಾದ ನಂತರ ಜ್ಯೂ. NTR ಹಾಗೂ ರಾಮ್ ಚರಣ್ ಅವರಂತೆ ಡ್ಯಾನ್ಸ್ ಮಾಡುವೆ” ಎಂದು ಅಲ್ಲಿದ್ದವರನ್ನೆಲ್ಲಾ ನಗಿಸಿದ್ದಾರೆ..