ನಾಸಾದ ಬಾಹ್ಯಾಕಾಶ ದೂರದರ್ಶಕ ‘ಜೇಮ್ಸ್ ವೆಬ್’ ಉಡಾವಣೆ..!
ನಾಸಾದ ಬಾಹ್ಯಾಕಾಶ ದೂರದರ್ಶಕ ‘ಜೇಮ್ಸ್ ವೆಬ್’ ಅನ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.. ಇದನ್ನ ಸದ್ಯ ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶಕವೆಂದೇ ಬಿಂಬಿಸಲಾಗ್ತಿದೆ.. ದೂರದರ್ಶಕವನ್ನು ಫ್ರೆಂಚ್ ಗಯಾನಾದ ಕುರು ಉಪಗ್ರಹ ಉಡಾವಣಾ ಕೇಂದ್ರದಿಂದ ಶನಿವಾರ ಉಡಾವಣೆ ಮಾಡಲಾಗಿದೆ. ಇದು ಭೂಮಿಯಿಂದ 15 ಲಕ್ಷ ಕಿ.ಮೀ ಅಂದ್ರೆ ಸರಿ ಸುಮಾರು 9,30,000 ಮೈಲು ದೂರದ ಕಕ್ಷೆ ಸೇರುವ ಗುರಿ ಹೊಂದಿದೆ. ಇನ್ನೂ ಈ ದೂರದರ್ಶಕವು ಏರಿಯನ್ 5 ರಾಕೆಟ್ ನೊಂದಿಗೆ ಪ್ರಯಾಣ ಬೆಳೆಸಿದೆ.. ಇದು ಒಂದು ತಿಂಗಳಲ್ಲಿ ತನ್ನ ಗಮ್ಯ ಸ್ಥಾನವನ್ನ ತಲುಪಲಿದೆ ಎನ್ನಲಾಗಿದೆ.
ಹಬಲ್ ದೂರದರ್ಶಕಕ್ಕಿಂತ ಹಲವು ಪಟ್ಟು ಶಕ್ತಿಶಾಲಿಯಾಗಿರುವ ಈ ದೂರದರ್ಶಕಕವು ವಿಶ್ವ ಹೇಗೆ ಉಗಮವಾಯಿತು ಎಂಬುದನ್ನು ಅರಿತುಕೊಳ್ಳಲು ನೆರವಾಗಲಿದೆ ಎನ್ನಲಾಗಿದೆ. ಜೊತೆಗೆ ಈವರೆಗೆ ನೋಡಿರುವ ಗೆಲಾಕ್ಸಿಗಳಿಗಿಂತಲೂ ಬಹುದೂರವಿರುವ ಗೆಲಾಕ್ಸಿಗಳನ್ನು ಈ ದೂರದರ್ಶಕವು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ ಎನ್ನಲಾಗ್ತಿದೆ.. ಒಟ್ಟಾರೆ ಇಡೀ ವಿಶ್ವವೇ ಈ ದೂರದರ್ಶಕದತ್ತ ತನ್ನ ಚಿತ್ತ ನೆಟ್ಟಿದೆ..








