ಇದು ರಾಜಕೀಯ ಚಳುವಳಿ ಅಲ್ಲ.. ರಾಜ್ಯಕ್ಕೆ ಅನುಕೂಲವಾಗುವ ಪಾದಯಾತ್ರೆ d k shivakumar saaksha tv
ತುಮಕೂರು : ಇದು ರಾಜಕೀಯ ಚಳುವಳಿ ಅಲ್ಲ.. ರಾಜ್ಯಕ್ಕೆ ಅನುಕೂಲವಾಗುವ ಪಾದಯಾತ್ರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಮುಂದಿನ ತಿಂಗಳ ಆರಂಭದಲ್ಲಿ ಪಾದಯಾತ್ರೆ ಆರಂಭಿಸಲಿದೆ.
ಈ ಬಗ್ಗೆ ತುಮಕೂರಿನಲ್ಲಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಮೇಕೆದಾಟು ರಾಜ್ಯದ ಜ್ವಲಂತ ಸಮಸ್ಯೆಯಾಗಿದೆ. ಜಲಾಶಯ ಮಾಡಲು ನಮ್ಮ ಸರ್ಕಾರ ಡಿಪಿಆರ್ ಮಾಡಿತ್ತು.
ನಾವು ಮಾಡಿದ್ದ ಡಿಪಿಆರ್ ಒಪ್ಪಿಕೊಂಡು ಅನುಮತಿ ಕೊಟ್ಟಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಎನ್.ಒ.ಸಿ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಣೆಕಟ್ಟೆಗೆ 9500 ಕೋಟಿ ರೂ ಅಂತಿಮವಾಗಿದೆ. ಮೇಕೆದಾಟಿನ ನೀರಿನಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು.
ಬೆಂಗಳೂರಿಗೆ ಕುಡಿಯುವ ನೀರು ಸಿಗುತ್ತದೆ. ಕಾಮಗಾರಿ ಆರಂಭ ಮಾಡುವಂತೆ ಒತ್ತಾಯಿಸಿ ಪಾದಯಾತ್ರೆ ಆರಂಭಿಸುತ್ತೇವೆ.
ಜನವರಿ 09 ರಿಂದ ಮೇಕೆದಾಟಿನಿಂದ ಪಾದಯಾತ್ರೆ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಪ್ರತಿ ಜಿಲ್ಲೆ, ತಾಲೂಕಿನಿಂದ ಕಾರ್ಯಕರ್ತರು ಬರುತ್ತಾರೆ. ಪಕ್ಷಾತೀತವಾಗಿ ಎಲ್ಲ ಸಂಘಟನೆಗಳು ಭಾಗವಹಿಸಬಹುದು.
ಕನ್ನಡ ಸಂಘಟನೆ, ಚಲನ ಚಿತ್ರ ಮಂಡಳಿ ಸೇರಿದಂತೆ ಎಲ್ಲರಿಗೂ ಅವಕಾಶ ಇದೆ. ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ. ಪಾದಯಾತ್ರೆ ರಾಜಕೀಯ ಉದ್ದೇಶದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮತಾಂತರ ನಿಷೇಧ ಕಾಯಿದೆ ಅಂಗೀಕಾರ ದಿನ ಗೈರಾದ ಬಗ್ಗೆ ಮಾತನಾಡಿದ ಅವರು, ನಾನು ಗೈರಾಗಿದ್ದು ನಿಗದಿತ ಕಾರ್ಯ ಕ್ರಮಕ್ಕೆ ಹೋಗಿದ್ದರಿಂದ.
ಅದರ ಹಿಂದೆ ಬೇರೆ ಉದ್ದೇಶ ಇಲ್ಲ. ಸಿಎಲ್ ಪಿ ನಾಯಕರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.









