ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಒಂದೆಡೆ ಡಬ್ಬಿಂಗ್ ಸಿನಿಮಾಗಳ ಕಾಟವಾದ್ರೆ , ಮತ್ತೊಂದ್ ಕಡೆ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ನಿಂದ ತೊಂದ್ರೆ… ಆದ್ರೆ ಎಲ್ಲದಕ್ಕಿಂತ ದೊಡ್ಡ ತೊಂದ್ರೆ ಅಂದ್ರೆ ಪೈರೆಸಿ ಭೂತ..
ಇದೇ ಪೈರೆಸಿ ಕಾಟಕ್ಕೆ ತುತ್ತಾಗಿದೆ ಯುವರಾಜ ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾ.. ರೈಡರ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ.. ಆದ್ರೆ ರಿಲೀಸ್ ಆದ 2ನೇ ದಿನಕ್ಕೆ ಸಿನಿಮಾ ಲೀಕ್ ಆಗಿದ್ದು, ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ..
ಡಿಸೆಂಬರ್ 24ಕ್ಕೆ ಸಿನಿಮಾ ರಿಲೀಸ್ ಆಗಿತ್ತು.. ಆದ್ರೆ ರಿಲೀಸ್ ಆದ 2ನೇ ದಿನಕ್ಕೆ ಸಿನಿಮಾ ಸೋರಿಕೆಯಾಗಿದೆ. ರೈಡರ್ ಚಿತ್ರವನ್ನು ತಮಿಳು ರಾಕರ್ಸ್ ಒಹಾಗೂ ಮರಾಠಿಗರು ಪೈರಸಿ ಮಾಡಿದ್ದಾರೆ. ವಿವಿಧ ವೆಬ್‌ಸೈಟ್ ನಲ್ಲಿ ಕಿಡಿಗೇಡಿಗಳು ಸಿನಿಮಾ ಹರಿಬಿಟ್ಟಿದ್ದಾರೆ.. ಟೆಲಿಗ್ರಾಂನಲ್ಲೂ ಕೂಡ ರೈಡರ್ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ನಿಖಿಲ್ , ನಮ್ಮ ‘ರೈಡರ್’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಕೆಲವು ಕಿಡಿಗೇಡಿಗಳು ನಮ್ಮ ಚಿತ್ರವನ್ನು ಪೈರಸಿ ಮಾಡಿದ್ದಾರೆ. ದಯವಿಟ್ಟು ಪೈರಸಿ ವಿಡಿಯೋವನ್ನು ನೋಡದೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಕನ್ನಡ ಚಿತ್ರರಂಗವನ್ನು ಉಳಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸಿ, ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೇ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವುದಕ್ಕೆ , ಕನ್ನಡಪರ ಹೋರಾಟಗಾರರ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.. ಕರ್ನಾಟಕ ಬಂದ್ ಮಾಡುವುದರಿಂದ ಏನಾದರು ಪ್ರಯೋಜನಾ ಆಗುತ್ತಾ, ಕೇವಲ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಬಂದ್ ಮಾಡಬಾರದು ಎಂದು ಕಿಡಿಕಾರಿದ್ದಾರೆ..








