ಪೊಲೀಸರು ಇಲ್ದೇ ರಿಕ್ಷಾ ಚಾಲಕರೂ ಸಹ ರಾಜಕಾರಣಿಗಳ ಮಾತು ಕೇಳಲ್ಲ : ಸಿಧುಗೆ DCP ಟಾಂಗ್
ಪಂಜಾಬ್ : ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ನ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸಾರ್ವಜನಿಕ ರ್ಯಾಲಿಯಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಪೊಲೀಸರ ಪ್ಯಾಂಟ್ ಒದ್ದೆ ಮಾಡುವಂತೆ ಹೇಳಿದ್ದರು. ಇದು ಇಡೀ ಪೊಲೀಸ್ ಇಲಾಖೆಯ ಕಣ್ಣು ಕೆಂಪಾಗಿಸಿದೆ..
ಇದಕ್ಕೆ ಇತ್ತರಿಸಿರುವ ಚಂಡೀಗಢ ಉಪ ಪೊಲೀಸ್ ವರಿಷ್ಠಾಧಿಕಾರಿ ದಿಲ್ಶರ್ ಚಾಂಡೇಲ್ ಅವರು, ಪೊಲೀಸರು ಇಲ್ಲದೇ ರಿಕ್ಷಾ ಚಾಲಕರೂ ಕೂಡ ರಾಜಕಾರಣಿಗಳ ಮಾತನ್ನು ಕೇಳುವುದಿಲ್ಲ ಎಂದು ಸಿಧು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.. ಅಲ್ಲದೇ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಹಿರಿಯ ನಾಯಕರೊಬ್ಬರು ತಮಗೆ ರಕ್ಷಣೆ ಒದಗಿಸುವ ಪೊಲೀಸ್ ಪಡೆಯನ್ನು ಅವಮಾನಿಸಿರುವುದು ತುಂಬಾ ನಾಚಿಕೆಗೇಡಿನ ಸಂಗತಿ. ಪೊಲೀಸರು ಇಲ್ಲದೇ ರಿಕ್ಷಾ ಚಾಲಕನು ಸಹ ರಾಜಕಾರಣಿಗಳ ಮಾತನ್ನು ಕೇಳುವುದಿಲ್ಲ ಹಾಗಾಗಿ ರಾಜಕಾರಣಿಗಳು ಪೊಲೀಸರನ್ನು ಗೇಲಿ ಮಾಡಬಾರದು ಎಂದು ಕಿಡಿಕಾರಿದ್ದಾರೆ..
https://twitter.com/i/status/1474872298574258176
ಡಿಸೆಂಬರ್ 19 ರಂದು ಕಪುರ್ತಲಾ ಜಿಲ್ಲೆಯ ಸುಲ್ತಾನ್‍ಪುರ್ ಲೋಧಿಯಲ್ಲಿ ನಡೆದ ಪಕ್ಷದ ರ್ಯಾಲಿ ವೇಳೆ ಮಾತನಾಡಿದ ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ಶಾಸಕ ನವತೇಜ್ ಸಿಂಗ್ ಚೀಮಾ, ಪೊಲೀಸ್ ಅಧಿಕಾರಿಗಳ ಪ್ಯಾಂಟ್ ಒದ್ದೆ ಮಾಡಬಹುದಾದಷ್ಟು ಶಕ್ತಿಶಾಲಿಯಾಗಿದ್ದರು ಎಂದಿದ್ದರು. ಅಲ್ಲದೇ ತಮ್ಮ ಪಕ್ಷದ ಕಾರ್ಯಕರ್ತರಿಗೂ ಅದೇ ರೀತಿ ಇರಬೇಕು ಎಂದು ಹೇಳಿದ್ದರು. ಇದೇ ಇಡೀ ಪೊಲೀಸ್ ಇಲಾಖೆಯನ್ನ ಕೆರಳಿಸಿದೆ..








