ತೆಲಂಗಾಣ ಗಡಿಯಲ್ಲಿ ಎನ್ಕೌಂಟರ್, 6 ನಕ್ಸಲರ ಹತ್ಯೆ…..
ತೆಲಂಗಾಣ ಮತ್ತು ಛತ್ತೀಸ್‌ಗಢ ಗಡಿ ಪ್ರದೇಶವಾದ ಕಿಸ್ತಾರಾಮ್ ಪಿಎಸ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲೀಯರು ಹತರಾಗಿದ್ದಾರೆ. ಈ ಕಾರ್ಯಾಚರಣೆಯನ್ನು ತೆಲಂಗಾಣ ಪೊಲೀಸರು, ಛತ್ತೀಸ್‌ಗಢ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ನಡೆಸಿದ್ದರು.
ಎನ್ಕೌಂಟರ್ ಚರ್ಲಾ ವಲಯದಿಂದ 25 ಕಿಲೋ ಮೀಟರ್ ದೂರದಲ್ಲಿರುವ ಕುರ್ನವಲ್ಲಿ-ಪೆಸರ್ಲಪಡು ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದು ಭದ್ರಾದ್ರಿ ಕೊಥಗುಡೆಂ ಜಿಲ್ಲೆಯ ಎಸ್‌ಪಿ ಸುನೀಲ್ ದತ್ ಹೇಳಿದ್ದಾರೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಹತ್ಯೆಯಾಗಿರುವ 6 ನಕ್ಸಲರ ಪೈಕಿ ನಾಲ್ವರು ಮಹಿಳೆಯರು ಓರ್ವ ಪುರುಷ ಮಧು ಎಂದು ಗುರುತಿಸಲಾಗಿದೆ. ನಕ್ಸಲ್ ಮೃತ ದೇಹಗಳನ್ನ ವಶಕ್ಕೆ ಪಡೆಯಲಾಗಿದೆ.








