ಆಗ `ಗೋಲ್ಡನ್’ ರನೌಟ್.. ಈಗ ‘ಗೋಲ್ಡನ್’ ಡಕ್.. ಪೂಜಾರ ಆಫ್ರಿಕಾ ಕಥೆ pujara saaksha tv
ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪೂಜಾರ ಅಷ್ಟಾಗಿ ಪ್ರಭಾವ ಬೀರಲಿಲ್ಲ.
ಪೂಜಾರ ಕಿವೀಸ್ನೊಂದಿಗೆ ಟೆಸ್ಟ್ ಸರಣಿಯಲ್ಲಿ ಎರಡು ಟೆಸ್ಟ್ಗಳನ್ನು ಒಳಗೊಂಡು ನಾಲ್ಕು ಇನ್ನಿಂಗ್ಸ್ಗಳಲ್ಲಿ ಕೇವಲ 0, 47, 26,22 ರನ್ ಮಾತ್ರವೇ ಗಳಿಸಿದ್ದರು.
ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಪೂಜಾರ ತಮ್ಮ ಬ್ಯಾಡ್ ಫಾರ್ಮ್ ಮುಂದುವರೆಸಿದ್ದಾರೆ.
ಚೇತೇಶ್ವರ್ ಮೊದಲ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ಕ್ಯಾಚ್ ನೀಡಿ ಗೋಲ್ಡನ್ ಡಕ್ ಆಗಿ ಹಿಂತಿರುಗಿದ್ದಾರೆ.
ಎಂನ್ಗಿಡಿ ಮಾಡಿದ ಇನ್ನಿಂಗ್ಸ್ ನ 40 ನೇ ಓವರ್ ನಲ್ಲಿ ಪೂಜಾರ ಮೂರನೇ ಎಸೆತಕ್ಕೆ ಡಕೌಟ್ ಆದರು.
ಇದಕ್ಕೂ ಮುನ್ನ ಮಯಾಂಕ್ ಅಗರ್ ವಾಲ್ 60 ರನ್ ಗಳಿಸಿ ಔಟ್ ಆಗಿದ್ದರು. ಅಂದಹಾಗೆ ಚೇತೇಶ್ವರ್ ಪೂಜಾರ ಹೀಗೆ ಡಕೌಟ್ ಆಗಿದ್ದು, ಆಫ್ರಿಕಾ ನೆಲದಲ್ಲಿ ಎರಡನೇ ಬಾರಿ.
ಕಾಕತಾಳೀಯವೆಂಬಂತೆ ಪೂಜಾರ ಎಂನ್ಗಿಡಿ ಬೌಲಿಂಗ್ನಲ್ಲಿ ಎರಡು ಬಾರಿ ಡಕ್ ಆಗಿದ್ದಾರೆ.
2107-18ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸೆಂಚುರಿಯನ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಪೂಜಾರ ಎಂನ್ಗಿಡಿ ಬೌಲಿಂಗ್ ನಲ್ಲಿ ರನೌಟ್ ಆಗಿದ್ದರು.
ಆಗಲೂ ಕೇವಲ ಒಂದೇ ಎಸೆತವನ್ನು ಎದುರಿಸಿದ ಪೂಜಾರ ರನ್ ಗಳಿಸದೇ ರನೌಟ್ ರೂಪದಲ್ಲಿ ಗೋಲ್ಡನ್ ಡಕ್ ಆಗಿದ್ದರು.
ಮತ್ತೆ ಈಗ ಅದೇ ಸೆಂಚುರಿಯನ್ ಮೈದಾನದಲ್ಲಿ ಎಂನ್ಗಿಡಿ ಬೌಲಿಂಗ್ನಲ್ಲಿ ಗೋಲ್ಡನ್ ಡಕ್ ಆಗಿದ್ದಾರೆ.
ಇನ್ನು ಈ ವಿಷಯವನ್ನು ತಿಳಿದ ಅಭಿಮಾನಿಗಳು ಪೂಜಾರ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.