ಬೇಟೆಯಾಡಲು ಬಂದ ಚಿರತೆ ಮೇಲೆಯೇ ದಾಳಿ ಮಾಡಿದ ನಾಯಿ
ಮಹಾರಾಷ್ಟ್ರದಲ್ಲಿ ಪುಣೆಯ ಅಂಬೇಗಾಂವ್‌ನಲ್ಲಿ ದಾಳಿ ಮಾಡಲು ಬಂದ ಚಿರತೆಯನ್ನು ನಾಯಿಯೇ ಬೇಟೆಯಾಡಿದ ಘಟನೆ ನಡೆದಿದೆ… ಬೇಟೆಗಾರನಾಗಿ ಬಂದಿದ್ದ ಚಿರತೆ ತಾನೇ ಬಲಿಯಾಗುವುದರಿಂದ ತಪ್ಪಿಸಿಕೊಂಡು ಕಾಡಿಗೆ ಹೋಡಿದೆ… ತನ್ನನ್ನು ತಾನು ರಕ್ಷಿಸಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ.
ಭಾನುವಾರ ನಡೆದ ಈ ಗಟನೆಯಲ್ಲಿ, ಅಂಬೇಗಾಂವದಲ್ಲಿ ವಾಸವಾಗಿರುವ ಗಣೇಶ ಶೇವಾಳೆ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಕಳೆದ 10 ವರ್ಷಗಳಿಂದ ಗಣೇಶ್ ಮನೆಯಲ್ಲಿ ‘ವಾಘ್ಯ’ ಎಂಬ ನಾಯಿ ಸಾಕುತ್ತಿದ್ದಾರೆ. ಭಾನುವಾರ ರಾತ್ರಿ ಗಣೇಶ್ ಅವರ ಮನೆಯ ಹೊರಗೆ ಚಿರತೆ ಬಂದು ‘ವಾಘ್ಯಾ’ ಮೇಲೆ ದಾಳಿ ಮಾಡಿದೆ. ಆರಂಭದಲ್ಲಿ, ಚಿರತೆ ನಾಯಿಯನ್ನು ನಿಯಂತ್ರಿಸಲು ಪ್ರಯತ್ನಿಸಿತು, ಆದರೆ ಸ್ವಲ್ಪ ಸಮಯದ ನಂತರ ನಾಯಿ ಅದರಿಂದ ಬಿಡಿಸಿಕೊಂಡು ಚಿರತೆಯನ್ನೇ ಹತ್ತಿಕ್ಕಿದೆ. ಮತ್ತು ಚಾಣಾಕ್ಷತನವನ್ನು ಪ್ರದರ್ಶಿಸಿ ಚಿರತೆಯ ಬಾಯಿಯನ್ನು 25 ಸೆಕೆಂಡುಗಳ ಕಾಲ ತನ್ನ ದವಡೆಯಲ್ಲಿ ಕಚ್ಚಿ ಹಿಡಿದುಕೊಂಡಿದೆ.
ನಾಯಿಯ ಬಾಯಿಗೆ ಸಿಕ್ಕಿಬಿದ್ದ ಚಿರತೆ ಚಿರತೆ ಅದರಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಲೇ ಇತ್ತು. ಸಾಕಷ್ಟು ಪ್ರಯತ್ನದ ನಂತರ ಚಿರತೆ ಯಶಸ್ವಿಯಾಗಿದ್ದು, ನಾಯಿ ಬಾಯಿ ಬಿಟ್ಟ ತಕ್ಷಣ ಕಾಡಿಗೆ ಓಡಿದೆ.
https://youtu.be/QZ2XcvEZ6_U
ಘಟನೆಯ ವಿಡಿಯೋ ಮಾಡಿರುವ ಗಣೇಶ್ ಶೆವಾಳೆ ಅವರು, ಘಟನೆ ತಡರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಇಬ್ಬರ ನಡುವೆ ಚಕಮಕಿ ನಡೆದರೂ ನಮ್ಮ ‘ವಾಘ್ಯ’ (ನಾಯಿ) ಬಚಾವಾಗಿದೆ. ಕಳೆದ ಹಲವು ವರ್ಷಗಳಿಂದ ನಮ್ಮ ಪ್ರದೇಶದಲ್ಲಿ ಕಾಡುಪ್ರಾಣಿಗಳು ಮತ್ತು ಚಿರತೆಗಳ ಭೀತಿ ಇದೆ.
ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರು ಬೋನು ಹಾಕಿ ಚಿರತೆ ಹಿಡಿಯಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಚಿರತೆ ಹಿಡಿಯುವಂತೆ ಜನರು ಅರಣ್ಯ ಇಲಾಖೆಗೆ ಮನವಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಗಮನ ಹರಿಸಬೇಕು ಎಂದು ಕೇಳಿಕೊಂಡಿದ್ದಾರೆ…








