ಅಶಸ್ ಸರಣಿ ವಶಪಡಿಸಿಕೊಂಡ ಕಾಂಗರೂಗಳು – ಇಂಗ್ಲೆಂಡ್ ಗೆ ಇನ್ನಿಗ್ಸ್ ಸೋಲು.
ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಸತತ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಸರಣಿ ವಶಪಡಿಸಿಕೊಂಡಿದೆ. ಮೆಲ್ಬೋರ್ನ್ನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಇನಿಂಗ್ಸ್ ಮತ್ತು 14 ರನ್ಗಳಿಂದ ಸೋಲು ಕಂಡಿದೆ.

ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಕೇವಲ 68 ರನ್ಗಳಿಗೆ ಸರ್ವಪತನ ಕಂಡಿದೆ. ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ ಏಳು ರನ್ಗಳಿಗೆ ಆರು ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್ ಮೂರು ಮತ್ತು ಕ್ಯಾಮರೂನ್ ಗ್ರೀನ್ ಒಂದು ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ್ದರು. ಇದರೊಂದಿಗೆ 5 ಟೆಸ್ಟ್ಗಳ ಸರಣಿಯನ್ನು 3-0ಯಿಂದ ಆಸ್ಟ್ರೇಲಿಯಾ ಗೆದ್ದು ಬೀಗಿದೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 267 ರನ್ ಗಳಿಸಿತ್ತು. ಮತ್ತೊಂದೆಡೆ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 185 ರನ್ ಗಳಿಸಲಷ್ಟೇ ಶಕ್ತವಾಯಿತು. ಮೂರನೇ ದಿನದಂದು ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 8 ರನ್ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು.

ಸ್ಕಾಟ್ ಬೋಲ್ಯಾಂಡ್ ಎದುರು ಇಂಗ್ಲೆಂಡ್ ಸಂಪೂರ್ಣವಾಗಿ ತಲೆಬಾಗಿತು. ಮೂರನೇ ದಿನ ಇಂಗ್ಲೆಂಡ್ನ 6 ವಿಕೆಟ್ಗಳು ಪತನಗೊಂಡವು. ಅದರಲ್ಲಿ 4 ವಿಕೆಟ್ಗಳನ್ನು ಬೋಲ್ಯಾಂಡ್ ಪಡೆದರು. ಎರಡನೇ ಇನಿಂಗ್ಸ್ನಲ್ಲಿ 4 ಓವರ್ಗಳಲ್ಲಿ 7 ರನ್ ನೀಡಿ 6 ವಿಕೆಟ್ ಪಡೆದರು. ಬೋಲ್ಯಾಂಡ್ ಹೊರತುಪಡಿಸಿ ಮಿಚೆಲ್ ಸ್ಟಾರ್ಕ್ 10 ಓವರ್ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದರು. ಅದೇ ವೇಳೆ ಕ್ಯಾಮರೂನ್ ಗ್ರೀನ್ 3.4 ಓವರ್ ಗಳಲ್ಲಿ 8 ರನ್ ನೀಡಿ 1 ವಿಕೆಟ್ ಪಡೆದರು.








