ತೇಜಸ್ವಿ ಸೂರ್ಯನ ತಲೆಯಿಂದ ಮೆದುಳನ್ನ ತೆಗೆದು ಹಾಕಲಾಗಿದೆ : ರಮ್ಯಾ
ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ನಟಿ ಜೊತೆಗೆ ರಾಜಕಾರಣಿಯಾಗಿಯು ಗುರುತಿಸಿಕೊಂಡವರು.. ಆದ್ರೆ ಸಿನಿಮಾದಂತೆಯೇ ರಾಜಕೀಯದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ.. ಸದ್ಯ ಸಿನಿಮಾ ಹಾಗೂ ರಾಜಕೀಯ ಎರಡರಿಂದಲೂ ದೂರ ರುವ ರಮ್ಯಾ , ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.. ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರುತ್ತಾರೆ.. ಅಷ್ಟೇ ಅಲ್ದೇ ಮುಂಚೆಯಿಂದಲೂ ಹೇಗೆ ಬಿಜೆಪಿ ನಾಯಕರ ವಿರುದ್ಧ ಸಿಡಿಯುತ್ತಿದ್ದರೂ ಈಗಲೂ ಕೂಡ ಅದನ್ನೆ ಮುಂದುವರೆಸಿದ್ದಾರೆ..
ಇದೀಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿರುವ ರಮ್ಯಾ , ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿಯಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.. ಇದ್ರಲ್ಲಿ ತೇಜಸ್ವಿ ಸೂರ್ಯರ ವಿವಾದಾತ್ಮಕ ಹೇಳಿಕೆಯ ವಿಡಿಯಯೋ ಶೇರ್ ಮಾಡಿ , ಅವರ ತಲೆಯಿಂದ ಮೆದುಳನ್ನ ತೆಗೆದುಹಾಕಲಾಗಿದೆ ಎಂದು ಬರೆದುಕೊಂಡಿದ್ದಾರೆ..
ಉಡುಪಿಯಲ್ಲಿ ಪರ್ಯಾಯ ಅದಮಾರು ಮಠದ ವಿಶ್ವರೂಪಂ ಕಾರ್ಯಕ್ರಮದಲ್ಲಿ ಮಾತನಾಡಿದ್ದ ತೇಜಸ್ವಿ ಸೂರ್ಯ, ಹಿಂದೂ ಸಂಸ್ಕೃತಿ, ಸಮಾಜ, ಪರಂಪರೆ ಉಳಿಬೇಕಾದರೇ ಹಿಂದೂ ಧರ್ಮ ಉಳಿಯಬೇಕು. ಇದಕ್ಕಾಗಿ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಜೊತೆಗೆ ಚೀನಾ, ಜಪಾನಿಗೆ ಹೋಗಿ ಮತಾಂತರಗೊಂಡವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಮುಸ್ಲಿಮರು, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ.
ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳ ಮತಾಂತರಗಳು ಆಗಿವೆ. ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಇದರಿಂದಾಗಿ ಟಿಪ್ಪು ಜಯಂತಿಯಂದೇ ನಾವು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಬೇಕು ಎಂದಿದ್ದರು.
ನಾವು ದೊಡ್ಡದಾಗಿ ಕನಸನ್ನು ಕಾಣಬೇಕು. ನಮ್ಮ ಮನೆಯ ಅಕ್ಕಪಕ್ಕ, ಗ್ರಾಮ, ಊರುಗಳಲ್ಲಿ ಘರ್ ವಾಪಸಿ ಮಾಡಬೇಕು. ದೇಶದಲ್ಲಿ ರಾಮಮಂದಿರವನ್ನು ಸ್ಥಾಪನೆ ಮಾಡಿದ್ದೇವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ಕಾಯ್ದೆಯನ್ನು ತೆಗೆದುಹಾಕಿದ್ದೇವೆ. ಘರ್ ವಾಪಸಿ ಆದ್ಯ ಕರ್ತವ್ಯದ ರೀತಿಯಲ್ಲಿ ನಾವು ಮಾಡಬೇಕಾಗಿದೆ. ಪಾಕಿಸ್ತಾನದ ಮುಸಲ್ಮಾನರನ್ನು ಹಿಂದೂಗಳಾಗಿ ಪರಿವರ್ತನೆ ಮಾಡಬೇಕು. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ತಾನವು ಇದೆ. ಮಠ, ದೇವಸ್ಥಾನ ಇದರ ಮುಂದಾಳತ್ವ ವಹಿಸಬೇಕು ಎಂದು ಸಲಹೆ ನೀಡಿದ್ದರು.
ಅವರ ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು.. ನಂತರ ತೇಜಸ್ವಿ ಸೂರ್ಯ ಅವರು ತಮ್ಮ ಹೇಳಿಕೆಯನ್ನ ವಾಪಸ್ ಪಡೆದುಕೊಳ್ಳುವುದಾಗಿ ಟ್ವೀಟ್ ಮಾಡಿದ್ದರು.. ಈಗ ಇದೇ ವಿಡಿಯೋವನ್ನ ಶೇರ್ ಮಾಡಿ ರಮ್ಯಾ ಆಕ್ರೋಶ ಹೊರಹಾಕಿದ್ದಾರೆ..








