ಬಾಕ್ಸ್ ಆಫೀಸ್ ನಲ್ಲಿ ಫೇಲ್ ಆದ ‘83’ , ನಿಜವಾಯ್ತಾ ಸುಶಾಂತ್ ಅಭಿಮಾನಿಗಳ ಭವಿಷ್ಯ : ‘ಪುಷ್ಪ’ ಮುಂದೆ ಸೋಲು..!
ರಣವೀರ್ ಸಿಂಗ್ ನಟನೆಯ ಭಾರತದ ಮೊದಲ ವಿಶ್ವಕಪ್ ಗೆಲುವನ್ನ ನೆನಪಿಸುವ , ಕಪಿಲ್ ದೇವ್ ಜೀವನಾಧಾರಿತ ಸಿನಿಮಾ 83 ಡಿಸೆಂಬರ್ 24 ಕ್ಕೆ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣ್ತಿದೆ.. ಆದ್ರೆ ನಿರೀಕ್ಷೆ ಮಟ್ಟದ ಯಶಸ್ಸು ಸಿಕ್ಕಿಲ್ಲ.. ಅಂದ್ಹಾಗೆ ಈ ಸಿನಿಮಾ ಹಿಂದಿ , ಕನ್ನಡ ತೆಲು , ತಮಿಳು , ಮಲಯಾಳಂನಲ್ಲೂ ರಿಲೀಸ್ ಆಗಿದೆ.. ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆಯೇ ಇತ್ತು..
ಅಷ್ಟೇ ಅಲ್ಲ ವಿಮರ್ಶಕರಂತೂ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಇತಿಹಾಸ ಸೃಷ್ಟಿಸುತ್ತೆ ಅಂತಲೇ ಭವಿಷ್ಯ ನುಡಿದಿಇದ್ದರು.. ಇದೇ ಹೊತ್ತಲ್ಲೇ ಸುಶಾಂತ್ ಸಿಂಗ್ ಅಭಿಮಾನಿಗಳು ಕೂಡ ರಣವೀರ್ ಸಿಂಗ್ ಸುಶಾಂತ್ ಗೆ ಅವಮಾನಿಸಿದ್ದಾರೆಂದು ಸಿಡಿದು #Boycott83 ಅಭಿಯಾನವನ್ನೂ ಶುರು ಮಾಡಿದ್ದರು.. ಅಲ್ಲದೇ ಈ ಸಿನಿಮಾ ಪ್ಲಾಪ್ ಆಗುತ್ತೆ.. ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತೆ ಅಂತ ಭವಿಷ್ಯ ನುಡಿದಿದ್ದರು.. ಈಗಿನ 83 ಸ್ಥಿತಿ ನೋಡಿದ್ರೆ ಸುಶಾಂತ್ ಅಭಿಮಾನಿಗಳ ಭವಿಷ್ಯ ನಿಜ ಎನ್ನಿಸುತ್ತಿದೆ.. ಇದೂ ಕೂಡ ಸಿನಿಮಾನ ನಿರೀಕ್ಷೆ ಫೇಲ್ ಆಗಿರೋದಕ್ಕೆ ಒಂದು ಕಾರಣ..
ಮತ್ತೊಂದು ಸೌತ್ ಸಿನಿಮಾದ ಪವರ್ ಮುಂದೆ ಬಾಲಿವುಡ್ ವೀಕ್ ಆಗೋಗಿದೆ , ಡಮ್ಮಿ ಆಗಿದೆ ಅನ್ನೋದಕ್ಕೂ ಇದು ಉದಾಹರಣೆ… ಯಾಕಂದ್ರೆ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದು ಇನ್ನೂವರೆಗೂ ಬಾಕ್ಸ್ ಆಫೀಸ್ ನಲ್ಲಿ ಆಳುತ್ತಿದೆ.. ಅದೇ ಪುಷ್ಪ ಮುಂದೆ ಬಂದ 83 ಹವಾ ಟುಸ್ ಆಗಿದೆ.. ವಿಶ್ವಾದ್ಯಂತ ರಿಲೀಸ್ ಆಗಿ 5 ದಿನಗಳೇ ಕಳೆದ್ರು ಕೇವಲ 95 ಕೋಟಿ ರೂಪಾಯಿ ಮಾತ್ರ ವೇ ಗಳಿಸಿದೆ..
ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿದ್ದಾರೆ.. “#83TheFilm ಕಲೆಕ್ಷನ್ ಕಡಿಮೆಯಾಗಿದೆ. ಕಲೆಕ್ಷನ್ ಇನ್ನೂವರೆಗೂ ಎರಡಂಕಿ ದಾಟಿಲ್ಲ ಎಂದಿದ್ದಾರೆ..
ಭಾರತದಲ್ಲಿ ಕಲೆಕ್ಷನ್
ಶುಕ್ರವಾರ 12.64 ಕೋಟಿ ರೂಪಾಯಿ
ಶನಿವಾರ 16.95 ಕೋಟಿ ರೂಪಾಯಿ
ಭಾನುವಾರ 17.41 ಕೋಟಿ ರೂಪಾಯಿ
ಸೋಮವಾರ 7.29 ಕೋಟಿ ರೂಪಾಯಿ
ಒಟ್ಟು ಭಾರತದಲ್ಲಿ 54.29 ಕೋಟಿ ರೂಪಾಯಿ ಗಳಿಸುವಲ್ಲಿ ಮಾತ್ರ ಸಫಲವಾಗಿದೆ..
ಒಟ್ಟಾರೆಯಾಗಿ ವಿಶ್ವಾದ್ಯಂತ 95.50 ಕೋಟಿ ಗಳಿಸಿದೆ.
ಮೊದಲ ದಿನ – 25.16 ಕೋಟಿ ರೂ.
ರಡನೇ ದಿನ – 29.41 ಕೋಟಿ ರೂ.
ಮೂರನೇ ದಿನ – 29.64 ಕೋಟಿ ರೂ.
ನಾಲ್ಕನೇ ದಿನ – 11.29 ಕೋಟಿ ರೂ
ಒಟ್ಟಾರೆ ರಣವೀರ್ ಚಿತ್ರ ನಿರೀಕ್ಷೆಯಂತೆ ಬ್ಲಾಕ್ ಬಾಸ್ಟರ್ ಆಗಿ ಹೊರಹೊಮ್ಮಿಲ್ಲ..