ಮೈದಾನದಲ್ಲಿ ವಿರಾಟ್ ಡ್ಯಾನ್ಸ್.. ಫ್ಯಾನ್ಸ್ ಫುಲ್ ಖುಷ್ Virat saaksha tv
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್.. ಮೊದಲ ದಿನವೇ ಕೆಎಲ್ ರಾಹುಲ್ ಅದ್ಭುತ ಶತಕ… ಮುನ್ನಡೆ ನಮ್ಮದೇ.. ಗೆಲುವು ಸುಲಭ ಎಂದು ಅಭಿಮಾನಿಗಳ ಸಂತಸ..
ಆದರೆ ಎರಡನೇ ದಿನದ ಆಟ ನೋಡಬೇಕೆಂದುಕೊಂಡಿದ್ದ ಅಭಿಮಾನಿಗಳ ನಿರೀಕ್ಷೆಗೆ ವರುಣ ನೀರೆರೆಚಿದ.
ಮಳೆ ತಗ್ಗದ ಹಿನ್ನೆಲೆಯಲ್ಲಿ ಎರಡನೇ ದಿನದಾಟವನ್ನು ರದ್ದು ಮಾಡಲಾಯಿತು.
ಮೂರನೇ ದಿನ ಭಾರತೀಯರ ಅಬ್ಬರ ನಡೆಯುತ್ತೆ ಅಂದುಕೊಂಡಿದ್ದ ಅಭಿಮಾನಿಗಳಿಗೆ ಲುಂಗಿ ಎನ್ ಗಿಡಿ, ಕಗಿಸೋ ರಬಾಡ ಶಾಕ್ ನೀಡಿದರು. ಕೇವಲ 50 ರನ್ ಗಳ ಒಳಗೆ ಟೀಂ ಇಂಡಿಯಾ ಆಲೌಟ್ ಆಯಿತು.
ಪಂಚ್, ಅಶ್ವಿನ್, ಶರ್ದೂಲ್, ಶಮಿ ಕನಿಷ್ಠ 10 ರನ್ ಗಳನ್ನೂ ಗಳಿಸದೇ ವಿಕೆಟ್ ಒಪ್ಪಿಸಿ ಪೇವಿಲಿಯನ್ ಸೇರಿದರು.
ಇನ್ನೇನು ನಮ್ಮ ಕೆಲಸ ಮುಗೀತು ಎಂದು ಸಪ್ಪೆ ಮೊರೆ ಹಾಕಿಕೊಂಡಿದ್ದ ಅಭಿಮಾನಿಗಳಲ್ಲಿ ಜೋಷ್ ತಂದಿದ್ದು, ಟೀಂ ಇಂಡಿಯಾದ ಬೌಲರ್ ಗಳು.
ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ, ದಕ್ಷಿಣ ಆಫ್ರಿಕಾ ಬ್ಯಾಟರ್ ಗಳನ್ನು ಬಿಟ್ಟುಬಿಡದಂತೆ ಕಾಡಿದರು.
ಇವರ ಪ್ರದರ್ಶನ ನೋಡಿದ ಟೀಂ ಇಂಡಿಯಾದ ಅಭಿಮಾನಿಗಳಿಗೆ ಮರುಜೀವ ಬಂದಂತೆ ಆಗಿತ್ತು.
ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ ನಾಯಕ ವಿರಾಟ್ ಕೊಹ್ಲಿ ಕೂಡ ತಮ್ಮ ಬೌಲರ್ ಪ್ರದರ್ಶನದಿಂದ ದಿಲ್ ಖುಷ್ ಆಗಿ ಮೈದಾನದಲ್ಲಿಯೇ ಡ್ಯಾನ್ಸ್ ಮಾಡಿದ್ದಾರೆ.
ಪಂದ್ಯವನ್ನು ಎಂಜಾಯ್ ಮಾಡುತ್ತಾ ಆಟಗಾರರನ್ನುಪ್ರೋತ್ಸಾಹಿಸುತ್ತಾ ವಿರಾಟ್ ಎಲ್ಲರ ಗಮನ ಸೆಳೆದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಿರಿಗಿಟ್ಟಲೇ ಹೊಡೆಯುತ್ತಿದೆ.
ಈ ವಿಡಿಯೋ ವನ್ನು ನೋಡಿದ ನೆಟ್ಟಿಗರು ತಮ್ಮದೇಯಾದ ರೀತಿಯಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ವಿರಾಟ್ ಭಾಯ್ ನೀವು ಎಲ್ಲರಂತೆ ಅಲ್ಲ ನೀವು ಎಲ್ಲಿದ್ದರೂ ಕಿಂಗ್.. ನಿನ್ನೆ ಅಗ್ರೆಸ್ಸಿವ್ ಮಾತ್ರವಲ್ಲ.
ನೀವು ಆಟವನ್ನು ಎಂಜಾಯ್ ಮಾಡುವ ರೀತಿಯೂ ನಮಗೆ ಇಷ್ಟ. ಅದಕ್ಕೆ ನೀವು ನಮಗೆ ಸ್ಪೆಷಲ್ ಎಂದು ಕಮೆಂಟ್ ಗಳನ್ನ ಮಾಡುತ್ತಿದ್ದಾರೆ.









