ಬೀಜಿಂಗ್, ಮೇ 14 : ಚೀನಾದ ಜುನಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಕೊರೊನಾಗೆ ತುತ್ತಾದ ಮನುಷ್ಯ ಸಾವನ್ನಪ್ಪಲು ಕಾರಣವೇನು ಎಂಬುದನ್ನು ಪತ್ತೆಹಚ್ಚಿದ್ದಾರೆ. ಫ್ರಾಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್ ಎಂಬ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ, ಚೀನಾದ ಸಂಶೋಧಕರು ಹಂತ ಹಂತವಾಗಿ ಕೋವಿಡ್-19 ವೈರಸ್ ಹೇಗೆ ಸೋಂಕು ತರುತ್ತದೆ, ರೋಗನಿರೋಧಕ ವ್ಯವಸ್ಥೆಯ ಅತಿ ಚಲನಶೀಲ ಉತ್ಸಾಹ ಹೇಗೆ ವೈರಾಣುಗಳು ಶ್ವಾಸಕೋಶದೊಳಗೆ ಪ್ರವೇಶಿಸಿ ಸಾವಿಗೆ ಕಾರಣವಾಗುತ್ತದೆ ಎಂದು ವಿವರಿಸಿದ್ದಾರೆ. ಬಿಳಿ ರಕ್ತ ಕಣಗಳ ಅತಿಚಲನಶೀಲತೆ ಹೆಚ್ಚಿ, ಸೈಟೊಕಿನ್ ಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ.
ಸೈಟೊಕಿನ್ ಗಳು ಲಿಂಪೋಸೈಟ್ ಮತ್ತು ನ್ಯೂಟ್ರೋಫಿಲ್ಸ್ ಎಂಬ ಕೋಶಗಳನ್ನು ಶ್ವಾಸಕೋಶದೊಳಗೆ ಅಹ್ವಾನಿಸುತ್ತದೆ. ವೈರಾಣುಗಳು ಹಂತ ಹಂತವಾಗಿ ಜೀವಕೋಶಗಳನ್ನು ಆಕ್ರಮಿಸಿಕೊಂಡಂತೆ ಸೋಂಕು ಹೆಚ್ಚಾಗಿ ಇನ್ನಷ್ಟು ಸೈಟೊಕಿನ್ ಗಳು ಸೃಷ್ಟಿಯಾಗುತ್ತದೆ. ಪ್ರೋಟೀನ್‌ಗಳು ಮತ್ತು ಸತ್ತ ಜೀವಕೋಶಗಳ ಭಗ್ನಾವಶೇಷಗಳಿಂದ ಕೂಡಿದ ಹೈಲೀನ್ ಮೆಂಬರೇನ್ ಶ್ವಾಸಕೋಶವನ್ನು ಪ್ರವೇಶಿಸುವುದರಿಂದ ಆಮ್ಲಜನಕವನ್ನು ಹೀರಿಕೊಳ್ಳುವುದು ಕಷ್ಟಕರವಾಗುತ್ತದೆ. ಜೊತೆಗೆ ಶ್ವಾಸಕೋಶದ ಒಳಗೆ ಗಾಯ ಕಾಣಿಸಿಕೊಂಡು, ಜ್ವರ, ರಕ್ತ ಹೆಪ್ಪುಗಟ್ಟುವಿಕೆ, ರಕ್ತನಾಳಗಳ ಅತಿಯಾದ ಸೋರಿಕೆ ಮತ್ತು ದೇಹದೊಳಗೆ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಇದರಿಂದ ಅತ್ಯಂತ ಕಡಿಮೆ ರಕ್ತದೊತ್ತಡ, ಆಮ್ಲಜನಕದ ಕೊರತೆ ಮತ್ತು ರಕ್ತದ ಅಧಿಕ ಆಮ್ಲೀಯತೆ ಮತ್ತು ಶ್ವಾಸಕೋಶದಲ್ಲಿ ದ್ರವಗಳನ್ನು ನಿರ್ಮಿಸಲು ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಅಷ್ಟೇ ಅಲ್ಲ ಬಿಳಿ ರಕ್ತ ಕಣಗಳು ಆರೋಗ್ಯಕರ ಅಂಗಾಂಶಗಳ ಮೇಲೆ ದಾಳಿ ಮಾಡಲು ತಪ್ಪಾಗಿ ನಿರ್ದೇಶಿಸಲ್ಪಡುತ್ತವೆ. ಇದು ಶ್ವಾಸಕೋಶ, ಹೃದಯ, ಯಕೃತ್ತು, ಕರುಳುಗಳು, ಮೂತ್ರಪಿಂಡಗಳು ಮತ್ತು ಜನನಾಂಗಗಳ ವೈಫಲ್ಯಕ್ಕೆ ಕಾರಣವಾಗಿ ರೋಗಿ ಮರಣ ಹೊಂದುತ್ತಾನೆ ಎಂದು ಸಂಶೋಧಕರು ಹೇಳಿದ್ದಾರೆ.








