ಪುಷ್ಪಗೆ ಮೊದಲ ಆಯ್ಕೆ ಅಲ್ಲು ಅರ್ಜುನ್ ಅಲ್ಲ…. ಟಾಲಿವುಡ್ ಪ್ರಿನ್ಸ್…!
ಡಿಸೆಂಬರ್ 17 ವಿಶ್ವಾದ್ಯಂತ ರಿಲೀಸ್ ಆಗಿ ಇನ್ನೂವರೆಗೂ ಅದ್ಧೂರಿಯಾಗಿ ಪ್ರದರ್ಶನ ಕಾಣ್ತಿರುವ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ.. 200 ಕೋಟಿ ಕಲೆಕ್ಷನ್ ದಾಟಿದೆ..
ಆದ್ರೆ ಸುಕುಮಾರ್ ನಿರ್ದೇಶನದ ಸಿನಿಮಾಗೆ ಮೊದಲ ಆಯ್ಕೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಆಗಿರಲಿಲ್ಲ.. ಬದಲಾಗಿ ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು.. ಹೌದು.. ಈ ಬಗ್ಗೆ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಈ ಹಿಂದೆ ಮಾತನಾಡಿದ್ದರು. ಈ ಚಿತ್ರ ಮಹೇಶ್ ಬಾಬು ಬಳಿ ಹೋದಾಗ ಬೇರೆ ರೀತಿಯದ್ದೇ ಕಥೆ ಹೊಂದಿತ್ತು. ನಂತರ ಅಲ್ಲು ಅರ್ಜುನ್ ಅವರಿಗಾಗಿ ಅವರ ಮ್ಯಾನರಿಸಮ್ , ಅವರ ಫೇಮ್ ಗೆ ತಕ್ಕಂತೆ ಪುಷ್ಪ ಕಥೆ ಬದಲಾಯಿಸಲಾಯ್ತು ಎನ್ನೋದರ ಬಗ್ಗೆ ಸುಕುಮಾರ್ ಮಾಹಿತಿ ನೀಡಿದ್ರು..
2021 ರಲ್ಲಿ ಒಟಿಟಿಯಲ್ಲಿ ಹಿಟ್ ಆದ ಭಾರತದ ಟಾಪ್ ಸಿನಿಮಾಗಳಿವು..!
ರಂಗಸ್ಥಳಂ ಸಿನಿಮಾದ ಬಳಿಕ ನಿರ್ದೇಶಕ ಸುಕುಮಾರ್ ಪುಷ್ಪ ಚಿತ್ರದ ಕಥೆಯನ್ನು ಮಹೇಶ್ ಬಾಬು ಅವರಿಗೆ ಹೇಳಿದ್ದರು.. ಆದರೆ ಈ ಕಥೆಯಲ್ಲಿ ಅಭಿನಯಿಸಲು ಮಹೇಶ್ ಬಾಬು ನಿರಾಕರಿಸಿದ್ದರು ಎನ್ನಲಾಗಿದೆ. ನಂತರ ಈ ಕಥೆಯನ್ನು ಅಲ್ಲು ಅರ್ಜುನ್ ಅವರಿಗಾಗಿ ತಯಾರಿಸಿ ಅವರಿಗೆ ಕಥೆ ಹೇಳಿದ್ದಾರೆ ನಿರ್ದೇಶಕ ಸುಕುಮಾರ್. ಅಲ್ಲು ಅರ್ಜುನ್ ಕೂಡ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟು ಸಿನಿಮಾದಲ್ಲಿ ನಟಿಸಿದ್ದರು.. ಈಗ ಅಲ್ಲು ಅವರು ತಮ್ಮ ನಿರ್ಧಾರದಿಂದ ಫುಲ್ ಖುಷ್ ಆಗಿದ್ದರೆ , ಮಹೇಶ್ ಬಾಬು ಅಭಿಮಾನಿಗಳು ಹಾಗೂ ಟಾಲಿವುಡ್ ಮಂದಿ ಮಹೇಶ್ ಬಾಬು ಅವರು ತಪ್ಪು ನಿರ್ಧಾರ ಮಾಡಿದ್ರು ಎಂದೇ ಮಾತನಾಡಿಕೊಳ್ತಿದ್ದಾರೆ..
ಅಂದ್ಹಾಗೆ ಒಂದ್ ವೇಳೆ ಪುಷ್ಪ ಸಿನಿಮಾವನ್ನ ಅಲ್ಲು ಬದಲಾಗಿ ಮಹೇಶ್ ಅವರೇ ಮಾಡಿದ್ರೆ ಹೇಗಿರುತ್ತಿತ್ತು ಅನ್ನುವ ಪ್ರಶ್ನೆ , ಕಲ್ಪನೆಗಳು ಕೂಡ ಅಭಿಮಾನಿಗಳ ತಲೆಯಲ್ಲಿ ಓಡೋದು ಸಹಜ.. ಆದ್ರೆ ಬಹುತೇಕರು ಅಲ್ಲು ಸಿನಿಮಾಗೆ ಪರ್ಫೆಕ್ಟ್ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಮಹೇಶ್ ಅವರು ಈ ರೀತಿ ಒಳ್ಳೆಯ ಫರ್ ಗಳನ್ನ ಅನೇಕ ಬಾರಿ ತಿರಸ್ಕರಿಸಿ ಕೈ ಸುಟ್ಟಿಕೊಂಡಿದ್ದಾರೆ.. ಅವರು ತಿರಸ್ಕರಿಸಿರುವ ಅನೇಕ ಸೀನಿಮಾಗ,ಳು ಸೂಪರ್ ಹಿಟ್ ಆಗಿವೆ..
ಸೂರ್ಯ ಅಭಿನಯದ 24, ಪ್ರಭಾಸ್ ಅಭಿನಯದ ವರ್ಷಂ , ಮನಸಂತಾ ನುವ್ವೆ, ಗಜಿನಿ, ಏ ಮಾಯಾ ಚೇಸಾವೆ ಈ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.. ಆದ್ರೆ ಈ ಸಿನಿಮಾಗಳ ಆಫರ್ ಗಳು ಮೊದಲು ಮಹೇಶ್ ಬಾಬು ಅವರಿಗೆ ಸಿಕ್ಕಿತ್ತು.. ಆದ್ರೆ ಅವುಗಳನ್ನ ಮಹೇಶ್ ಬಾಬು ಅವರು ತಿರಸ್ಕರಿಸಿದ ನಂತರ ಬೇರೆ ನಟರು ಸಿನಿಮಾಗಳಿಗೆ ಜೀವ ತುಂಬಿ ಸಿನಿಮಾಗಳು ಬ್ಲಾಕ್ ಬಾಸ್ಟರ್ ಎನಿಸಿಕೊಂಡಿದ್ದವು..








