IMDB ರೇಟಿಂಗ್ ನ ಪ್ರಕಾರ 2021 ರ ಅತ್ಯುತ್ತಮ ಸೌತ್ ಇಂಡಿಯನ್ ಸಿನಿಮಾಗಳು
ಜೈ ಭೀಮ್ – IMDb Rating – 9.5
ತಮಿಳು ಸಿನಿಮಾ – ಸೂರ್ಯ ನಟನೆ
ಈ ವರ್ಷ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಸೂರ್ಯ ಅವರ ಜೈ ಭೀಮ್ ಸಿನಿಮಾ , ಸಖತ್ ಹಿಟ್ ಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.. ಸಾಕಷ್ಟು ವಿವಾದ ವಿರೋಧಗಳ ನಡುವೆಯೂ ಸೂಪರ್ ಹಿಟ್ ಆಗಿ ಪ್ರೇಕ್ಷರನ್ನ ಅದ್ರಲ್ಲೂ ಯುವ ಜನರನ್ನ ಪ್ರೇರೇಪಿಸುವಲ್ಲಿ ಯಸಸ್ವಿಯಾಯ್ತು.. ಸತ್ಯ ಘಟನೆಯ ಆಧಾರಿತ ಸಿನಿಮಾಗೆ IMDB 9.5 ರೇಟಿಂಗ್ ಕೂಡ ನೀಡಿತ್ತು.. ಈ ಮೂಲಕ ಸಿನಿಮಾ ಹಾಲಿವುಡ್ ಸಿನಿಮಾಗಳನ್ನ ಮೀರಿ ಯಶಸ್ಸು ಸಾಧಿಸಿತ್ತು..

ದೃಶ್ಯಂ 2 – IMDb Rating – 8. 5
ಮಲಯಾಳಂ ಸಿನಿಮಾ – ಮನೋಹರ್ ಲಾಲ್ ನಟನೆ
ಮೋಹನ್ ಲಾಲ್ ಅಭಿನಯದ ದೃಶ್ಯ 2 , ದೃಶ್ಯ 1 ಸಿನಿಮಾದ ಸೀಕ್ವೆಲ್.. ಸಸ್ಪೆನ್ಸ್ , ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾವಾಗಿದೆ.. ಈ ಸಿನಿಮಾವನ್ನ ಕನ್ನಡದಲ್ಲಿ , ತೆಲುಗಿನಲ್ಲಿ ರೀಮೇಪಕ್ ಮಾಡಲಾಗಿದ್ದು, ರವಿದಚಂದ್ರನ್ ನಟನೆಯ ದೃಶ್ಯ 2 ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಂಡ್ರೆ , ತೆಲುಗಿನಲ್ಲಿ ವೆಂಕಟೇಶ್ ನಟಿಸಿದ್ದ ಸಿನಿಮಾ ಒಟಿಟಿಯಲ್ಲಿ ಸಕ್ಸಸ್ ಕಂಡಿದೆ..
ಕರ್ಣನ್ – IMDb Rating – 8. 2
ತಮಿಳು ಸಿನಿಮಾ – ಧನುಷ್ ನಟನೆ
ಈ ಸಿನಿಮಾದಲ್ಲಿ ಧನುಷ್ ಅಭಿನಯ ನಿಮ್ಮನ್ನು ಅಳುವಂತೆ ಮಾಡುತ್ತದೆ. ಕಥೆಯು ತಪ್ಪು ಹಾದಿಯಲ್ಲಿರುವ ಒಳ್ಳೆಯ ಮನುಷ್ಯನ ಬಗ್ಗೆ ಕೇಂದ್ರೀಕೃತವಾಗಿದೆ. ಹಳೆಯ ತಲೆಮಾರಿನವರು ಸಮಾಜದಲ್ಲಿ ತಮ್ಮ ಸ್ಥಾನವನ್ನು ಒಪ್ಪಿಕೊಂಡಿರುವುದನ್ನು ನಾವು ನೋಡುತ್ತೇವೆ. ಆದರೆ ಕರ್ಣನ್ ಅದನ್ನು ಪ್ರಶ್ನಿಸುತ್ತಾರೆ. ಅವರ ಗ್ರಾಮಕ್ಕೆ ಏಕೆ ಬಸ್ ನಿಲ್ದಾಣವಿಲ್ಲ ಎಂದು ಪ್ರಶ್ನಿಸುತ್ತಾರೆ. ಮತ್ತು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ, ಅನ್ಯಾಯಕ್ಕೆ ಒಳಗಾದ ಹಳ್ಳಿಗೆ ನ್ಯಾಯ ಕೊಡಿಸಲು ಕೋಪದ ಮೂಲಕ ಹೋರಾಡುವ ಕಥೆ ಇದು..\

ನಾರಪ್ಪ – 8.1
ತಮಿಳಿನ ಧನುಷ್ ನಟನೆಯ ‘ಅಸುರನ್’ ಸಿನಿಮಾದ ರೀಮೇಕ್ ನಾರಪ್ಪ.. ಸಿನಿಮಾದಲ್ಲಿ ವೆಂಕಟೇಶ್ ಅವರ ಅಭಿನಯ ಅದ್ಭುತವಾಗಿದೆ..
ಮಾಸ್ಟರ್ – IMDb Rating – 7. 8
ಚಕ್ರ – 6.9 – ವಿಶಾಲ್ ನಟನೆ
ರಾಬರ್ಟ್ – 6.5 – ಚಾಲೆಂಜಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ರಾಬರ್ಟ್ ಥಿಯೇಟರ್ ಗಳು ತೆರೆಯುತ್ತಿದ್ದಂತೆ ಆರಂಭದಲ್ಲೇ ರಿಲೀಸ್ ಯಶಸ್ಸು ಗಳಿಸಿದ್ದ ಸಿನಿಮಾ
ಯುವರತ್ನ – 6.7
ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಈ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆದದ ಪುನೀತ್ ಅವರ ಅಭಿನಯದ ಕಡೆಯ ಸಿನಿಮಾವಾಗಿದೆ..
ಸಲಗ – 7.4 – ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿದ್ದ ಸಿನಿಮಾ ಥಿಯೇಟರ್ ಗಳಲ್ಲಿ ಸಿಕ್ಕಾಪಟ್ಟೆ ಒಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು .
ಕೋಟಿಗೊಬ್ಬ 3 – 6.7 – ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಕುಡ ಭರ್ಜರಿ ಯಸ್ಸಿನ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು..
ಮದಗಜ – ಡಿಸೆಂಬರ್ ನ ರಂಭದಲ್ಲೇ ರಿಲೀಸ್ ಭರ್ಜರಿಯಾಗಿಯೇ ಪ್ರದರ್ಶನ ಕಂಡಿರುವ ರೋರಿಂಗ್ ಶ್ರೀಮುರುಳಿ ಅವರ ಅಭಿನಯದ ಸಿನಿಮಾಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ರು..
ದೃಶ್ಯ 2 – ರವಿಚಂದ್ರನ್ ನಟನೆಯ ದೃಶ್ಯ 2 ಸಿನಿಮಾ ದೃಶ್ಯದ ಸೀಕ್ವೆಲ್ ಆಗಿದ್ದು , ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ.. ಇದು ತಿಂಗಳಲ್ಲಿ ರಿಲೀಸ್ ಆದ ಇತರೇ ಸಿನಿಮಾಗಳಿಗಿಂತಲೂ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ..
ತಲೈವಿ – 6.1








