ಸೇವಕರಂತೆ ಕೆಲಸ ಮಾಡಿ ಬಾಸ್ ಗಳಂತೆ ವರ್ತಿಸಬೇಡಿ – ಅಧಿಕಾರಿಗಳಿಗೆ ಸಿ ಎಂ ಚಾಟಿ
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳ ಸಭೆ ನಡೆಸಿದರು
ಜನರ ಬಳಿಗೆ ಆಡಳಿತವನ್ನು ಕೊಂಡೊಯ್ಯುವಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಮಹತ್ವದ್ದು. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದರು. ಸಬೂಬು ಹೇಳದೇ ಅಥವಾ ಎಲ್ಲ ಜವಾಬ್ದಾರಿ ಹೊಣೆಯನ್ನು ಅಧಿಕಾರಿಗಳಿಗೆ ವಹಿಸಿಬಿಟ್ಟರಾಯಿತೆಂಬ ಮನೋಭಾವ ಬಿಟ್ಟು ಖುದ್ದು ಜಿಲ್ಲಾಧಿಕಾರಿಗಳು ಅತ್ತ ಲಕ್ಷ್ಯವಹಿಸಬೇಕು.
ಜಿಲ್ಲೆಗಳಲ್ಲಿ ಅಧಿಕಾರಿಗಳು ಸೇವಕರಂತೆ ಕೆಲಸಮಾಡಬೇಕೇ ಹೊರತು ಬಾಸ್ನಂತೆ ಅಲ್ಲ. ಅಧಿಕಾರಿಗಳು ಮೊದಲು ಜನರ ಸೇವಕರೆನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ಕಚೇರಿ ಬಿಟ್ಟು ಹೊರಬರಬೇಜು. ಜನರ ನಡುವೆ ಹೋಗಿ ಜನರ ಜತೆ ಕೆಲಸ ಮಾಡಿ, ಕೆಳಹಂತದ ಅಧಿಕಾರಿಗಳು ಡಿಸಿಗಳಂತೆ ವರ್ತಿಸಲು ಅವಕಾಶ ಕೊಡಬೇಡಿ ಎಂದು ಸೂಚಿಸಿದರು
ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಸರಿಸುಮಾರು 14 ಲಕ್ಷ ರೈತರಿಗೆ ಪರಿಹಾರ ನೀಡುವ ಗುರಿ ಹೊಂದಿದ್ದು, ಕಾಲಮಿತಿಯೊಳಗೆ ಪೂರ್ಣ ಮಾಡಲು ಸೂಚಿದರು








