ಆತ ಒಂದು ಸಂಚಲನ, ಆದ್ರೆ ತಂಡದಲ್ಲಿ ಅವಕಾಶ ಸಿಗೋದು ಡೌಟು.. aakash-chopra saaksha tv
ಶಿಖರ್ ಧವನ್… ರವಿಚಂದ್ರನ್ ಅಶ್ವಿನ್… ಈ ಇಬ್ಬರು ಹಿರಿಯ ಕ್ರಿಕೆಟಿಗರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.
ಐದು ತಿಂಗಳ ಅಂತರದ ಬಳಿಕ ಧವನ್ ತಂಡವನ್ನು ಸೇರಿಕೊಂಡರೆ.. ಸುದೀರ್ಘ ಕಾಯುವಿಕೆಯ ನಂತರ ಅಶ್ವಿನ್ ಏಕದಿನ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ದೇಶೀಯ ಟೂರ್ನಿಗಳಲ್ಲಿ ಮಿಂಚಿರುವ ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್ ಚೊಚ್ಚಲ ಬಾರಿಗೆ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಟೀಂ ಇಂಡಿಯಾ ತಂಡದ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ.
ಆರಂಭಿಕ ಆಟಗಾರ ಶಿಖರ್ ಧವನ್ ತಂಡಕ್ಕೆ ವಾಪಸ್ ಆಗಿರುವುದಕ್ಕೆ ಆಕಾಶ್ ಚೋಪ್ರಾ ಖುಷಿ ವ್ಯಕ್ತಪಡಿಸಿದ್ದಾರೆ.
”ಧವನ್ ತಂಡದಲ್ಲಿ ಇರಬೇಕು ಎಂದು ನಾನು ಯಾವಾಗಲೂ ಹೇಳುತ್ತಿದ್ದೆ.
ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ನಡುವೆ ತೀವ್ರ ಪೈಪೋಟಿ ಇರುತ್ತದೆ. ಧವನ್ ಓಪನರ್ ಆಗಿದ್ದರೆ ತಂಡಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೇ ರಾಹುಲ್ ಜೊತೆ ಗಬ್ಬರ್ ಓಪನಿಂಗ್ ಮಾಡಬೇಕು. ಕೊಹ್ಲಿ ಹೇಗೋ ಮೂರನೇ ಸ್ಥಾನದಲ್ಲಿದ್ದಾರೆ. ಏಕದಿನ ಪಂದ್ಯಗಳನ್ನು ಆಡುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು,’’ ಎಂದರು.
ಅಶ್ವಿನ್ ಆಗಮನದಿಂದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಅದೇ ರೀತಿ ರುತುರಾಜ್ ಒಂದು ಸಂಚಲನವಾಗಿದ್ದು, ಐಪಿಎಲ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿದ್ದಾರೆ.
ಆದರೆ ಈಗ ತಂಡದಲ್ಲಿ ರಾಹುಲ್, ಧವನ್, ಕೊಹ್ಲಿ, ಸೂರ್ಯಕುಮಾರ್, ಪಂತ್ ಇರುವುದರಿಂದ ರುತುಗೆ ಅವಕಾಶ ಸಿಗೋದು ಅನುಮಾನ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.









