ರಮ್ಯಾಗೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವಂತೆ ಕೇಳಿದ ರಚಿತಾ..!!
ಬೆಂಗಳೂರು : ಚಂದನವನದ ಮೋಹಕ ತಾರೆ ರಮ್ಯಾ… ಸ್ಯಾಂಡಲ್ ವುಡ್ ಹಾಗೂ ರಾಜಕಾರಣ ಎರೆಡರಲ್ಲೂ ಹೆಸರು ಮಾಡಿದವರು.. ಆದ್ರೆ ಪ್ರಸ್ತುತ ಎರೆಡೂ ಕ್ಷೇತ್ರದಿಂದಲೂ ಅಂತರ ಕಾಯ್ದುಕೊಂಡಿರುವ ಎವರ್ ಗ್ರೀನ್ ನಟಿ ರಮ್ಯಾ ಕಮ್ ಬ್ಯಾಕ್ ಗಾಗಿ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡು ಕಾಯ್ತಿದ್ದಾರೆ..
ಆದ್ರೆ ಕೇವಲ ಅಭಿಮಾನಿಗಳಷ್ಟೇ ಅಲ್ಲದೇ ಸ್ಯಾಂಡಲ್ ವುಡ್ ಮಂದಿ ಕೂಡ ರಮ್ಯಾ ಕಮ್ ಬ್ಯಾಕ್ ಮಾಡಲಿ ಎಂದು ನಿರೀಕ್ಷೆಯಲ್ಲಿದ್ದಾರೆ.. ಅವರಲ್ಲಿಯೇ ಒಬ್ರು ಕನ್ನಡದ ನಟಿ ರಚಿತಾ ರಾಮ್.. ರಚಿತಾ ರಾಮ್ ಪ್ರಸ್ತುತ ರಮ್ಯಾ ಸ್ಥಾನದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ.. ಅವರಿಗೂ ದೊಡ್ಡ ಸಂಖ್ಯೆಯಲ್ಲೇ ಅಭಿಮಾನಿಗಳು ಇದ್ದಾರೆ..
ಈ ನಡುವೆ ರಮ್ಯಾ ಅವರು ಕಮ್ ಬ್ಯಾಕ್ ಮಾಡುವಂತೆ ರಚಿತಾ ರಾಮ್ ಮನವಿ ಮಾಡಿಕೊಂಡಿದ್ದಾರೆ. ಹೌದು.. ಲವ್ ಯೂ ರಚ್ಚು ಸಿನಿಮಾದ ಪ್ರಮೋಷನ್ ವೇಳೆ ಖಾಸಗಿ ಮಾಧ್ಯಮದ ಜೊತೆಗೆ ಮಾತನಾಡುವಾಗ ರಚಿತಾ ರಮ್ಯಾ ಅವರ ಬಗ್ಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ.. ಇದೇ ಸಂದರ್ಭದಲ್ಲಿ “ಲವ್ ಯೂ ರಚ್ಚು” ಟೈಟಲ್ ಬಗ್ಗೆ ಇಂಟರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ್ದಾರೆ ಡಿಂಪಲ್ ಕ್ವೀನ್.. ಅಂದ್ಹಾಗೆ ಮೂಲಗಳ ಪ್ರಕಾರ ಈ ಹಿಂದೆ ಸಿನಿಮಾ ತಂಡ “ ಲವ್ ಯೂ ರಚ್ಚು “ ಬದಲಾಗಿ “ ಲವ್ ಯೂ ರಮ್ಯ” ಎಂಬ ಟೈಟಲ್ ಇಡಲು ನಿರ್ಧರಿಸಿತ್ತು .. ಇದರ ಬಗ್ಗೆಯೇ ಮಾತನಾಡಿರುವ ರಚಿತಾ , ಲವ್ ಯೂ ರಮ್ಯ ಎಂದು ಹೆಸರಿಟ್ಟಿದ್ರೆ , ಇನ್ನೂ ತುಂಬಾ ಖುಷಿಯಾಗಿಯೇ ನಟಿಸುತ್ತಿದ್ದೆ. ರಚ್ಚು ಬದಲಿಗೆ ನನ್ನ ಹೆಸರು ರಮ್ಯ ಅಂತ ಆಗ್ತಿತ್ತು ಅಷ್ಟೇ.. ಇಂತಹ ಅವಕಾಶ ಸಿಕ್ಕಿದ್ರೆ ನಾನು ಮಿಸ್ ಮಾಡಿಕೊಳ್ತಿದ್ನಾ…??? ಎಂದು ಹೇಳಿಕೊಂಡಿದ್ದಾರೆ..
ಅಲ್ಲದೇ ದೀವಾ ( ರಮ್ಯಾ) ಅವರಿಗೆ ಮತ್ತೆ ಯಾವಾಗ ಆಕ್ಟ್ ಮಾಡುವರು ಎಂದು ನಾನು ಕೇಳಿದ್ದೇನೆ.. ಆದ್ರೆ ಅವರು ಅದಕ್ಕೆ ನಕ್ಕು ಸುಮ್ಮನಾಗ್ತಾರಷ್ಟೇ.. ಅವರು ಮತ್ತೆ ಆಕ್ಟ್ ಮಾಡಬೇಕು ಅನ್ನೋದು ನನ್ನ ಆಸೆ.. ಪ್ಲೀಸ್ ಮತ್ತೆ ಸಿನಿಮಾದಲ್ಲಿ ಅಭಿನಯಿಸಿ , ‘ಐ ಲವ್ ಯೂ’ ಎಂದಿದ್ದಾರೆ..