ಕಾಜಲ್ ತಾಯಿಯಾಗ್ತಿರುವ ವಿಚಾರ ಅಧಿಕೃತಗೊಳಿಸಿದ ಪತಿ

1 min read

ಕಾಜಲ್ ತಾಯಿಯಾಗ್ತಿರುವ ವಿಚಾರ ಅಧಿಕೃತಗೊಳಿಸಿದ ಪತಿ

ಹೈದರಾಬಾದ್: ಟಾಲಿವುಡ್ ನ ಸ್ಟಾರ್ ನಟಿ ಕಾಜಲ್ ಅಗರ್ ವಾಲ್ ಮದುವೆಯ ನಂತರ ಸಿನಿಮಾರಂಗದಿಂದ ಕೊಂಚ ಅಂತರವನ್ನೇ ಕಾಯ್ದುಕೊಂಡಿದ್ದರು.. ಈ ನಡುವೆ ತಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗ್ತಿರುವ ವಿಚಾರವನ್ನ ಅಧಿಕೃತಗೊಳಿಸಿದ್ದಾರೆ..

ಹೌದು… ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ತಾಯಿ ಆಗುತ್ತಿದ್ದಾರೆ. ಈ ವಿಚಾರವನ್ನು ಅವರ ಪತಿ ಗೌತಮ್ ಕಿಚ್ಲು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತಗೊಳಿಸಿದ್ದಾರೆ..

ನಿನ್ನೆಡೆಗೆ ನೋಡುತ್ತಿದ್ದೇನೆ 2022 ಎಂದು ಬರೆದಿರುವ ಗೌತಮ್, ಕಾಜಲ್ ಅವರ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದ ಕಾಜಲ್, ಗೌತಮ್ ಹೊಸ ವರ್ಷದ ಶುಭಾಷಯವನ್ನು ಕೋರಿದ್ದಾರೆ. ಜೊತೆಗೆ ತಾಯಿಯಾಗುತ್ತಿರುವುದನ್ನು ಬಿಂಬಿಸುವ ಹೊಸ ಫೋಟೋವೊಂದನ್ನೂ ಕಾಜಲ್ ಅಗರ್ವಾಲ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.. ಕಾಜಲ್ ಅಭಿಮಾನಿಗಳು ಖುಷಿಯಿಂದ ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದರು..

ಕಾಜಲ್ ಹಾಗೂ ಗೌತಮ್ 2020ರ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd