ಡಿಕೆಶಿ, ಸಿದ್ದರಾಮಯ್ಯ ಇಬ್ಬರೇ ಪಾದಯಾತ್ರೆ ಮಾಡಿದ್ರೆ ಸಂತೋಷ : ನಾರಾಯಣಗೌಡ
ಮಂಡ್ಯ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೇ ಪಾದಯಾತ್ರೆ ಮಾಡಿದ್ರೆ ಸಂತೋಷ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ಪಾದಯಾತ್ರೆ ನಿರ್ಧಾರ ತೆಗೆದುಕೊಂಡಾಗ ಕೊರೊನಾ ಇರಲಿಲ್ಲ. ಈಗ ಕೊರೊನಾ ಜಾಸ್ತಿಯಾಗಿದೆ, ಪಾದಯಾತ್ರೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಜೊತೆ ಕಾಂಟ್ರವರ್ಸಿ ಮಾಡಿ ಹೆಸರು ಮಾಡಿಕೊಳ್ಳೊದು ತಪ್ಪು. ಕೊರೊನಾ ಕಂಟ್ರೋಲ್ ಮಾಡೋದು ಎಲ್ಲರ ಕರ್ತವ್ಯ. ಕೊರೊನಾ ಹತೋಟಿ ಬಳಿಕ ಪಾದಯಾತ್ರೆ ಮಾಡಲಿ. ಅವರ ರಾಜಕಾರಣ ಬೆಳೆಸಿಕೊಳ್ಳೊಕೆ ಹೀಗೆ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವರು ಕಿಡಿಕಾರಿದರು.
ಇದೇ ವೇಳೆ ಸರ್ಕಾರ ಏನೇ ಮಾಡಿದ್ರು ನಾವು ಪಾದಯಾತ್ರೆ ಮಾಡ್ತೇವೆ ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ಕೊಟ್ಟ ನಾರಾಯಣಗೌಡ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರೇ ಪಾದಯಾತ್ರೆ ಮಾಡಿದ್ರೆ ಸಂತೋಷ ಎಂದರು
ಇನ್ನು ಮೇಕೆದಾಟು ಬಿಜೆಪಿಯ ಕೂಸು. ಬಿಜೆಪಿ ಮೇಕೆದಾಟು ಕಟ್ಟಬೇಕು, ಕುಡಿಯುವ ನೀರಿಗೆ ಅನುಕೂಲ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಇವರನ್ನ ಕಾಯುವ ಅಗತ್ಯ ಇಲ್ಲ, ನಾವು ಮಾಡೇ ಮಾಡ್ತೀವಿ. ರಾಜಕಾರಣವನ್ನ ರಾಜಕಾರಣ ಮಟ್ಟದಲ್ಲಿ ಮಾಡಲಿ. ಸೇವೆ ಮಾಡಿ ರಾಜಕಾರಣದಲ್ಲಿ ಬೆಳೆಯಲಿ. ಕಾಂಟ್ರವರ್ಸಿ ಮಾಡಿ ರಾಜಕಾರಣದಲ್ಲಿ ಬೆಳೆಯೋದು ತಪ್ಪು ಎಂದು ಡಿಕೆಶಿವಕುಮಾರ್ ಗೆ ಟಾಂಗ್ ನೀಡಿದರು.









