ಅದರ ಬಗ್ಗೆ ಪಂತ್ ಜೊತೆ ಮಾತಾಡುತ್ತೇವೆ : ರಾಹುಲ್ ದ್ರಾವಿಡ್
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಸೋತಿದೆ.
ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ ಕ್ಷಣದಲ್ಲಿ ರಿಷಬ್ ಪಂತ್ ಔಟಾದ ರೀತಿ ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಅವರು ಎದುರಿಸಿದ ಮೂರನೇ ಎಸೆತದಲ್ಲಿಯೇ ದೊಡ್ಡ ಹೊಡೆತಕ್ಕೆ ಕೈ ಹಾಕಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಅದು ಅವರ ಸಹಜ ಶೈಲಿಯೇ ಆಗಿದ್ದರೂ ಅವರು ಆಡಿದ ಸಂದರ್ಭ ತಪ್ಪಾಗಿದ್ದು, ಈ ಕುರಿತು ಪಂತ್ ಜತೆ ಮಾತನಾಡುವುದಾಗಿ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
‘ಪಂತ್ಹೇಗೆ ಆಡುತ್ತಾನೆ ಎಂಬುದು ನಮಗೆಲ್ಲರಿಗೂ ಗೊತ್ತು. ಅವರು ಅದೇ ಶೈಲಿಯಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಿದ್ದಾರೆ.
ಆದಾಗ್ಯೂ ಕೆಲವೊಮ್ಮೆ ಸಂದರ್ಭಗಳಿಗೆ ಅನುಗುಣವಾಗಿ ಶಾಟ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ನಾನು ಈ ಬಗ್ಗೆ ಪಂತ್ ಬಳಿ ಮಾತನಾಡುತ್ತೇನೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ.
ಇದರೊಂದಿಗೆ ಮೂರು ಮ್ಯಾಚ್ ಗಳ ಟೆಸ್ಟ್ ಪಂದ್ಯಗಳ ಸರಣಿ 1-1 ಅಂತರದೊಂದಿಗೆ ಡ್ರಾ ಆಗಿದ್ದು, ಮೂರನೇ ಪಂದ್ಯ ಕುತೂಹಲ ಕೆರಳಿಸಿದೆ.








