4 ಇನ್ನಿಂಗ್ಸ್ ಗಳಲ್ಲಿ ಗಳಿಸಿದ್ದು 59 ರನ್.. ಪಂತ್ ಗೆ ಇನ್ನೊಂದು ಚಾನ್ಸ್ ಕೊಡ್ಬೇಕಾ..?
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾವನ್ನು ಏಳು ವಿಕೆಟ್ ಗಳಿಂದ ಸೋಲಿಸಿದೆ. ಇದರೊಂದಿಗೆ ಮೂರು ಟೆಸ್ಟ್‌ಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.
ಹೀಗಾಗಿ ಕೇಪ್ ಟೌನ್ ನಲ್ಲಿ ನಡೆಯುವ ಅಂತಿಮ ಟೆಸ್ಟ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಮೂರನೇ ಟೆಸ್ಟ್ ಪಂದ್ಯ ಗೆದ್ದರೇ ಟೀಂ ಇಂಡಿಯಾ ದಕ್ಷಿಣಾ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಲಿದೆ.
ಹೀಗಾಗಿ ಟೀಂ ಇಂಡಿಯಾ ಸಕಲ ರೀತಿಯಲ್ಲೂ ಸಿದ್ಧತೆ ನಡೆಸಿದೆ.
ಜನವರಿ 11 ರಿಂದ ಕೇಪ್ ಟೌನ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯವಿರಲಿದ್ದಾರೆ. ಹೀಗಾಗಿ ಹನುಮವಿಹಾರಿ ಬೆಂಚ್ ಕಾಯಬೇಕಾಗುತ್ತದೆ.
ಇದಲ್ಲದೇ ಮೂರನೇ ಟೆಸ್ಟ್ ಪಂದ್ಯದಲ್ಲಿ ಇನ್ನೊಂದು ಬದಲಾವಣೆ ಆಗುವ ಸಾಧ್ಯತೆಗಳಿವೆ.
ವಿಕೆಟ್ ಕೀಪರ್ ರಿಷಬ್ ಪಂತ್ ಬದಲಾಗಿ ವೃದ್ಧಿಮಾನ್ ಸಹಾಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಟೀಕೆಗಳನ್ನು ಎದುರಿಸುತ್ತಿರುವ ಪಂತ್ ಗೆ ಕೋಕ್ ಕೊಟ್ಟು, ಸಹಾಗೆ ಚಾನ್ಸ್ ಕೊಡಬೇಕು ಎಂದು ಹಿರಿಯ ಕ್ರಿಕೆಟಿಗರು ಸಲಹೆ ನೀಡಿದ್ದಾರೆ.
ಇನ್ನು ಪ್ರಸಕ್ತ ಸರಣಿಯಲ್ಲಿ ಪಂತ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು 59 ರನ್ ಗಳಿಸಿದ್ದಾರೆ.
ಹೀಗಾಗಿ ಅವರನ್ನ ಬಿಟ್ಟು ಕಿವೀಸ್ ವಿರುದ್ಧದ ಟೆಸ್ಟ್ ನಲ್ಲಿ ಮಿಂಚಿದ ಸಹಾಗೆ ಚಾನ್ಸ್ ಕೊಡುವ ಸಾಧ್ಯತೆಗಳಿವೆ.









