ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಜನಜೀವನ ಕಷ್ಟಕರವಾಗುತ್ತಿದೆ. ಉಷ್ಣಾಂಶ ಹೆಚ್ಚಾದಂತೆ ಜನರು ತಂಪು ನೀಡುವ ಪಾನೀಯಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ವಿಶೇಷವಾಗಿ ಮದ್ಯಪ್ರಿಯರು ತಮ್ಮ ಹಳೆಯ ಆಯ್ಕೆಯಾದ ಹಾರ್ಡ್ ಡ್ರಿಂಕ್ಸ್‌ಗಳನ್ನು ಬದಿಗಿಟ್ಟು, ಚಿಲ್ಲ್ಡ್ ಬಿಯರ್‌ಗಳತ್ತ ಮುಖ ಮಾಡಿದ್ದಾರೆ.ಈ ಪ್ರವೃತ್ತಿಯಿಂದಾಗಿ ರಾಜ್ಯದಾದ್ಯಂತ ಬಿಯರ್ ಮಾರಾಟದಲ್ಲಿ ಸುಮಾರು 50% ರಷ್ಟು ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ನಗರ ಪ್ರದೇಶಗಳಲ್ಲೇ ಅಲ್ಲದೆ, ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿಯೂ ಬಿಯರ್ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಆದರೆ, ಈ ಭಾರೀ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದೇ ಇರುವುದರಿಂದ ಮದ್ಯ ಮಾರಾಟಗಾರರು ಆತಂಕದಲ್ಲಿದ್ದಾರೆ. ಕೆಲವು ಕಡೆಗಳಲ್ಲಿ ಸ್ಟಾಕ್ ಕೊರತೆ ಉಂಟಾಗಿ, ಗ್ರಾಹಕರು ಬೇಕಾದ ಬ್ರಾಂಡ್‌ಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ.
ಇದರಿಂದ ಮುಂದಿನ ದಿನಗಳಲ್ಲಿ ಪೂರೈಕೆ ಸರಿಪಡಿಸುವುದು ಸರ್ಕಾರ ಮತ್ತು ಮದ್ಯ ವಿತರಕರಿಗೆ ದೊಡ್ಡ ಸವಾಲಾಗಬಹುದು ಎಂದು ವ್ಯಾಪಾರ ವಲಯ ಅಭಿಪ್ರಾಯ ವ್ಯಕ್ತಪಡಿಸಿದೆ.








