ಪಾದಯಾತ್ರೆ ನಿಲ್ಲಲ್ಲ.. ಕೋವಿಡ್ ನಿಯಮ ಪಾಲಿಸಿಕೊಂಡೇ ಪಾದಯಾತ್ರೆ : ಸಿದ್ದರಾಮಯ್ಯ
ಬೆಂಗಳೂರು : ನಾವು ಕೋವಿಡ್ -19 ನಿಯಮಗಳನ್ನು ಪಾಲಿಸಿಕೊಂಡೇ ಪಾದಯಾತ್ರೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ನಾಳೆ ಪಾದಯಾತ್ರೆ ಆರಂಭಿಸಿಲಿದೆ.
ಈ ಮಧ್ಯೆ ರಾಜ್ಯ ಸರ್ಕಾರ ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಮನಗರಕ್ಕೆ ನಿಷೇಧಾಜ್ಞೆ ಜಾರಿ ಮಾಡಿದೆ. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾಕೆ ರಾಮನಗರಕ್ಕೆ ಮಾತ್ರ ನಿಷೇಧಾಜ್ಞೆ ಹಾಕಿದ್ದಾರೆ.
ಅದರ ಅರ್ಥ ಏನು ಎಂದು ಪ್ರಶ್ನಿಸಿ, ದುರುದ್ದೇಶ ಸರ್ಕಾರದ್ದು, ನಮ್ಮ ಪಾದಯಾತ್ರೆ ಹತ್ತಿಕ್ಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೇಕೆದಾಟು ಯೋಜನೆ ವಿಳಂಬ ಆಗಿರುವುದು ಬಿಜೆಪಿಯಿಂದ ಎಂದು ದೂರಿದ ಸಿದ್ದರಾಮಯ್ಯ, ನಾವು ಪಾದಯಾತ್ರೆ ಮಾಡುತ್ತೇವೆ.
ನಿಷೇಧಾಜ್ಞೆ ಹಾಕಿದರೆ ಐದೈದು ಜನ ಹೋಗಿ ಪಾದಯಾತ್ರೆ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.








