ಯಶ್ ಮುಂದಿನ ಸಿನಿಮಾ ಯಾವುದು ..?? ಯಾರ ಜೊತೆಗೆ ..?? ಕೊನೆಗೂ ಸಿಕ್ಕಿತು ಉತ್ತರ…!!!
ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ ಶೂಟಿಂಗ್ ಮುಗಿದ ನಂತರ ಯಾವುದೇ ಸಿನಿಮಾ ಮಾಡ್ತಿಲ್ಲ.. ಯಾವ ಸಿನಿಮಾಗೆ ಒಪ್ಪಿದ್ದಾರೆ… ಯಾವ ನಿರ್ದೇಶಕನ ಜೊತೆಗೆ ಸಿನಿಮಾ ಮಾಡಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಅಂತು ಅಭಿಮಾನಿಗಳನ್ನ ಕಾಡ್ತಲೇ ಇದೆ.. ಈ ನಡುವೆ ಯಶ್ ಅವರು ಇತ್ತೀಚೆಗೆ ಈ ಬಗ್ಗೆ ಮಾತನಾಡಿ ಸಿನಿಮಾ ಯಾವಾಗ ಮಾಡುತ್ತೀರ? ಏಕೆ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗಳನ್ನು ನಮ್ಮ ಕುಟುಂಬದವರು ಸಹ ನನ್ನನ್ನು ಕೇಳುವುದಿಲ್ಲ. ಈ ವಿಷಯವದಲ್ಲಿ ನಾನು ನನ್ನ ಅಭಿಮಾನಿಗಳಗಷ್ಟೆ ಉತ್ತರದಾಯಿ. ನನ್ನ ಸಿನಿಮಾವನ್ನು ನನ್ನ ಸಿನಿಮಾವೇ ಬೀಟ್ ಮಾಡಬೇಕು ಆಗ ಮಾತ್ರವೇ ನಟನಾಗಿ ನನಗೂ ಸಮಾಧಾನ ಹಾಗಾಗಿ ಒಳ್ಳೆಯ ಕತೆಯಗಾಗಿ ಹುಡುಕಾಟ ನಡೆಸಿದ್ದೇನೆ ಎಂದಿದ್ದರು.
ಇದೀಗ ಯಶ್ ಗೆ ಅಂತಹ ಸಿನಿಮಾ ,,, ಅಂತಹ ಕಥೆ ಸಿಕ್ಕಂತೆ ಕಾಣ್ತಿದೆ.. ಹೌದು ಯಶ್ ಅವರ ಮುಂದಿನ ಸಿನಿಮಾ ಯಾರ ಜೊತೆಗೆ ಅನ್ನುವುದು ಅಧಿಕೃತವಾಗಿ ಬಹಿರಂಗವಾಗಿದೆ… ಅಂದ್ಹಾಗೆ ಯಶ್ ಅವರ 19 ನೇ ಸಿನಿಮಾಗೆ ನರ್ತನ್ ಆಕ್ಷನ್ ಕಟ್ ಹೇಳ್ತಿದ್ದಾರೆ.. ಯಶ್ ಹುಟ್ಟುಹಬ್ಬದ ದಿನದಂದೇ ಹೊಸ ಸಿನಿಮಾದ ಬಗ್ಗೆ ಘೋಷಣೆ ಹೊರಬಿದ್ದಿದ್ದು, ನಿರ್ದೇಶಕ ನರ್ತನ್, ಯಶ್‌ರ 19ನೇ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ
ಈ ಬಗ್ಗೆ ಟ್ವೀಟ್ಮಾಡಿರುವ ನಿರ್ದೇಶಕ ನರ್ತನ್, ”ಹುಟ್ಟುಹಬ್ಬದ ಶುಭಾಶಯ ಯಶ್ ಸರ್, ನಿಮ್ಮನ್ನು ಸೆಟ್ನಲ್ಲಿ ನೋಡಲು ಕಾತರನಾಗಿದ್ದೇನೆ. ಯಶ್ನಟನೆಯ 19 ನೇ ಸಿನಿಮಾ ‘ಯಶ್19’ ಟೀಸರ್ ಮುಂದಿನ ವರ್ಷ ಜನವರಿ 08 (ಯಶ್ ಹುಟ್ಟುಹಬ್ಬ) ದಂದು ಬಿಡುಗಡೆ ಆಗಲಿದೆ” ಎಂದಿದ್ದಾರೆ. ಹೊಸ ಸಿಸಿನಿಮಾ ಬಗ್ಗೆ ಅಪ್ ಡೇಟ್ ತಿಳಿದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.. ಅಂದ್ಹಾಗೆ ಏಪ್ರಿಲ್ 14 ಕ್ಕೆ ಕೆಜಿಎಫ್ 2 ರಿಲೀಸ್ ಆಗಲಿದೆ.. ಇನ್ನೂ ಕೋವಿಡ್ ಹಾವಳಿಯಿಂದ ರಿಲೀಸ್ ದಿನಾಂಕ ಮುಂದೂಡಿಕೆಯಾಗಬಹುದು ಎನ್ನಲಾಗ್ತಿತ್ತು.. ಆದ್ರೆ ನಿನ್ನೆ ಸಿನಿಮಾ ತಂಡವು ಕೆಜಿಎಫ್ ನ ಹೊಸ ಪೋಸ್ಟರ್ ರಿಲೀಸ್ ಮಾಡಿ , ಕೆಜಿಎಫ್ 2 ಏಪ್ರಿಲ್ 14ಕ್ಕೆ ರಿಲೀಸ್ ಎಂದು ಸ್ಪಷ್ಟಪಡಿಸಿದೆ..
ವಂಚಕ ಸುಕೇಶ್ ಜೊತೆ ಅತಿ ಆಪ್ತವಾಗಿರುವ ಲಂಕಾ ಸುಂದರಿಯ ಮತ್ತೊಂದು ಫೋಟೋ ವೈರಲ್..!








