ADVERTISEMENT
Saturday, September 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

admin by admin
August 1, 2026
in Newsbeat, Sports, ಕ್ರೀಡೆ
neeraj-chopra-javelin-success-story-kannada Focus Keyword

neeraj-chopra-javelin-success-story-kannada Focus Keyword

Share on FacebookShare on TwitterShare on WhatsappShare on Telegram

800 ಗ್ರಾಂ ತೂಕ.. ಎಂಟು ಅಡಿ 10 ಇಂಚಿನ ಜಾವೆಲಿನ್. ಫಿನ್ನಿಷ್ ಗ್ರಿಪ್‍ನ ಟೆಕ್ನಿಕ್. ಶಕ್ತಿಯ ಜೊತೆಗೆ ಯುಕ್ತಿಯ ಅಪೂರ್ವ ಸಂಗಮ. ಬಿಲ್ಲು ಬಾಣದಂತೆ ಬಾಗುವ ದೇಹ..!
ಅಬ್ಬಾ…ಈ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ..!
====

ಈಟಿಯ ಹಿಡಿತದ ಮೇಲೆ ಕೈ ಬೆರಳುಗಳ ಸ್ಪರ್ಶ. ಒಂದು ಕೈಯಲ್ಲಿ ಅನುಭವ ಮತ್ತು ಪರಿಶ್ರಮದ ಶಕ್ತಿ. ಇನ್ನೊಂದು ಕೈಯಲ್ಲಿ ನಿಖರವಾದ ಗುರಿ. ದೂರದ ಗೆರೆಯತ್ತ ಕಣ್ಣುಗಳ ತೀಕ್ಷ್ಣ ನೋಟ. ಏಕಾಗ್ರತೆಯ ಒಂದು ದೀರ್ಘ ಉಸಿರು…!

Related posts

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

September 19, 2026
ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

September 19, 2026

ರನ್ ವೇನಲ್ಲಿ ಟೇಕ್ ಆಪ್ ಆಗುವ ವಿಮಾನದಂತೆ, 15-15 ಹೆಜ್ಜೆಗಳ ರನ್‍ಅಪ್. ದೇಹದ ಪ್ರತಿ ನರನಾಡಿಗಳಲ್ಲೂ ಮಿಂಚಿನ ಸಂಚಾರ. ಎರಡು ಅಥವಾ ಮೂರು ಕ್ರಾಸ್ ಓವರ್ ಸ್ಟೆಪ್ಸ್. ಈಟಿ ಎಸೆಯುವ ಮುನ್ನ ಭುಜದ ಚಲನೆಯ ಮೇಲೊಂದು ಅದ್ಭುತವಾದ ಲಯ. ದೇಹವನ್ನು ಬಿಲ್ಲಿನಂತೆ ಬಾಗಿ ಎಸೆಯುವ ಭಂಗಿ. ತನ್ನ ಎಲ್ಲಾ ಬಲ ಪ್ರಯೋಗಿಸಿ ಈಟಿಯನ್ನು ಗಾಳಿಗೆ ಒಪ್ಪಿಸಿದಾಗ ಆತನಿಂದ ಹೊರಬರೋದು ಒಂದು ಆವೇಶದ ಉದ್ಗಾರ..!

ಅಷ್ಟೇ….!

ಅವನಿಗೆ ಬೇಕಾಗಿದ್ದು ಅಷ್ಟೇ. ಪರ್ಫೆಕ್ಟ್ ಎಸೆತವಾಗಿದ್ರೆ, ಆತ ನೆಲಕ್ಕೆ ಬಿದ್ರೂ ಹಿಂತಿರುಗಿ ನೋಡಲ್ಲ. ತಾನು ಎಸೆದ ಈಟಿ, ಗಾಳಿಯನ್ನು ಸೀಳಿ ಹೋಗುವುದನ್ನು ನೋಡಲು ಕೂಡ ಇಷ್ಟಪಡಲ್ಲ. ಎಷ್ಟು ದೂರದಲ್ಲಿ ಈಟಿ ಭೂಸ್ಪರ್ಶ ಆಗಿದೆ ಎಂಬುದು ಅವನಿಗೆ ಬೇಕಿಲ್ಲ. ಆ ಕ್ಷಣದಲ್ಲಿ ಅವನು ಫಲಿತಾಂಶದ ಬಗ್ಗೆ ಯೋಚನೆಯನ್ನೂ ಮಾಡಲ್ಲ.

ಯಾಕಂದ್ರೆ ಆ ಎಸೆತದ ಮೇಲೆ ಅವನಿಗೆ ಅಚಲವಾದ ನಂಬಿಕೆ ಇರುತ್ತೆ. ತಾನು ಎಸೆದಿರುವುದು ಅತ್ಯುತ್ತಮ ಕ್ಲೀನ್ ಥ್ರೋ ಎಂದು ಮನಸ್ಸು ಆ ಕ್ಷಣದಲ್ಲೇ ಹೇಳುತ್ತದೆ. ಹೀಗಾಗಿಯೇ ಈಟಿ ಗಾಳಿಯಲ್ಲಿ ತೇಲಾಡುತ್ತಿರುವಾಗಲೇ ಎರಡು ಕೈ ಎತ್ತಿ ಸಂಭ್ರಮಿಸುತ್ತಾನೆ. ಗ್ಲಾಸ್ಗೋ ಅಂಗಣದಲ್ಲಿ ಆಗಿದ್ದು ಅದೇ. ಎರಡನೇ ಯತ್ನದಲ್ಲಿ ಈಟಿ ಅಂಗಣದ ಮೇಲೆ ಗುರುತು ಮೂಡಿಸಿದಾಗ ಆತನ ಕೊರಳಿಗೆ ಬೆಳ್ಳಿ ಪದಕವೂ ಒಲಿದು ಬಂತು.

ಇದು ಆತನ ಆತ್ಮವಿಶ್ವಾಸದ ಕ್ಷಣವಾಗಿತ್ತು. ಅನುಭವದ ಉತ್ತರವಾಗಿತ್ತು. ಇನ್ನಷ್ಟು ಪಕ್ವತೆ ಪಡೆದುಕೊಳ್ಳಲು ಕಲಿತ ಪಾಠವಾಗಿತ್ತು. ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿತ್ತು.

ನೀರಜ್ ಚೋಪ್ರಾ.

ಇದು ಗ್ಲಾಸ್ಗೋ ಅಂಗಣದ ಜಾವೆಲಿನ್ ಅಖಾಡದಲ್ಲಿ ನೀರಜ್, ಈಟಿಯ ಜೊತೆ ನಡೆಸಿದ್ದ ಮೌನ ಸಂಭಾಷಣೆಯ ಒಂದು ಝಲಕ್..!

ನೀರಜ್‍ಗೆ ಪದಕ ಗೆಲ್ಲುವುದು ಮುಖ್ಯವಲ್ಲ. ಸ್ಥಿರ ಪ್ರದರ್ಶನ ನೀಡುವುದೇ ಆತನ ವಿಶೇಷತೆ. ಕೇವಲ ಒಂದೇ ಒಂದು ಅದ್ಭುತ ಎಸೆತ ಫಲಿತಾಂಶವನ್ನೇ ಬಡಮೇಲು ಮಾಡಬಹುದು. ಆದ್ರೆ ಅಂತಹ ಅಮೋಘ ಎಸೆತ ಎಸೆಯಲು ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು.

ಹಾಗಾಗಿ ನೀರಜ್, ಫಲಿತಾಂಶಕ್ಕಿಂತ ಸ್ಥಿರ ಪ್ರದರ್ಶನದ ಮೇಲೆ ಹೆಚ್ಚು ನಂಬಿಕೆಯನ್ನಿಟ್ಟುಕೊಂಡಿದ್ದಾನೆ. ಇದೀಗ ಗಾಯದಿಂದ ಚೇತರಿಸಿಕೊಂಡು ಪದಕ ಗೆದ್ದಿರುವುದು ಆತನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಚಿನ್ನ ಗೆದ್ದ ಲಂಕಾದ ರುಮೇಶ್‍ಗೆ ನೀರಜ್ ಪ್ರೇರಣೆ..!

ನೀರಜ್, ವಿಶ್ವದ ಚಾಂಪಿಯನ್ ಈಟಿ ಎಸೆತಗಾರ. ಅಷ್ಟೇ ಅಲ್ಲ, ಸ್ನೇಹ – ಗೌರವಕ್ಕೆ ಮತ್ತೊಂದು ಹೆಸರು ಕೂಡ. ತನ್ನ ಜೊತೆ ಅಖಾಡಕ್ಕಿಳಿಯುವ ಅಥ್ಲೀಟ್‍ಗಳನ್ನು ಪ್ರತಿಸ್ಪರ್ಧಿಗಳಂತೆ ನೀರಜ್ ನೋಡುವುದೇ ಇಲ್ಲ. ಪದಕದ ರೇಸ್‍ನಲ್ಲಿದ್ರೂ ಅವರ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡುವ ಒಬ್ಬ ಆಪ್ತ ಗೆಳೆಯ.

ಇತ್ತೀಚಿನ ವರ್ಷಗಳಲ್ಲಿ ಭಾರತ, ಪಾಕ್ ಮತ್ತು ಲಂಕಾದ ಜಾವೆಲಿನ್ ಎಸೆತಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿಂದೆ ಯೂರೋಪ್‍ನವರು ಈಟಿ ಎಸೆತದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ರು. ಆದ್ರೆ ಈಗ ಏಷ್ಯಾದ ಹುಡುಗರು ಮೇಲುಗೈ ಸಾಧಿಸುತ್ತಿದ್ದಾರೆ. ನೀರಜ್ ಚೋಪ್ರಾ, ಪಾಕ್‍ನ ಅರ್ಷದ್ ನದೀಮ್ ಹಾಗೂ ಲಂಕಾದ ರುಮೇಶ್ ಜಾಗತಿಕ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ನೀರಜ್‍ಗಿಂತಲೂ ಒಂದು ಹೆಜ್ಜೆ ಮುಂದೆ ಸಾಗಿದ್ದ ಲಂಕಾದ ರುಮೇಶ್ ಪತಿರಾಜೆ ಚಿನ್ನದ ನಗೆ ಬೀರಿದ್ದಾನೆ. ಆದ್ರೆ ಆ ಚಿನ್ನದ ನಗುವಿನ ಹಿಂದೆ ಇದ್ದಿದ್ದು ಇದೇ ನೀರಜ್ ಚೋಪ್ರಾನ ಪ್ರೋತ್ಸಾಹ. ಇದು ಅಚ್ಚರಿಯಾದ್ರೂ ಸತ್ಯ.

ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಕ್ರೀಡಾಕೂಟದ ಜಾವೆಲಿನ್ ಸ್ಪರ್ಧೆಯಲಿ,್ಲ ರುಮೇಶ್ 86.50 ಮೀಟರ್ ದೂರ ಎಸೆದು ವಿಶ್ವ ಚಾಂಪಿಯನ್‍ಷಿಪ್‍ಗೆ ಅರ್ಹತೆ ಪಡೆದುಕೊಂಡಿದ್ದ. ಇದನ್ನು ಗಮನಿಸಿದ್ದ ನೀರಜ್, ಬೆಂಗಳೂರಿನಲ್ಲಿ ನಡೆದ ನೀರಜ್ ಚೋಪ್ರಾ ಕ್ಲಾಸಿಕ್ ನಲ್ಲಿ ಸ್ಪರ್ಧಿಸುವಂತೆ ರುಮೇಶ್‍ಗೆ ಆಹ್ವಾನ ನೀಡಿದ್ದ.

ಚೋಪ್ರಾ ಆಹ್ವಾನದಂತೆ ರುಮೇಶ್ ಸ್ಪರ್ಧೆಯಲ್ಲಿ ಭಾಗವಹಿಸಿದ್ರೂ ಮೊದಲ ಎರಡು ಪ್ರಯತ್ನಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ. ಇದನ್ನು ನೋಡಿದ್ದ ನೀರಜ್, ರುಮೇಶ್ ಬಳಿ ಹೋಗಿ ನೀನು ಇದಕ್ಕಿಂತಲೂ ಉತ್ತಮವಾಗಿ ಎಸೆಯಬಲ್ಲೆ ಎಂದು ಹೇಳಿದ್ದ. ಇದು ರುಮೇಶ್‍ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಅಲ್ಲದೆ ನೀರಜ್ ಜೊತೆ ಪೋಡಿಯಂ ಹತ್ತಿ ಪದಕ ಕೂಡ ಗೆದ್ದುಕೊಂಡಿದ್ದ.

ನಂತರ ಮಾಧ್ಯಮಗಳ ಮುಂದೆ ಮಾತನಾಡುವಾಗ ರುಮೇಶ್ ಭಾಷೆಯ ಸಮಸ್ಯೆಯಿಂದ ಹಿಂದೇಟು ಹಾಕುತ್ತಿದ್ದ. ಆಗ ರುಮೇಶ್ ಸಹಾಯಕ್ಕೆ ಬಂದ ನೀರಜ್, ಎಷ್ಟು ಸಾಧ್ಯವೋ ಅಷ್ಟು ಇಂಗ್ಲಿಷ್‍ನಲ್ಲಿ ಮಾತನಾಡು. ನಾನು ಹೀಗೆ ಕಲಿತಿರುವುದು. ಪೋಡಿಯಂ ಮೇಲೆ ಮುಂದಿನ ದಿನಗಳಲ್ಲಿ ನೀನು ನಿಲ್ಲುತ್ತಿಯಾ. ಹೆದರಬೇಡ. ಯಾವುದೇ ಹಿಂಜರಿಕೆ ಬೇಡ. ಧೈರ್ಯವಾಗಿರು ಎಂದು ಚೋಪ್ರಾ ಹೇಳಿರುವುದನ್ನು ರುಮೇಶ್ ಈಗಲೂ ನೆನಪಿಸಿಕೊಳ್ಳುತ್ತಾನೆ.

ಪಾಕ್‍ನ ಅರ್ಷದ್ ನದೀಮ್‍ಗೆ ನೀರಜ್ ನೈತಿಕ ಬೆಂಬಲ..!

ಇನ್ನು ನೆರೆಯ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್‍ಗೂ ಪರೋಕ್ಷವಾಗಿ ನೀರಜ್‍ಗೆ ನೈತಿಕ ಬೆಂಬಲ ನೀಡಿದ್ದಾನೆ. ವೈರಿ ರಾಷ್ಟ್ರದ ಸ್ಪರ್ಧಿಯಾದ್ರೂ ಪ್ರತಿಭೆ, ಸಾಮಥ್ರ್ಯಕ್ಕೆ ಗೌರವ ನೀಡಿರುವುದು ನೀರಜ್ ಚೋಪ್ರಾನ ದೊಡ್ಡತನ.

ಉತ್ತಮ ಜಾವೆಲಿನ್ ಖರೀದಿಸಲು ನದೀಮ್‍ಗೆ ಆರ್ಥಿಕ ಸಮಸ್ಯೆ ಇದೆ ಎಂಬ ಸುದ್ದಿ ಕೇಳಿದ ತಕ್ಷಣ ನೀರಜ್ ಮೌನವಾಗಿರಲಿಲ್ಲ. ನದೀಮ್ ಅತ್ಯುತ್ತಮ ಜಾವೆಲಿನ್ ಎಸೆತಗಾರ. ಅವನಿಗೆ ಪಾಕ್ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದ. ಅಷ್ಟೇ ಅಲ್ಲ, ಜಾವೆಲಿನ್ ತಯಾರಿಕಾ ಸಂಸ್ಥೆಗಳು ಕೂಡ ನದೀಮ್‍ಗೆ ಪ್ರಾಯೋಜಕತ್ವ ನೀಡಲು ಮುಂದೆ ಬರಬೇಕು ಎಂದು ಹೇಳಿದ್ದ.

ನೀರಜ್‍ನಂತಹ ಚಾಂಪಿಯನ್‍ಗೆ ಎದುರಾಳಿಯನ್ನು ಸೋಲಿಸುವುದು ದೊಡ್ಡ ವಿಷಯವೇನೂ ಅಲ್ಲ. ಆದ್ರೆ ಪ್ರತಿಸ್ಪರ್ಧಿಯೂ ಉತ್ತಮ ಪ್ರದರ್ಶನ ನೀಡಲಿ ಎಂದು ಬಯಸುವ ಗುಣ ಆತನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ

ಹೌದು, ನೀರಜ್ ಕೇವಲ ಭಾರತೀಯ ಚಾಂಪಿಯನ್ ಮಾತ್ರವಲ್ಲ. ಜಾಗತಿಕ ಕ್ರೀಡೆಯ ನಿಜವಾದ ರಾಯಭಾರಿ..! ಕಲ್ಮಶವಿಲ್ಲದ ಮನಸ್ಸಿನಿಂದ ರುಮೇಶ್‍ಗೆ ಪ್ರೋತ್ಸಾಹ ನೀಡಿ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆಲ್ಲುವಂತೆ ಆತ್ಮವಿಶ್ವಾಸ ಮೂಡಿಸಿದ್ದ್ದ. ಹಾಗೇ ಅರ್ಷದ್ ನದೀಮ್‍ಗೆ ನೈತಿಕ ಬೆಂಬಲ ನೀಡಿ ಪ್ಯಾರಿಸ್ ಒಲಿಂಪಿಕ್ಸ್‍ನಲ್ಲಿ ಬಂಗಾರ ಗೆಲ್ಲುವಂತೆ ಮಾಡಿದ್ದ.

ಬೊಜ್ಜು ಹುಡುಗನ ಕೈಗೆ ಈಟಿ ಬಂದಿದ್ದು ಹೇಗೆ..?

ಅಂದ ಹಾಗೇ, ನೀರಜ್ ಚೋಪ್ರಾನ ಈ ಸಾಧನೆಯ ಮೆರವಣಿಗೆಯ ಹಿಂದೆ ಅಪಾರವಾದ ಶ್ರಮವಿದೆ. ಅಪಮಾನಗಳ ಕೋಪವಿದೆ. ಬೊಜ್ಜು ಹುಡುಗ ಅಂತ ಹೀಯಾಳಿಸಿದಾಗ ಕಣ್ಣೀರು ಸುರಿಸಿದ್ದು ಇದೆ. 11ರ ಹರೆಯದಲ್ಲೇ ವಯಸ್ಸಿಗೂ ಮೀರಿದ ತೂಕವಿದ್ದ ನೀರಜ್, ತನ್ನ ದೇಹದ ಬೊಜ್ಜು ಕರಗಿಸಲು ಪಾಣಿಪತ್‍ನಲ್ಲಿ ಜಿಮ್‍ಗೆ ಸೇರಿಕೊಂಡಿದ್ದ. ಆಕಸ್ಮಿಕವಾಗಿ ಒಂದು ದಿನ ಚೋಪ್ರಾ, ಪಾಣಿಪತ್ ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಭೇಟಿ ಕೊಟ್ಟಿದ್ದ.

ಆಗ ಜಾವೇಲಿನ್ ಎಸೆತಗಾರ ಜೈವೀರ್ ಚೌಧರಿ ಅವರ ಕಣ್ಣಿಗೆ ಬಿದ್ದ. ಯಾವುದೇ ಜಾವೆಲಿನ್ ಎಸೆತದ ತರಬೇತಿ ಇಲ್ಲದ ನೀರಜ್ 40 ಮೀಟರ್ ದೂರ ಎಸೆದಾಗ ಈ ಹುಡುಗನಲ್ಲಿ ಪ್ರತಿಭೆ ಇದೆ ಅಂತ ಜೈವೀರ್ ಚೌಧರಿಗೆ ಅನ್ನಿಸಿತ್ತು. ನಂತರ ಬೊಜ್ಜು ಹುಡುಗನ ಕೈಗೆ ಬಂದಿದ್ದು ಈಟಿ. ನಂತರ ಹಿಂತಿರುಗಿ ನೋಡಲೇ ಇಲ್ಲ. ತನ್ನನ್ನು ಹೀಯಾಳಿಸಿ ಅಪಮಾನ ಮಾಡಿದವರಿಗೆ ಈಟಿಯಿಂದ ಸಾಧನೆ ಮಾಡಿ ಚುಚ್ಚುತ್ತಿದ್ದಾನೆ.

ಅದಕ್ಕೆ ಅನ್ನೋದು ನೀರಜ್ ಚೋಪ್ರಾ ಅಂದ್ರೆ ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರು. ನೀನು ಯಾವತ್ತಿಗೂ ನೀ..ರಾಜನೇ…!

ಸನತ್ ರೈ
saakshatv.com

#NeerajChopra #Javelin #CommonwealthGames #RumeshPathirage #ArshadNadeem #Athletics #SanathRai#ನೀರಜ್_ಚೋಪ್ರಾ #ಜಾವೆಲಿನ್ #ಕಾಮನ್‌ವೆಲ್ತ್_ಗೇಮ್ಸ್ #ರುಮೇಶ್_ಪತಿರಾಜೆ #ಅರ್ಷದ್ ನದೀಮ್

ShareTweetSendShare
Join us on:

Related Posts

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

by Shwetha
September 19, 2026
0

ನಂದಿಗ್ರಾಮ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರ ನಂದಿಗ್ರಾಮದ ಉಪಚುನಾವಣೆಯಲ್ಲಿ ಈಗ ಅನಿರೀಕ್ಷಿತ ರಾಜಕೀಯ ತಿರುವು ಕಂಡುಬಂದಿದೆ. ತನ್ನ ಬಣದ ಅಭ್ಯರ್ಥಿಯೇ ಕಣದಿಂದ ಹಿಂದೆ ಸರಿದು ಆಘಾತ ನೀಡಿದ...

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

by Shwetha
September 19, 2026
0

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಬರೋಬ್ಬರಿ ₹3...

ಕರ್ನಾಟಕದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೂ ಸಂಪುಟದ ಕ್ರಮ

ಕರ್ನಾಟಕದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೂ ಸಂಪುಟದ ಕ್ರಮ

by Shwetha
September 19, 2026
0

ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್...

ಮೃತದೇಹದ ಬಳಿ ರೈಲು ಟಿಕೆಟ್ ಸಿಗಲಿಲ್ಲ ಎಂದ ಮಾತ್ರಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾನೆ ಎನ್ನಲಾಗದು: ಹೈಕೋರ್ಟ್

ಮೃತದೇಹದ ಬಳಿ ರೈಲು ಟಿಕೆಟ್ ಸಿಗಲಿಲ್ಲ ಎಂದ ಮಾತ್ರಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾನೆ ಎನ್ನಲಾಗದು: ಹೈಕೋರ್ಟ್

by Shwetha
September 19, 2026
0

ರೈಲು ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕನ ಮೃತದೇಹದ ಬಳಿ ಪ್ರಯಾಣದ ಟಿಕೆಟ್ ಪತ್ತೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಆತ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು...

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

by Shwetha
September 19, 2026
0

ಬೆಂಗಳೂರು: ರಾಜ್ಯದಲ್ಲಿ 'ವಂದೇ ಮಾತರಂ' ಗೀತೆಯ ಗಾಯನ ಈಗ ಸರ್ಕಾರ ಮತ್ತು ಹಿಂದುತ್ವನಿಷ್ಠ ನಾಯಕರ ನಡುವಿನ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ. ವಂದೇ ಮಾತರಂ ಗೀತೆಯ ಕೇವಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram